ರಾಜಕೀಯ

ಡಾ.ಮಂಜುನಾಥ್‌ 2 ದಿನದಲ್ಲಿ ರಾಜಕೀಯಕ್ಕೆ ಅಧಿಕೃತ ಸೇರ್ಪಡೆ, ಈ ಬಗ್ಗೆ ಬಿ.ಎಸ್ ಯಡಿಯೂರಪ್ಪ ಹೇಳಿದ್ದೇನು..?

243

ನ್ಯೂಸ್ ನಾಟೌಟ್: ಅಧಿಕೃತವಾಗಿ 2-3 ದಿನಗಳಲ್ಲಿ ನಾನು ರಾಜಕೀಯಕ್ಕೆ ಸೇರ್ಪಡೆ ಆಗುತ್ತೇನೆ ಎಂದು ಹೃದ್ರೋಗ ತಜ್ಞ ಡಾ.ಮಂಜುನಾಥ್‌ ಹೇಳಿಕೆ ನೀಡಿದ್ದಾರೆ. ಮಾರ್ಚ್ 13 ರಂದು ಡಾಲರ್ಸ್‌ ಕಾಲೋನಿ ನಿವಾಸದಲ್ಲಿ ಯಡಿಯೂರಪ್ಪರನ್ನು ಭೇಟಿ ಮಾಡಿದ ಬಳಿಕ ಮಧ್ಯಮಗಳ ಜೊತೆ ಮಾತನಾಡಿ, ಮೋದಿ ಸರ್ಕಾರ ಸಾಧಕರಿಗೆ, ಪರಿಣಿತರಿಗೆ ಪ್ರೊತ್ಸಾಹ ಕೊಡುತ್ತಿದ್ದಾರೆ.

ಹೀಗಾಗಿ ನಾನು ಲೋಕಸಭೆ ಚುನಾವಣೆ ಎದುರಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಹೃದ್ರೋಗ ಕ್ಷೇತ್ರದಲ್ಲಿ ಕಾಂತ್ರಿಕಾರಕ ಕೆಲಸ ಮಾಡಿದ್ದೇವೆ. ಮೋದಿಗೆ ಹ್ರಾಟ್ರಿಕ್ ಎಲೆಕ್ಷನ್ ನಡೆಯುತ್ತಿದೆ. ಅವರ ನಾಯಕತ್ವದಲ್ಲಿ ದೇಶಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಯಡಿಯೂರಪ್ಪ ಜೊತೆ ಮಾತಾಡಿದ್ದೇನೆ. ರಾಜಕೀಯದಲ್ಲೂ ನಾನು ರಾಜಕೀಯ ಮಾಡುವುದಿಲ್ಲ ಎಂದು ತಿಳಿಸಿದರು.

ಇಡೀ ನಾಡಿಗೆ ಗೊತ್ತಿರುವಂತೆ ಡಾ ಮಂಜುನಾಥ್ ಲಕ್ಷಾಂತರ ಜನರ ಪ್ರಾಣ ಉಳಿಸಿದ್ಧಾರೆ. ಅವರು ಬಿಜೆಪಿ ಸೇರ್ಪಡೆ ಆಗಲಿದ್ದು, ಇಂತಹವರನ್ನ ಅವಿರೋಧವಾಗಿ ಗೆಲ್ಲಿಸಿಕೊಡಬೇಕಿತ್ತು. ಆದರೆ ಚುನಾವಣಾ ರಾಜಕೀಯ ಅನಿವಾರ್ಯ. ಅವರ ಪಕ್ಷ ಸೇರ್ಪಡೆ ಬಗ್ಗೆ ಮೋದಿ ಅವರಿಗೂ ಮಾಹಿತಿ ನೀಡಿದ್ದೆವು. ಅವರು ಕೂಡ ಬಹಳ ಸಂತೋಷಪಟ್ಟರು ಎಂದಿದ್ದಾರೆ.

See also  ಮಂಗಳೂರು: ಡಿಸಿ ಕಚೇರಿ ಮೆಟ್ಟಿಲಲ್ಲಿ ಧರಣಿ ಕುಳಿತ ಬಿಜೆಪಿ ಶಾಸಕರು..! ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಧ್ಯ ಪ್ರವೇಶ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget