ಬೆಂಗಳೂರುರಾಜಕೀಯ

‘ಲಕ್ಷ್ಮಿ’ ಹೆಬ್ಬಾಳ್ಕರ್ ಮನೆಗೆ ‘ಮಹಾಲಕ್ಷ್ಮಿ’ ಆಗಮನ,ಸಚಿವೆಯಾದ ಸಂತಸದ ದಿನದಂದೇ ಅಜ್ಜಿಯಾದ ಖುಷಿ

191

ನ್ಯೂಸ್ ನಾಟೌಟ್ :ಇಂದು ಸಿಎಂ ಸಿದ್ದರಾಮಯ್ಯ ಸರಕಾರದ ಸಚಿವ ಸಂಪುಟ ವಿಸ್ತರಣೆಯಾಗಿದ್ದು,೨೪ ಸಚಿವರು ಪ್ರಮಾಣವಚನವನ್ನು ಸ್ವೀಕರಿಸಿದರು.ಸಚಿವೆಯಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಗಮನ ಸೆಳೆಯುತ್ತಿದ್ದು,ಫುಲ್ ಖುಷ್ ಆಗಿದ್ದಾರೆ.ಮತ್ತೊಂದು ಕಡೆ ಮನೆಗೆ ಮೊಮ್ಮಗಳು ‘ಮಹಾಲಕ್ಷ್ಮೀ ಯ ಆಗಮನವಾಗಿದೆ.

ಹೌದು,ಸಚಿವ ಸ್ಥಾನ ದಕ್ಕಿದ ದಿನವೇ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅಜ್ಜಿಯಾಗಿದ್ದಾರೆ.ಲಕ್ಷ್ಮೀ ಹೆಬ್ಬಾಳ್ಕರ್ ಸೊಸೆ ಹಿತಾ ಹೆಬ್ಬಾಳ್ಕರ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮೇ.26 ರ ರಾತ್ರಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿನ ಜನನವಾಗಿದೆ.ಪುತ್ರ ಮೃಣಾಲ್, ಸೊಸೆ ಹಿತಾಗೆ ಹೆಣ್ಣುಮಗು ಜನಿಸಿದ್ದಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಫುಲ್ ಖುಷ್ ಆಗಿದ್ದಾರೆ. ಸಚಿವಗಿರಿ ಜೊತೆಗೆ ‘ಲಕ್ಷ್ಮೀ’ ಮನೆಗೆ ‘ಮಹಾಲಕ್ಷ್ಮೀ’ ಬಂದ ಖುಷಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಮಾಣ ವಚನ ಸ್ವೀಕಾರ ಸಮಾರಂಭ ಬಳಿಕ ಹೆಬ್ಬಾಳ್ಕರ್ ಕುಟುಂಬ ಬೆಂಗಳೂರಿಂದ ನೇರವಾಗಿ ಶಿವಮೊಗ್ಗಕ್ಕೆ ತೆರಳಲಿದ್ದಾರೆ.

See also  ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿ.ಐ.ಪಿ ಗಳದ್ದೇ ಹವಾ..! ಮಾಧ್ಯಮಗಳ ಕಣ್ತಪ್ಪಿಸಿ ಪತಿಯನ್ನು ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮಿ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget