ಕರಾವಳಿಕ್ರೈಂರಾಜಕೀಯ

ಡಾ.ಸೂರಜ್ ರೇವಣ್ಣ ವಿರುದ್ಧ ಮತ್ತೊಬ್ಬ ಯುವಕನಿಂದ ದೂರು, ಮತ್ತೊಂದು ಎಫ್.ಐ.ಆರ್ ದಾಖಲು..! ಅಂದು ಸೂರಜ್‌ ಪರ ದೂರು ಕೊಟ್ಟಿದ್ದವನೇ ಇಂದು ತಿರುಗಿಬಿದ್ದದೇಗೆ..?

ನ್ಯೂಸ್ ನಾಟೌಟ್: ಅಸಹಜ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ವಿಧಾನಪರಿಷತ್ ಸದಸ್ಯ ಡಾ ಸೂರಜ್ ರೇವಣ್ಣ (Suraj Revanna) ವಿರುದ್ಧ ಮತ್ತೊಂದು ಎಫ್ಐಆರ್ (FIR) ದಾಖಲಾಗಿದೆ.

ಜೂ.21 ರಂದು ಡಾ.ಸೂರಜ್‌ ಪರವಾಗಿ ದೂರು ಕೊಟ್ಟಿದ್ದ ಹೊಳೆನರಸೀಪುರ ಮೂಲದ ಯುವಕನೇ ಈಗ ಸೂರಜ್‌ ವಿರುದ್ಧವಾಗಿ ದೂರು ನೀಡಿದ್ದಾನೆ ಎಂದು ವರದಿ ತಿಳಿಸಿದೆ. ಕೆಲ ವರ್ಷಗಳ ಹಿಂದೆ ತನ್ನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲೇ ಇಂದು(ಜೂ.26) ದೂರು ನೀಡಿದ್ದಾನೆ. ಸಂತ್ರಸ್ತನ ದೂರನ್ನು ಆಧಾರಿಸಿ ಸೂರಜ್‌ ವಿರುದ್ಧ ಐಪಿಸಿ ಸೆಕ್ಷೆನ್ 377, 342, 506 ಅಡಿ ಎಫ್‌ಐಆರ್‌ ದಾಖಲಾಗಿದೆ.

ಅರಕಲಗೂಡು ಮೂಲದ ಯುವಕನ ವಿರುದ್ಧ ದೂರು ನೀಡಲು ಸೂರಜ್ ಒತ್ತಡ ಹಾಕಿದ್ದರು. ಕೊರೊನಾ (Covid) ಸಮಯದಲ್ಲಿ ತನ್ನ ಮೇಲೆ ಕೂಡ ಇದೇ ರೀತಿಯ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯವನ್ನು ಸೂರಜ್‌ ಎಸಗಿದ್ದರು ಎಂದು ಸಂತ್ರಸ್ತ ದೂರಿನಲ್ಲಿ ಉಲ್ಲೇಖಿಸಿದ್ದಾನೆ ಎನ್ನಲಾಗಿದೆ.

Click 👇

https://newsnotout.com/2024/06/darshan-2-us-made-gun-and-police-wrote-latter-for-surrender-kannada-news
https://newsnotout.com/2024/06/ksrtc-govt-bus-ticket-price-hike-kannada-news-petrol-diesel-and-milk-price-also-increased
https://newsnotout.com/2024/06/milk-price-hike-dcm-dk-shivakumar-statement-on-that-kannada-news

Related posts

ಮಂಗಳೂರಲ್ಲಿ ಸರಣಿ ಅಪಘಾತ; ಓರ್ವನಿಗೆ ಗಂಭೀರ ಗಾಯ

ಪೆರಾಜೆ: ವಿಷ ಸೇವಿಸಿ ಯುವಕ ಆತ್ಮಹತ್ಯೆಗೆ ಯತ್ನ, ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ

ಮಂಗಳೂರಿನ ರೈಲ್ವೆ ಸ್ಟೇಷನ್ ಹೊರಗೆ ರಿಕ್ಷಾ ಚಾಲಕರು ಮತ್ತು ಪ್ರಯಾಣಿಕರ ನಡುವೆ ಹೊಡೆದಾಟ..! ಅಷ್ಟಕ್ಕೂ ಅಲ್ಲಿ ನಡೆದದ್ದೇನು..?