ವೈರಲ್ ನ್ಯೂಸ್

ಡಿಆರ್‌ಡಿಒ ಸಿದ್ಧಪಡಿಸಿತ್ತು ಚಾಲಕ ರಹಿತ ವಿಮಾನ..! ಹಾರಾಟದ ವೇಳೆ ಅತ್ಯಾಧುನಿಕ ವಿಮಾನ ರೈತರ ಜಮೀನಿನಲ್ಲಿ ಪತನ ! ಮುಂದೇನಾಯ್ತು?

185

ನ್ಯೂಸ್ ನಾಟೌಟ್ : ಡಿಆರ್‌ಡಿಒ ಸೆಂಟರ್‌ನಲ್ಲಿ ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿ ಪಡಿಸಿದ ಡ್ರೋನ್‌ ಮಾದರಿಯ ಚಾಲಕ ರಹಿತ ತಪಸ್‌ ವಿಮಾನ ಚಿತ್ರದುರ್ಗದ ವದ್ದಿಕೆರೆ ಗ್ರಾಮದ ರೈತರ ಜಮೀನಿನಲ್ಲಿ ಪತನಗೊಂಡಿದೆ.

ವದ್ದಿಕೆರೆ ಬಳಿ ಚಾಲಕ ರಹಿತ ತಪಸ್ ವಿಮಾನ ಪತನಗೊಂಡಿದ್ದು, ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವದ್ದಿಕೆರೆ ಗ್ರಾಮದಲ್ಲಿ ಘಟನೆ ನಡೆದಿದೆ.
ಚಳ್ಳಕೆರೆ ತಾಲೂಕಿನ ಡಿಆರ್ ಡಿಒ ಸಂಸ್ಥೆಯು ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದ ಡ್ರೋಣ್ ಮಾದರಿ ವಿಮಾನ ನಿಯಂತ್ರಣ ತಪ್ಪಿ ವದ್ದಿಕೆರೆ ಬಳಿಯ ಜಮೀನಿನಲ್ಲಿ ಬಿದ್ದಿದೆ.

ಇನ್ನು ಡಿಆರ್‌ಡಿಒ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇದರ ತಾಂತ್ರಿಕ ವೈಫಲ್ಯ ಅಥವಾ ಹವಾಮಾನದ ಕಾರಣದಿಂದ ಹೀಗಾಗಿದೆಯೋ ಎಂಬ ಬಗ್ಗೆ ತನಿಖೆಯ ಬಳಿಕವಷ್ಟೇ ತಿಳಿಯಬೇಕಿದೆ.

See also  ಆದಷ್ಟು ಬೇಗ ಅತ್ತೆಯ ಉಸಿರು ನಿಲ್ಲಲಿ ಎಂದು 50 ರೂಪಾಯಿ ನೋಟಿನ ಮೇಲೆ ಬರೆದು ಹುಂಡಿಗೆ ಹಾಕಿದ ಸೊಸೆ..! ಸೊಸೆ ಬರೆದ ವಿಚಿತ್ರ ಸಾಲುಗಳು ಈಗ ವೈರಲ್
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget