ಜೀವನ ಶೈಲಿ/ಆರೋಗ್ಯಬೆಂಗಳೂರುಮಹಿಳೆ-ಆರೋಗ್ಯರಾಜಕೀಯಸಿನಿಮಾ

ಶಿವರಾಜ್ ​ಕುಮಾರ್ ಗೆ ದೊಡ್ಡ ಆಪರೇಷನ್ ಆಗಿದೆ ಹಾಗಾಗಿ ನಾನೂ ಜೊತೆ ಹೋಗಬೇಕಾಯ್ತು ಎಂದ ಮಧು ಬಂಗಾರಪ್ಪ..! ನಟನಿಗೆ 6 ಸರ್ಜರಿ, 190 ಹೊಲಿಗೆ ಹಾಕಲಾಗಿದೆ ಎಂದ ಸಚಿವ..!

ನ್ಯೂಸ್ ನಾಟೌಟ್: ನಟ ಶಿವರಾಜ್​ಕುಮಾರ್​ ಕ್ಯಾನ್ಸರ್ ಮುಕ್ತವಾಗಿದ್ದಾರೆ. ಶಿವಣ್ಣ ಅವರಿಗೆ ಯಾವ ರೀತಿಯ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂಬುದನ್ನು ಅವರ ಸಂಬಂಧಿ ಮಧು ಬಂಗಾರಪ್ಪ ವಿವರಿಸಿದ್ದಾರೆ. ‘ನಡೆದಿರುವುದು ತುಂಬ ದೊಡ್ಡ ಆಪರೇಷನ್​. ಹಾಗಾಗಿಯೇ ನಾನು ಅವರ ಜೊತೆ ಅಲ್ಲಿಗೆ ಹೋಗಿದ್ದು. ಯಶಸ್ವಿಯಾಗಿ ಸರ್ಜರಿ ನಡೆದಿದೆ’ ಎಂದು ಹೇಳಿದ್ದಾರೆ.

ಒಟ್ಟು 6 ಸರ್ಜರಿ ಮಾಡಿದ್ದು, 190 ಹೊಲಿಗೆ ಹಾಕಲಾಗಿದೆ ಎಂದು ಕೂಡ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
‘ಏಕಕಾಲಕ್ಕೆ 6 ಆಪರೇಷನ್​ ನಡೆಯಿತು. ಕರುಳಿನ ಒಂದು ಭಾಗವನ್ನು ತೆಗೆದು, ಅದನ್ನೇ ಯೂರಿನ್ ಬ್ಲಾಡರ್ ಆಗಿ ಮಾಡುತ್ತಾರೆ. ಒಳಗಿನಿಂದ 190 ಹೊಲಿಗೆ ಹಾಕಲಾಗಿದೆ. ನಾವು ಇದನ್ನೆಲ್ಲ ವಿವರವಾಗಿ ಹೇಳಿರಲಿಲ್ಲ. ಐದೂವರೆ ಗಂಟೆ ಸರ್ಜರಿ ಪ್ಲ್ಯಾನ್ ಮಾಡಲಾಗಿತ್ತು. 5 ಗಂಟೆ ಒಳಗೆ ಮುಗಿಸಿದರು. ಯಾವುದೇ ತೊಂದರೆ ಆಗಲಿಲ್ಲ. 4 ಗಂಟೆ ಒಳಗೆ ನಾವು ಹೋಗಿ ಮಾತನಾಡಿಸಿದೆವು’ ಎಂದು ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.

‘ಎಲ್ಲರ ಹಾರೈಕೆಯಿಂದ, ಉತ್ತಮ ವೈದ್ಯರಿಂದ ಎಲ್ಲವೂ ಚೆನ್ನಾಗಿ ಆಗಿದೆ. ಎಲ್ಲರೂ ಶಿವಣ್ಣನ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಹರಡಿರುವ ವದಂತಿಗಳು ನಿಲ್ಲಬೇಕು. ಆಗಿರುವುದು ಬ್ಲಾಡರ್​ ರಿಕನ್​ಸ್ಟ್ರಕ್ಷನ್. ಕಿಡ್ನಿ ವೈಫಲ್ಯ ಅಂತ ಹೇಳುವುದು ತಪ್ಪಾಗುತ್ತದೆ. ಸರಿಯಾಗಿ ಗೊತ್ತಿಲ್ಲದೇ ಕೆಲವರು ತಪ್ಪು ಮಾಹಿತಿ ಹಬ್ಬಿಸುತ್ತಾರೆ. ಹಾಗೆ ಮಾಡಬಾರದು’ ಎಂದಿದ್ದಾರೆ ಮಧು ಬಂಗಾರಪ್ಪ.

‘ಶಿವರಾಜ್​ಕುಮಾರ್​ ಅವರಿಗೆ ಬ್ರೇನ್ ​ನಲ್ಲಿ ಒಂದು ಸ್ಟಂಟ್ ಇದೆ. ಅವರಿಗೆ ಒಮ್ಮೆ ಚಿಕ್ಕ ಹಾರ್ಟ್​ ಅಟ್ಯಾಕ್ ಕೂಡ ಆಗಿತ್ತು. ಮತ್ತೆ ಅವರಿಗೆ ಯಾಕೆ ಈ ಆರೋಗ್ಯ ಸಮಸ್ಯೆ ಎಂಬ ಬೇಸರ ಎಲ್ಲರಿಗೂ ಇತ್ತು. ಈಗ ಶಿವಣ್ಣ ಚೆನ್ನಾಗಿ ಇದ್ದಾರೆ. ಜನವರಿ 25ರಂದು ವಾಪಸ್ ಬರುತ್ತಾರೆ. ಮೊದಲಿಗಿಂತಲೂ ಜಾಸ್ತಿ ಜೋಶ್​ನಲ್ಲಿ ಬರುತ್ತಾರೆ. ಅಲ್ಲಿ ನಾನು ಮತ್ತು ಅವರು ಪ್ರತಿ ದಿನ 3-4 ಕಿಮೀ ವಾಕಿಂಗ್ ಮಾಡುತ್ತಿದ್ದೆವು. ಅವರು ತುಂಬಾ ಫಿಟ್ ಆಗಿದ್ದಾರೆ’ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.

Click

https://newsnotout.com/2025/01/ayyappa-swami-devotees-hit-and-run-kannada-news-8-people/
https://newsnotout.com/2025/01/lakshmi-hebbalkar-kannada-news-doctor-kannada-news-d/
https://newsnotout.com/2025/01/udupi-kannada-news-malpe-jwellery-viral-news/
https://newsnotout.com/2025/01/january-19-kannada-news-ban-tick-tok-in-america-viral-news-fh/
https://newsnotout.com/2025/01/tulu-cinema-rupesh-shetty-and-bollywood-actor-tulunadu/
https://newsnotout.com/2025/01/monkey-illness-kannada-news-132-people-issue-last-year/
https://newsnotout.com/2025/01/mahakumbha-mela-steve-jobs-wife-in-kumbh-mela-kannada-news-health/
https://newsnotout.com/2025/01/mahakumbha-mela-2025-and-muslim-man-arrested-for-suspect-kannada-news/

Related posts

ಬುರ್ಖಾ ಧರಿಸಿ ಕಾಲಿ ಬಿಂದಿಗೆ ಹಿಡಿದು ಬಂದ ವಾಟಾಳ್ ನಾಗರಾಜ್..! ವಾಟಾಳ್ ವೇಷ ವಿವಾದಕ್ಕೆ ತಿರುಗಲಿದೆಯಾ? ಯಾಕೆ ಈ ಹೊಸಾ ಅವತಾರ?

ಪ್ರಸಾದ ಸೇವಿಸಿ ರಾತ್ರೋರಾತ್ರಿ ಅಸ್ವಸ್ಥರಾದ ಭಕ್ತರು..! 300 ಕ್ಕೂ ಹೆಚ್ಚು ಮಂದಿಗೆ ರಸ್ತೆಯಲ್ಲೇ ಡ್ರಿಪ್ಸ್..! ಏನಿದು ಘಟನೆ..?

ಮಂಗಳೂರು: 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ..! ಆಹಾರದ ಸ್ಯಾಂಪಲ್ ತಪಾಸಣೆ ಕೊಂಡೊಯ್ದ ಅಧಿಕಾರಿಗಳು