ಕರಾವಳಿಕ್ರೀಡೆ/ಸಿನಿಮಾಕ್ರೈಂವೈರಲ್ ನ್ಯೂಸ್ಸಿನಿಮಾಸುಳ್ಯ

Short Film: ಸುಳ್ಯದ ಹುಡುಗರ ಸಸ್ಪೆನ್ಸ್ ಥ್ರಿಲ್ಲರ್ ಶಾರ್ಟ್ ಮೂವಿ”ಡೋರ್’ ಬೆಂಗಳೂರಿನಲ್ಲಿ ಬಿಡುಗಡೆ, ಪ್ರಮುಖ ಪಾತ್ರದಲ್ಲಿ ಮಿಂಚಿದ KGF ಸಿನಿಮಾ ನಟ, ಈ ಲಿಂಕ್ ಕ್ಲಿಕ್ ಮಾಡಿ ಮೂವಿ ವೀಕ್ಷಿಸಿ

222

ನ್ಯೂಸ್ ನಾಟೌಟ್: ಪ್ರತಿಭಾವಂತ ಸುಳ್ಯದ ಹುಡುಗರ ತಂಡವೊಂದು ಶಾರ್ಟ್ ಮೂವಿಯೊಂದನ್ನು ಮಾಡಿ ಇದೀಗ ಸದ್ದು ಮಾಡಿದ್ದಾರೆ. ಸುಳ್ಯದ ಕೌಶಿಕ್ ಕೋಡಿ ನಿರ್ದೇಶನದ ಈ ಶಾರ್ಟ್ ಮೂವಿ ಕ್ರೈಂ ಥ್ರಿಲ್ಲರ್ ಸ್ಟೋರಿಯನ್ನು ಒಳಗೊಂಡಿದೆ. 12 ನಿಮಿಷದ ಸ್ಟೋರಿ ಬಹಳಷ್ಟು ಕುತೂಹಲಕಾರಿ ಅಂಶವನ್ನು ವೀಕ್ಷಕರ ಎದುರು ತೆರೆದಿಡುತ್ತಾ ಹೋಗುತ್ತದೆ.

ಈ ಶಾರ್ಟ್ ಮೂವಿಯಲ್ಲಿ ಖ್ಯಾತ ನಟ ಕೆಜಿಎಫ್ ಸಿನಿಮಾ ಖ್ಯಾತಿಯ ಬಿ.ಸುರೇಶ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ನಿರ್ದೇಶಕ, ನಿರ್ಮಾಪಕ , ನಟರಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿರುವ ಬಿ. ಸುರೇಶ್ ಯುವಕರ ತಂಡಕ್ಕೆ ಪ್ರೋತ್ಸಾಹ ನೀಡಿ ಸ್ಕ್ರೀನ್ ನಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಇವರಿಗೆ ಹರ್ಷಿತ್ ಕೆ. ಸಹ ನಟರಾಗಿ ಸಾಥ್ ನೀಡಿದ್ದಾರೆ. ಕೇವಲ 20 ಸಾವಿರ ರೂ. ಬಜೆಟ್ ನಲ್ಲಿ ಶಾರ್ಟ್ ಮೂವಿ ಮಾಡಲಾಗಿದೆ. ಹರ್ಷಿತ್ ಕೆ. ಕಥೆ ಬರೆದಿದ್ದಾರೆ. ಸುವಿನ್ ಮೂಲೆಮಜಲು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಕೌಶಿಕ್ ಕೋಡಿ ಎಡಿಟಿಂಗ್ ಮಾಡಿದ್ದಾರೆ. ಸಾಗರ್ ಅವರ ಕ್ಯಾಮರಾ ಮೆನ್ ಆಗಿ ಕೆಲಸ ಮಾಡಿದ್ದಾರೆ. ಕೇವಲ ಒಂದೇ ದಿನದಲ್ಲಿ ಈ ಶಾರ್ಟ್ ಮೂವಿ ಶೂಟಿಂಗ್ ಪೂರ್ಣಗೊಳಿಸಲಾಗಿದೆ. ಮೇ25ರಂದು ಬೆಂಗಳೂರಿನ ಎಸ್ ಆರ್ ವಿ ಥಿಯೇಟರ್ ನಲ್ಲಿ ಶಾರ್ಟ್ ಮೂವಿ ಬಿಡುಗಡೆಯಾಗಿದೆ.

See also  ಇಸ್ರೇಲ್ ಗೆ 3 ಬಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಮಾರಾಟಕ್ಕೆ ಅಮೆರಿಕ ಒಪ್ಪಿಗೆ..! ಯುದ್ಧಕ್ಕೆ ಮತ್ತಷ್ಟು ಪ್ರಚೋದನೆ ನೀಡುತ್ತಿದೆಯಾ ಅಮೆರಿಕ..?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget