ಕರಾವಳಿ

ಯೋಗೇಶ್ವರಾನಂದ ಸರಸ್ವತಿ‌ ಸ್ಚಾಮೀಜಿ ಓರ್ವ ಶ್ರೇಷ್ಠ ಸ್ವಾಮೀಜಿ : ಡಾ. ಪ್ರಭಾಕರ ಶಿಶಿಲ

ಸುಳ್ಯ : ಅಜ್ಜಾವರದ ದೇವರ ಕಳಿಯ ಚೈತನ್ಯ ಸೇವಾಶ್ರಮದ ಶ್ರೀ ಯೋಗೇಶ್ವರಾನಂದ ಸರಸ್ವತಿ  ಓರ್ವ ಶ್ರೇಷ್ಠ ಸ್ವಾಮೀಜಿ ಎಂದು ಸುಳ್ಯ ಎನ್.ಎಂ.ಸಿ.ಯ ನಿವೃತ್ತ ಪ್ರಾಂಶುಪಾಲ, ಅರ್ಥಶಾಸ್ತ್ರಜ್ಞ, ಲೇಖಕ ಡಾ.ಪ್ರಭಾಕರ ಶಿಶಿಲ ಹೇಳಿದರು.

ಅವರು ಅಜ್ಜಾವರದ ಚೈತನ್ಯ ಸೇವಾಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ಬರಾನಂದ ಸರಸ್ವತಿಯವರ 80 ನೇ ಹುಟ್ಟು ಹಬ್ಬ ಕಾರ್ಯಕ್ರಮ ಆಚರಣೆಯ  ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ಬಾಮೀಜಿಯವರು ವೇದ ಉಪನಿಷತ್ತು  ಭಗವದ್ಗೀತೆ ,ಪೂಜಾ ಕಾರ್ಯ ಎಲ್ಲಾವನ್ನು ಬಲ್ಲರು .ಜನ ಸಾಮಾನ್ಯರಿಗೆ ಅವರು ಲಭ್ಯರಾಗುತ್ತಾರೆ.ಸಮಾಜ ಸೇವೆಯ ಮೂಲಕ ಅವರು ಶ್ರೇಷ್ಠ ಕೆಲಸ ಮಾಡುತ್ತಿದ್ದು ಇನ್ನಷ್ಟು ಸಮಾಜ ಸೇವೆ ಮಾಡುವುದರ ಮೂಲಕ ನೂರ್ಕಾಲ ಬಾಳಲಿ ಎಂದು ಹಾರೈಸಿದರು ಮುಖ್ಯ ಅತಿಥಿಯಾಗಿ ಆಗಮಿಸಿದ ಕೆ.ವಿ.ಜಿ ಆಯುರ್ವೆದಿಕ್ ಕಾಲೇಜಿನ ಪ್ರೋ.ಡಾ/ ಹರ್ಷವರ್ಧನ ಮಾತನಾಡಿ ಸ್ವಾಮೀಜಿಯವರ ಸಮಾಜಮುಖಿ ಕೆಲಸ ಶ್ರೇಷ್ಟವಾಗಿದೆ ಎಂದು ಹೇಳಿ ಮುಂದಿನ‌ ಜೀವನಕ್ಕೆ ಶುಭ ಹಾರೈಸಿದರು.

ಆಶ್ರಮದ  ಟ್ರಸ್ಟಿ ಅನಿಲ್ ಬಿ.ವಿ ಯವರು ಸ್ವಾಮೀಜಿಯವರ ಜೀವನ ನಡೆದು ಬಂದ ಹಾದಿಯನ್ನು ವಿವರಿಸಿದರು.ಈ ಸಂದರ್ಭದಲ್ಲಿ ಆಶ್ರಮದ ಟ್ರಸ್ಡಿ  ಪ್ರಣವಿ, ,ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ  ಶಂಕರ ಪೆರಾಜೆ,ಮೇಘ ಶ್ಯಾಮ್ ಅಡ್ಪಂಗಾಯ,ಪ್ರೋ.ರೇಖಾ  ಇತರರು ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಅಹ್ಮದ್ ಝಿಶಾನ್  ಭಜನಾ ಸತ್ಸಂಗ ಕಾರ್ಯಕ್ರಮ ನಡೆಸಿ ಕೊಟ್ಟರು. ತಬಲದಲ್ಲಿ ಬಾಲಕೃಷ್ಣ ಮೇನಾಲ, ವಿಜಯ್ ಹಾರ್ಮೋನಿಯಂನಲ್ಲಿ ಸಹಕರಿಸಿದರು.

Related posts

ಸುಳ್ಯ: ಫಾಸ್ಟ್‌ ಫುಡ್ ಅಂಗಡಿಗೆ ನುಗ್ಗಿದ ಬೋಲೆರೋ ಕಾರು

ಮಡಿಕೇರಿ: ದಯಾ ಮರಣ ಕೋರಿ ಜಿಲ್ಲಾಧಿಕಾರಿಗೆ ಪತ್ರ ಬರೆದ ಮಂಗಳಮುಖಿ

ಡಾ| ರೇಣುಕಾ ಪ್ರಸಾದ್ ಕೆ.ವಿಯವರ ಪತ್ರಿಕಾಗೋಷ್ಠಿಯಲ್ಲಿ ಹುರುಳಿಲ್ಲ: ಡಾ | ಕೆ.ವಿ. ಚಿದಾನಂದ್