ರಾಜ್ಯವಿಡಿಯೋವೈರಲ್ ನ್ಯೂಸ್ಸಿನಿಮಾ

ಡಾ.ಶಿವರಾಜ್ ಕುಮಾರ್ ಕಾಲಿಗೆ ಬಿದ್ದು ನಮಸ್ಕರಿಸಿದ ಐಶ್ವರ್ಯ ರೈ ಮಗಳು, ಗಂಧದ ಗುಡಿಯ ಹಿರಿಮೆಯನ್ನು ಹೊಗಳಿದ ಫ್ಯಾನ್ಸ್..! ಇಲ್ಲಿದೆ ವೈರಲ್ ವಿಡಿಯೋ

237

ನ್ಯೂಸ್ ನಾಟೌಟ್: ಚಿತ್ರರಂಗದಲ್ಲಿ ಸಾಮಾನ್ಯವಾಗಿ ಅನೇಕ ನಟ-ನಟಿಯರ ಮಕ್ಕಳು ಹೈ ಫೈ ಜೀವನ, ಮೋಜು ಮಸ್ತಿಯಲ್ಲಿಯೇ ಜೀವನ ಕಳೆಯುತ್ತಾರೆ. ಇದರ ನಡುವೆ ಐಶ್ವರ್ಯ ರೈ ಮಗಳ ಸಂಸ್ಕಾರ ನೋಡಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಐಶ್ವರ್ಯ ರೈ ಮಗಳು ಆರಾಧ್ಯ ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಹಸ್ತಲಾಘವ ಮಾಡಲು ಮುಂದಾದಾಗ ಅವರ ಕಾಲಿಗೆ ನಮಸ್ಕರಿಸಿದ್ದಾರೆ. ಈ ಮೂಲಕ ಅನೇಕರ ಹೃದಯವನ್ನು ಗೆದ್ದಿದ್ದಾರೆ.

ಮೊನ್ನೆಯಷ್ಟೇ ದುಬೈನಲ್ಲಿ ಸೈಮಾ ಪ್ರಶಸ್ತಿ ಪ್ರಧಾನ ಸಮಾರಂಭ ನೆರವೇರಿರುವುದು ನಿಮಗೆ ಗೊತ್ತೇ ಇರಬೇಕು. ಈ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕನ್ನಡ-ತೆಲುಗು-ತಮಿಳು ಮತ್ತು ಮಲಯಾಳಂ ಭಾಷೆಯ ಅನೇಕ ತಾರೆಯರು ಭಾಗಿಯಾಗಿದ್ದರು. ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿನ ಅಭಿನಯಕ್ಕೆ ಅತ್ಯುತ್ತಮ ನಾಯಕಿ ಪ್ರಶಸ್ತಿ ಪಡೆಯಲು ಐಶ್ವರ್ಯ ರೈ ಕೂಡ ತಮ್ಮ ಮಗಳು ಆರಾಧ್ಯ ಜೊತೆ ಬಂದಿದ್ದರು.

ಇದೇ ಸಮಯದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದ ಐಶ್ವರ್ಯ ರೈ, ಚಿಯಾನ್ ವಿಕ್ರಮ್ ಜೊತೆ ವೇದಿಕೆಯಿಂದ ಕೆಳಗಿಳಿದು ಬರುತ್ತಿದ್ದರು. ಆ ಕಡೆಯಿಂದ ಶಿವಣ್ಣ ಬರುತ್ತಿದ್ದರು. ಆಗ ವೇದಿಕೆಯ ಮುಂಭಾಗದಲ್ಲಿ ಎದುರಾದ ವಿಕ್ರಮ್ ಅವರನ್ನು ಶಿವಣ್ಣ ಮಾತನಾಡಿಸಿದರು. ಇದನ್ನು ಅರಿಯದೇ ಐಶ್ವರ್ಯ ರೈ ಬಚ್ಚನ್ ಸ್ವಲ್ಪ ಮುಂದೆ ಹೋದರು. ಆ ನಂತರ ಹಿಂದೆ ತಿರುಗಿ ನೋಡಿದ ಐಶ್ವರ್ಯ ರೈ, ಡಾ.ಶಿವರಾಜ್ ಕುಮಾರ್ ಅವರನ್ನು ಕಂಡು ಮರಳಿ ಹಿಂದೆ ಬಂದು ಮಾತನಾಡಿಸಿದರು. ಉಭಯ ಕುಶಲೋಪರಿ ವಿಚಾರಿಸಿದರು. ತಮ್ಮ ಮಗಳು ಆರಾಧ್ಯಳನ್ನೂ ಕೂಡ ಡಾ.ಶಿವರಾಜ್ ಕುಮಾರ್ ಅವರಿಗೆ ಪರಿಚಯಿಸಿದರು. ಆಗ ಆರಾಧ್ಯಾ ಅಲ್ಲಿಯೇ ಶಿವಣ್ಣನ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.

Click

https://newsnotout.com/2024/09/bjp-leader-munirathna-again-arrest-due-to-private-video-case-kannada-news/
https://newsnotout.com/2024/09/hdk-kannada-news-nagamangala-issue-he-will-try-to-release-accused-of-that-conflict/
https://newsnotout.com/2024/09/ganeshan-chaturti-incident-similer-to-nagamangala-kannada-news/
See also  ತಿರುಪತಿ ದೇವಸ್ಥಾನದ ಆಡಳಿತದಿಂದ ಹಿಂದೂಯೇತರರನ್ನು ಹೊರ ಹಾಕಿದ ಟಿಟಿಡಿ, 1000ಕ್ಕೂ ಹೆಚ್ಚು ಅನ್ಯಧರ್ಮೀಯ ನೌಕರರಿಗೆ ಉದ್ಯೋಗ ಕಳೆದುಕೊಳ್ಳುವ ಭಯ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget