ದೇಶ-ಪ್ರಪಂಚ

ಗರ್ಭಿಣಿ ನಾಯಿಯ ಪ್ರಾಣ ಉಳಿಸಲು ಮತ್ತೊಂದು ನಾಯಿಯಿಂದ ರಕ್ತದಾನ

ನ್ಯೂಸ್ ನಾಟೌಟ್: ರಕ್ತದಾನ ಮಹಾದಾನ. ಪ್ರತಿಯೊಬ್ಬರು ರಕ್ತದಾನ ಮಾಡಿ ಜೀವ ಉಳಿಸಿ ಎಂಬ ಸಂದೇಶವನ್ನು ನೋಡಿದ್ದೇವೆ. ಈ ಸಂದೇಶ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಅನ್ವಯಿಸುತ್ತದೆ ಎಂಬುದನ್ನು ಇಲ್ಲೊಂದು ಘಟನೆ ಸಾಬೀತು ಪಡಿಸಿದೆ.

ಹಾವೇರಿ ಜಿಲ್ಲೆಯ ಅಕ್ಕಿಆಲೂರು ಪಟ್ಟಣದಲ್ಲಿ ಲ್ಯಾಬ್ರಡಾರ್ ಜಾತಿಗೆ ಸೇರಿದ ಗರ್ಭಿಣಿ ನಾಯಿಯ ಪ್ರಾಣ ಉಳಿಸಲು ಮತ್ತೊಂದು ನಾಯಿ ರಕ್ತದಾನ ಮಾಡಿದೆ. ಆಶ್ಚರ್ಯವಾದರು ಸತ್ಯ. ಲ್ಯಾಬ್ರಡಾರ್ ಜಾತಿಗೆ ಸೇರಿದ ಜಿಪ್ಸಿ ಎಂಬ ಹೆಸರಿನ ನಾಯಿ ಎರಡು ತಿಂಗಳ ಗರ್ಭಿಣಿ. ಇದು ಕಳೆದ 5 ದಿನಗಳಿಂದ ಆಹಾರ ಸೇವಿಸುತ್ತಿರಲಿಲ್ಲ . ಈ ಸಂಬಂಧ ನಾಯಿ ಮಾಲಿಕ ನಿಖಿಲ್ ಹಡಲಗಿ, ಜಿಪ್ಸಿಯನ್ನು ಕರೆದುಕೊಂಡು ಪಶುವೈದ್ಯರ ಬಳಿ ಹೋದರು. ಆಗ ವೈದ್ಯರು ನಾಯಿಯ ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾಗಿ ಬಳಲುತ್ತಿದೆ, ಕೂಡಲೆ ರಕ್ತದ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ. ಆಗ ನಿಖಿಲ್​, ವೈಭವ ಪಾಟೀಲ್​ ಅವರನ್ನು ಸಂಪರ್ಕಿಸಿದರು. ಇವರು ಕೂಡ ಲ್ಯಾಬ್ರಡಾರ್ ಜಾತಿಗೆ ಸೇರಿದ ಜಿಮ್ಮಿ ಹೆಸರಿನ ಗಂಡು ನಾಯಿ ಸಾಕಿದ್ದು, ಜಿಪ್ಸಿಗೆ ರಕ್ತದಾನ ಮಾಡಲು ಒಪ್ಪಿಕೊಂಡರು. ಬಳಿಕ ಅರಳೇಲೇಶ್ವರದ ಹಿರಿಯ ಪಶು ವೈದ್ಯಾಧಿಕಾರಿ ಡಾ.ಅಮಿತ್ ಪುಠಾಣಿಕರ ಯಶಸ್ವಿಯಾಗಿ ರಕ್ತ ವರ್ಗಾವಣೆ ​ಮಾಡಿದರು. ಈಗ ಜಿಪ್ಸಿ ಆರೋಗ್ಯವಾಗಿದೆ.

Related posts

ಸಾಫ್ಟ್ ವೇರ್ ಅಪ್ ಡೇಟ್ ನಂತರ ಐಫೋನ್ ಗಳಲ್ಲಿ ತಾಂತ್ರಿಕ ಸಮಸ್ಯೆ..! ‘Apple’ ಗೆ ನೋಟಿಸ್ ನೀಡಿದ ಗ್ರಾಹಕ ರಕ್ಷಣಾ ಪ್ರಾಧಿಕಾರ..!

15 ವರ್ಷದ ಹಿಂದೆ ಭೀಕರ ಉಗ್ರ ದಾಳಿಗೆ ಸಾಕ್ಷಿಯಾಗಿದ್ದ ಮುಂಬೈನ ತಾಜ್ ಹೋಟೆಲ್ ಗೆ ಬಾಂಬ್ ಬೆದರಿಕೆ..! ಪೊಲೀಸ್ ಕಂಟ್ರೋಲ್ ರೂಂಗೆ ಕರೆ..!

ಭಾರತ-ಪಾಕಿಸ್ತಾನದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಸಹೋದರರು 75 ವರ್ಷಗಳ ಬಳಿಕ ಮತ್ತೆ ಒಂದಾದ್ರು..! ಒಂದಾದ ಸಂಭ್ರಮ ಹೆಚ್ಚು ಸಮಯ ಉಳಿಯಲಿಲ್ಲ ಏಕೆ?