ಕರಾವಳಿಕೊಡಗುರಾಜ್ಯಸುಳ್ಯ

ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ 2 ಲಕ್ಷ ರೂ. ನೀಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ, ಡಿಡಿ ಮೂಲಕ ಹಸ್ತಾಂತರ

239

ನ್ಯೂಸ್ ನಾಟೌಟ್: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅಜ್ಜಾವರ ವಲಯದ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವಕ್ಕೆ ಕ್ಷೇತ್ರದ ವತಿಯಿಂದ 2 ಲಕ್ಷ ರೂ. ಸಹಾಯಧನ ನೀಡಿದ್ದಾರೆ. ಸುಳ್ಯ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ರಿಜಿಸ್ಟರ್ಡ್ ಯೋಜನಾಧಿಕಾರಿ ಮಾಧವ ಗೌಡ ಅವರು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಸದಾನಂದ ಮಾವಂಜಿ ಅವರಿಗೆ 2 ಲಕ್ಷ ಮೊತ್ತದ ಡಿಡಿ ಯನ್ನು ಹಸ್ತಾಂತರಿಸಿದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವಲಯ ಅಧ್ಯಕ್ಷ ಶಿವಪ್ರಕಾಶ್ ಅಡ್ಪಂಗಾಯ, ತಾಲೂಕು ಪ್ರಗತಿ ಬಂದು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಅಜ್ಜಾವರ ವಲಯದ ಮೇಲ್ವಿಚಾರಕಿ ವಿಶಾಲ ಮಂಡೆಕೋಲು, ಶೌರ್ಯ ವಿಪತ್ತು ಘಟಕದ ಸದಸ್ಯರಾದ ಅನಿಲ್ ತೋಟಪ್ಪಡಿ ,ಪ್ರಿತೇಶ್, ಸುಪ್ರೀತ್, ಒಕ್ಕೂಟದ ಉಪಾಧ್ಯಕ್ಷೆ ಮೋಹಿನಿ, ದೇವಸ್ಥಾನದ ಆಡಳಿತ ಮತ್ತು ಜೀರ್ಣೋದ್ಧಾರ ಸಮಿತಿಯ ಸದಸ್ಯರಾದ ರಾಮಚಂದ್ರ ಮಾಸ್ಟರ್, ಕೃಷ್ಣಪ್ರಸಾದ್ ಭಟ್, ಪುತ್ತು ಮಾಸ್ಟರ್ ಮೂರೂರು, ಚಂದ್ರಶೇಖರ್ ಕೆನಾಜೆ, ನಾರಾಯಣ ಗೌಡ ಉಗ್ರಾಣಿ ಮನೆ, ಬಯಲುವಾರು ಸಮಿತಿಯ ಸದಸ್ಯರಾದ ಮೇದಪ್ಪ ಗೌಡ ಬೋಳ ಗಲ್ಲು, ಪುಷ್ಪ , ಯತೀಶ್ ಬೋಳಗಲ್ಲು, ಕೃತಕ ಗರ್ಭಧಾರಣೆ ಪ್ರತಿನಿಧಿಯಾದ ಯತೀಶ್ ,ಸ್ಥಳೀಯ ಸೇವಾ ಪ್ರತಿನಿಧಿಯಾದ ವೇದಾವತಿ ಮತ್ತು ಸುನಿತಾ ಉಪಸ್ಥಿತರಿದ್ದರು.

Click 👇

https://newsnotout.com/2024/05/kodagu-rashmika-mandana-narendra-modi-atal-bridge
https://newsnotout.com/2024/05/temple-case-at-chennai-and-issue

   

https://newsnotout.com/2024/05/anjali-nomore-issue-and-accused-arrested
See also  ಬೆಳ್ಳಾರೆ: 1,300 ವರ್ಷಗಳ ಇತಿಹಾಸವಿರುವ ರಾಜರಾಜೇಶ್ವರಿ ದೇವಸ್ಥಾನದ ಕುರುಹು ಅಧ್ಯಯನಕ್ಕೆ ಸಿದ್ಧತೆ, 'VLOG WITH ಹೇಮಂತ್ ಸಂಪಾಜೆ' ವಿಶೇಷ ಕಾರ್ಯಕ್ರಮ ಬೆನ್ನಲ್ಲೇ ಸ್ಥಳಕ್ಕಾಗಮಿಸಿದ ಇತಿಹಾಸ ತಜ್ಞರು
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget