Latestಕ್ರೈಂವಿಡಿಯೋವೈರಲ್ ನ್ಯೂಸ್

ವರದಕ್ಷಿಣೆಯಾಗಿ ಚಿನ್ನಾಭರಣ, ಫ್ರಿಜ್, ಕೂಲರ್, ಬೆಡ್ ಗಳನ್ನು ತನ್ನ ತವರಿನಿಂದ ತಂದಿದ್ದ ಹೆಂಡತಿ..! ಇನ್ನೂ ಹೆಚ್ಚು ವರದಕ್ಷಿಣೆ ತರುವಂತೆ ಮನೆಯಿಂದ ಹೊರಹಾಕಿದ ಗಂಡ..! ವಿಡಿಯೋ ವೈರಲ್

566

ನ್ಯೂಸ್ ನಾಟೌಟ್: ಉತ್ತರ ಪ್ರದೇಶದ ಜಲಾಲ್‌ ಪುರದಲ್ಲಿ ವರದಕ್ಷಿಣೆ ತರುವಂತೆ ಕಿರುಕುಳ ನೀಡಿ ಮಹಿಳೆಯೋರ್ವಳನ್ನು ಬಲವಂತವಾಗಿ ಪತಿ ಮನೆಯಿಂದ ಹೊರಹಾಕುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮಹಿಳೆಯನ್ನು ರಂಜನಾ ಯಾದವ್ ಎಂದು ಗುರುತಿಸಲಾಗಿದೆ. ರಂಜನಾಗೆ ಕಳೆದ ಮಾರ್ಚ್‌ನಲ್ಲಿ ಅಂಬೇಡ್ಕರ್ ನಗರದ ನಿವಾಸಿ ರಮೇಶ್ ಕುಮಾರ್ ಯಾದವ್ ಜೊತೆ ವಿವಾಹವಾಗಿತ್ತು.

ವರದಿಗಳ ಪ್ರಕಾರ, ವಿವಾಹದ ನಂತರ ಪತಿಯ ಮನೆಗೆ ತೆರಳುವಾಗ ರಂಜನಾ ವರದಕ್ಷಿಣೆಯಾಗಿ ಚಿನ್ನಾಭರಣ, ಫ್ರಿಜ್, ಕೂಲರ್, ಬೆಡ್ ಕೊಂಡೊಯ್ದಿದ್ದರು. ಆದರೆ, ಆಕೆಯ ಪತಿ ಮತ್ತು ಕುಟುಂಬಸ್ಥರು ಹೆಚ್ಚಿನ ವರದಕ್ಷಿಣೆ ತರುವಂತೆ ಪೀಡಿಸಿದ್ದಾರೆ ಎನ್ನಲಾಗಿದೆ. ಆಕೆಯ ಬಳಿಯಿದ್ದ ಚಿನ್ನಾಭರಣವನ್ನು ಕಸಿದುಕೊಂಡಿದ್ದಾರೆ. ಕೊನೆಗೆ 5 ಲಕ್ಷ ರೂ.ತರುವಂತೆ ಕಿರುಕುಳ ನೀಡಿ ಮನೆಯಿಂದ ಹೊರಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ವೈರಲ್ ವೀಡಿಯೊದಲ್ಲಿ ಪತಿ ಮನೆಯ ಬಾಗಿಲ ಬಳಿ ನಿಂತುಕೊಂಡಿದ್ದ ರಂಜನಾ ಅವರನ್ನು ಬಲವಂತವಾಗಿ ಹೊರ ಹಾಕುವುದು ಸೆರೆಯಾಗಿದೆ. ಪತಿ ರಮೇಶ್ ಕುಮಾರ್ ಮತ್ತು ಕುಟುಂಬಸ್ಥರಾದ ಶ್ರೀನಾಥ್ ಮತ್ತು ರಕ್ಷಾರಾಮ್ ವರದಕ್ಷಿಣೆ ತರುವಂತೆ ನಿರಂತರವಾಗಿ ಕಿರುಕುಳ ನೀಡಿದರು ಎಂದು ರಂಜನಾ ಆರೋಪಿಸಿದ್ದಾರೆ.

ಈ ಕುರಿತು ಜಲಾಲ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕೊಡಗಿನಲ್ಲಿ 1,200ಕ್ಕೂ ಹೆಚ್ಚು ಅನಧಿಕೃತ ಹೋಮ್‌ ಸ್ಟೇಗಳು ಪತ್ತೆ..! ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ..!

ಬೆಳಿಗ್ಗೆ ವಿದ್ಯುತ್ ಕಂಬಕ್ಕೆ ಜೆಸಿಬಿ ಡಿಕ್ಕಿ, ಸಂಜೆ ಮಹಿಳೆಯರ ಮೇಲೆ ಬಿದ್ದ ಕಂಬ..! 4 ತಿಂಗಳ ಗರ್ಭಿಣಿ ಸೇರಿ ಇಬ್ಬರು ಸಾವು..!

See also  ಪಾಕಿಸ್ತಾನದ ವಿರುದ್ಧ ಸುಸೈಡ್ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ ಎಂದ ಸಚಿವ ಜಮೀರ್ ಅಹ್ಮದ್ ಖಾನ್..! ವಿಡಿಯೋ ವೈರಲ್
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget