ಕರಾವಳಿಜೀವನ ಶೈಲಿ/ಆರೋಗ್ಯನಮ್ಮ ತುಳುವೇರ್

ಇಂಡೋನೇಷ್ಯಾದಲ್ಲಿ ತುಳು ಮಾತನಾಡಿದ ಡಾ. ಬ್ರೋ, ‘ಹಲೋ ಎಂಚ ಉಲ್ಲರ್, ಇಲ್ಲಿದೆ ವೈರಲ್ ವಿಡಿಯೋ

207

ನ್ಯೂಸ್ ನಾಟೌಟ್: ಕನ್ನಡಿಗ ಡಾ. ಬ್ರೊ ಯಾರಿಗೆ ಗೊತ್ತಿಲ್ಲ ಹೇಳಿ. ಪ್ರತಿಯೊಬ್ಬರು ಕೂಡ ಈತನ ಕಂಟೆಂಟ್ ಗಳನ್ನು ಇಷ್ಟ ಪಡ್ತಾರೆ. ದೇಶ-ವಿದೇಶಗಳಲ್ಲಿ ಸಂಚರಿಸುತ್ತಾ ಅಚ್ಚ ಕನ್ನಡದಲ್ಲಿ ಮಾತನಾಡುವ ಡಾ. ಬ್ರೋ ಇದೀಗ ತುಳುವಿನಲ್ಲಿ ಮಾತನಾಡಿ ಸುದ್ದಿಯಾಗಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.

ಈ ಕುರಿತ ವಿಡಿಯೋ ತುಣಕೊಂದನ್ನು ತುಳು ಕಂಟೆಂಟ್ ಕ್ರಿಯೇಟರ್ ಶರಣ್ ಚಿಲಿಂಬಿ ತಮ್ಮ ಇನ್ಸ್ಟಾ ಗ್ರಾಮ್ ಖಾತೆ (@the_powerhouse_vines) ಯಲ್ಲಿ ಹಂಚಿಕೊಂಡಿದ್ದಾರೆ. ಎಂಚ ಉಲ್ಲರ್ (ಹೇಗಿದ್ದೀರಿ) ಎಂಬ ತುಳು ಪದವನ್ನು ಗಗನ್ ಶ್ರೀನಿವಾಸ್ ಅಲಿಯಾಸ್ ಡಾ. ಬ್ರೊ ಗೆ ಕಲಿಸಿಕೊಟ್ಟಿದ್ದರು. ಈ ಪದವನ್ನು ಇಂಡೋನೇಷ್ಯಾದ ರಸ್ತೆಯಲ್ಲಿ ಗಾಡಿಯೊಂದರಲ್ಲಿ ಕುಳಿತು ಹೋಗುತ್ತಿರುವ ಸಂದರ್ಭದಲ್ಲಿ ಅಲ್ಲಿನ ಜನರತ್ತ ಡಾ. ಬ್ರೊ ಹೇಳಿಕೊಂಡಿದ್ದಾರೆ. ಈ ವಿಡಿಯೋ ಅಪ್ ಡೇಟ್ ಆಗಿರುವ ಕೆಲವೇ ನಿಮಿಷಗಳಲ್ಲಿ ೧೦ ಸಾವಿರಕ್ಕೂ ಅಧಿಕ ಮಂದಿ ವೀಕ್ಷಕರನ್ನು ಹೊಂದಿರುವುದು ವಿಶೇಷ.

See also  ವಿದೇಶದಲ್ಲಿ ಸಿಲುಕಿದ್ದ ಕೊಡಗಿನ ಮಹಿಳೆ ಸುರಕ್ಷಿತವಾಗಿ ವಾಪಸ್‌
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget