ಬೆಂಗಳೂರುಸುಳ್ಯ

ಸುಳ್ಯ: ಭಾರತೀಯ ವೈದ್ಯಕೀಯ ವ್ಯವಸ್ಥೆ ವಿಭಾಗದ ಸದಸ್ಯರಾಗಿ ಕೆವಿಜಿ ಆಯುರ್ವೇದ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಸ್ಮಿತಾ ವಿನಯರಾಜ್ ಮಡ್ತಿಲ ನೇಮಕ

165

ನ್ಯೂಸ್ ನಾಟೌಟ್ : ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯ ಬೆಂಗಳೂರು ಇದರ ಭಾರತೀಯ ವೈದ್ಯಕೀಯ ವ್ಯವಸ್ಥೆ ವಿಭಾಗದ ಸದಸ್ಯರಾಗಿ ಡಾ. ಸ್ಮಿತಾ ವಿನಯರಾಜ್ ಮಡ್ತಿಲ ನೇಮಕವಾಗಿದ್ದಾರೆ.

ಸುಳ್ಯದ ಕೆ.ವಿ.ಜಿ.ಆಯುರ್ವೇದ ಮಹಾ ವಿದ್ಯಾಲಯದ ಪಂಚ ಕರ್ಮ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಸ್ಮಿತಾ ವಿನಯರಾಜ್ ಮಡ್ತಿಲ ಅವರನ್ನು ವಿ.ವಿ ಭಾರತೀಯ ವೈದ್ಯಕೀಯ ವ್ಯವಸ್ಥೆ ವಿಭಾಗದ ಸದಸ್ಯರಾಗಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿ.ವಿ. ಉಪಕುಲಪತಿಗಳು ನೇಮಕ ಮಾಡಿ ಇಂದು (ಆ.31) ರಂದು ಆದೇಶಿಸಿದ್ದಾರೆ ಎಂದು ವರದಿ ತಿಳಿಸಿದೆ.

ಸುಳ್ಯ ಕಸಬಾ ಗ್ರಾಮದ ಪೂಜಾರಿಮನೆ ಕಾರ್ಯಪ್ಪ ಗೌಡ ಮತ್ತು ಯಶೋದಾ ದಂಪತಿಯ ಪುತ್ರಿಯಾದ ಡಾ. ಸ್ಮಿತಾ ಸುಳ್ಯದ ಮಾಟ್ರಿಕ್ಸ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ವಿನಯರಾಜ್ ಮಡ್ತಿಲ ಅವರ ಪತ್ನಿ ಈ ಸಾಧನೆಗೆ ಪಾತ್ರರಾಗಿದ್ದಾರೆ.

See also  ಎನ್‌ಎಂಸಿಯಲ್ಲಿ ಸುಳ್ಯದ ಪ್ರತಿಭೆ ನಿರ್ದೇಶಿಸಿರುವ ಚಲನಚಿತ್ರದ ಟ್ರೇಲರ್ ಬಿಡುಗಡೆ , ‘ಭಾವ ತೀರ ಯಾನ’ದ ಕುರಿತು ಅನುಭವ ಹಂಚಿಕೊಂಡ ಚಿತ್ರತಂಡ
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget