ನ್ಯೂಸ್ ನಾಟೌಟ್:ಬಿಹಾರದ ಮುಜಫರ್ಪುರದಿಂದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರು ಮಹಿಳಾ ಪೊಲೀಸ್ ಠಾಣೆಗೆ ಬಂದು ತನ್ನ ಅತ್ತೆ-ಮಾವನ ವಿರುದ್ಧ ವಿಚಿತ್ರ ಆರೋಪಗಳನ್ನು ಮಾಡಿದ್ದಾರೆ.
ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಇಲ್ಲೊಬ್ಬ ಮಹಿಳೆ ಪೊಲೀಸ್ ಠಾಣೆಗೆ ತನ್ನ ಗಂಡ ಮತ್ತು ಮನೆಯವರ ವಿರುದ್ಧ ದೂರು ನೀಡಿದ್ದಾರೆ. ತನ್ನ ಹೆತ್ತವರ ಮನೆಯಿಂದ ವರದಕ್ಷಿಣೆ ತರುವಂತೆ ತನ್ನ ಅತ್ತೆ-ಮಾವ ಮೊದಲು ಒತ್ತಡ ಹೇರಿದ್ದರು ನಂತರ ವರದಕ್ಷಿಣೆ ತರಲು ಸಾಧ್ಯವಾಗದಿದ್ದಾಗ, ಅವರು ತನ್ನ ಗಂಡನ ಚಿಕಿತ್ಸೆಗಾಗಿ ತನ್ನ ಕಿಡ್ನಿಯನ್ನು ದಾನ ಮಾಡುವಂತೆ ಒತ್ತಾಯಿಸಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾಳೆ.
ಈ ಮಹಿಳೆಗೆ ತನ್ನ ಗಂಡನ ಮನೆಯವರು ವರದಕ್ಷಿಣೆಗಾಗಿ ತನ್ನ ಕಿಡ್ನಿಯನ್ನು ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ನೀಡಿದ್ದಾಳೆ. ಆಕೆ ಕಿಡ್ನಿ ದಾನ ಮಾಡಲು ಒಪ್ಪದಿದ್ದಾಗ, ತನ್ನನ್ನು ಮನಬಂದಂತೆ ಥಳಿಸಿ ಮನೆಯಿಂದ ಹೊರಗೆ ಹಾಕಲಾಯಿತು ಎಂದು ಆ ಮಹಿಳೆ ಆರೋಪಿಸಿದ್ದಾರೆ.
ಮದುವೆಯಾದ ಸುಮಾರು ಎರಡು ವರ್ಷಗಳ ನಂತರ, ತನ್ನ ಗಂಡನ ಒಂದು ಮೂತ್ರಪಿಂಡದಲ್ಲಿ ದೋಷವಿದೆ ಎಂದು ಆಕೆಗೆ ತಿಳಿದುಬಂದಿದೆ. ಇದು ಆಕೆಗೆ ತಿಳಿದ ನಂತರ ಅತ್ತೆ, ಮಾವ ಹೆತ್ತವರ ಮನೆಯಿಂದ ವರದಕ್ಷಿಣೆ ತರಲು ಸಾಧ್ಯವಾಗದಿದ್ದರೆ, ತನ್ನ ಒಂದು ಮೂತ್ರಪಿಂಡವನ್ನು ತನ್ನ ಗಂಡನಿಗೆ ನೀಡಬೇಕು ಎಂದು ಒತ್ತಾಯ ಮಾಡಿದರು ಎಂದು ಆರೋಪಿಸಿದ್ದಾಳೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.
ಮಕ್ಕಳ ಜೊತೆ ಪತ್ನಿ ಮನೆ ಬಿಟ್ಟು ಹೋದದ್ದಕ್ಕೆ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ..! ಮೂರಂತಸ್ತಿನ ಮನೆ ಈಗ ಸ್ಮಶಾನ..!