ಕರಾವಳಿಕ್ರೈಂಬೆಂಗಳೂರುವೈರಲ್ ನ್ಯೂಸ್

ಚಿಂದಿ ಆಯುವ ವ್ಯಕ್ತಿಗೆ ಸಿಕ್ಕ ಕಂತೆ ಕಂತೆ ಡಾಲರ್‌ ನೋಟುಗಳ ಮೌಲ್ಯವೆಷ್ಟು? ಇದು ಸಿಕ್ಕಿದ್ದಾದ್ರೂ ಎಲ್ಲಿ..? ಮುಂದೇನಾಯ್ತು?

ನ್ಯೂಸ್‌ ನಾಟೌಟ್‌: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಮೇರಿಕಾ ಕರೆನ್ಸಿ ಡಾಲರ್‌ ನೋಟುಗಳನ್ನು ಬದಲಾವಣೆ ಮಾಡಲಾಗದೇ ಕಸದ ತೊಟ್ಟಿಗೆ ಎಸೆಯಲಾಗಿದೆ ಎನ್ನಲಾಗಿದ್ದು. ಪ್ರತಿನಿತ್ಯ ಚಿಂದಿ ಆಯಲು ಹೋಗುವಂತೆ ಹೋದ ವ್ಯಕ್ತಿಗೆ ಕಂತೆ ಕಂತೆ ಡಾಲರ್‌ ನೋಟುಗಳು ಪತ್ತೆಯಾಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ವಿದೇಶಿ ಕರೆನ್ಸಿಗಳ ಅಕ್ರಮ ಸಾಗಣೆ ನಡೆಯುತ್ತಿರುವುದರ ಬಗ್ಗೆ ಪೊಲೀಸರಿಗೆ ಮಾಹಿತಿ ಇದೆ ಎನ್ನಲಾಗಿದೆ. ಆದರೂ ಬೆಂಗಳೂರಿನಲ್ಲಿ ಚಿಂದಿ ಪೇಪರ್ ಆಯುವ ವ್ಯಕ್ತಿಗೆ ಕಂತೆ ಕಂತೆ ಡಾಲರ್ ನೋಟುಗಳು ಸಿಕ್ಕಿವೆ. ಸಲೇಮಾನ್ ಶೇಕ್ ಎಂಬ ವ್ಯಕ್ತಿಗೆ ಡಾಲರ್ ನೋಟುಗಳು ಸಿಕ್ಕಿದ್ದು. 100 ಡಾಲರ್ ನ ಒಟ್ಟು 25 ಕಟ್ಟು ನೋಟು ಪತ್ತೆಯಾಗಿವೆ. ಇದರ ಭಾರತೀಯ ರೂಪಾಯಿ ಮೌಲ್ಯ 30 ಲಕ್ಷ ಎಂದು ಅಂದಾಜಿಸಲಾಗಿದೆ. ವೀರಣ್ಣಪಾಳ್ಯ ರೈಲ್ವೆ ಗೇಟ್ ಬಳಿ ಪತ್ತೆಯಾದ ಡಾಲರ್ ನೋಟುಗಳನ್ನು ಅಪರಿತ ವ್ಯಕ್ತಿಗಳು ಕಪ್ಪು ಬಣ್ಣದ ಚೀಲವೊಂದರಲ್ಲಿ ಎಸೆದು ಹೋಗಿದ್ದಾರೆ ಎಂದು ವರದಿ ತಿಳಿಸಿದೆ.

ಚಿಂದಿ ಆಯುವ ವ್ಯಕ್ತಿ ಸುಲೇಮಾನ್ ಮೂಲಕ ಸ್ಥಳೀಯ ವ್ಯಕ್ತಿ ಕರೀಂ ಎಂಬುವ ವರಿಗೆ ಮಾಹಿತಿ ಗೊತ್ತಾಗಿತ್ತು. ಇದಾದ ನಂತರ ಡಾಲರ್‌ಗಳನ್ನು ಏನು ಮಾಡಬೇಕೆಂಬುದು ತಿಳಿಯದೇ ಕರೀಂ ಸಾಮಾಜಿಕ ಜಾಲತಾಣದಲ್ಲಿರುವ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಫೋನ್‌ ನಂಬರ್‌ ಪಡೆದು ಮಾಹಿತಿ ನೀಡಿದ್ದಾರೆ. ನಂತರ ಕಮಿಷನರ್ ದಯಾನಂದ್‌ ಸ್ಥಳೀಯ ಹೆಬ್ಬಾಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಹೆಬ್ಬಾಳ ಪೊಲೀಸರು ಚಿಂದಿ ಆಯುವ ವ್ಯಕ್ತಿಗೆ ಸಿಕ್ಕಿದ್ದ ಡಾಲರ್‌ ನೋಟುಗಳನ್ನ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಇನ್ನು ಚಿಂದಿ ಆಯುವವನಿಗೆ ಸಿಕ್ಕಿರುವ ಡಾಲರ್ ನೋಟುಗಳು ಕಲರ್‌ ಜೆರಾಕ್ಸ್‌ ರೀತಿಯಲ್ಲಿವೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು, ಯಾರೋ ಕಿಡಿಗೇಡಿಗಳು ನಕಲಿ ನೋಟು ತಯಾರಿಸಲು ಪ್ರಯತ್ನಿಸಿ, ಸರಿಯಾಗಿ ಮುದ್ರಣವಾಗದ ಹಿನ್ನೆಲೆಯಲ್ಲಿ ಅವುಗಳನ್ನು ಬೀಸಾಡಿ ಹೋಗಿರಬಹುದು ಎಂಬ ಸಾಧ್ಯತೆಯನ್ನು ಪೊಲೀಸರು ತಿಳಿಸಿದ್ದಾರೆ.

ಆದರೂ, ಸದ್ಯ ಸಿಕ್ಕಿರುವ ನೋಟುಗಳನ್ನು ಹೆಬ್ಬಾಳ ಪೊಲೀಸರು ಪರಿಶೀಲನೆಗೆ ಕಳುಹಿಸಿದ್ದು, ಪರಿಶೀಲನೆ ನಂತರ ಡಾಲರ್‌ ನೋಟುಗಳು ಅಸಲಿಯೋ, ನಕಲಿಯೋ ಎಂದು ತಿಳಿಯಲಿದೆ. ನಂತರ, ನೋಟುಗಳನ್ನು ಎಸೆದು ಹೋದ ಆರೋಪಿಗಳ ಪತ್ತೆಗೆ ಬಲೆ ಬೀಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈಗಾಗಲೇ ದೇಶದಲ್ಲಿ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ನಿಂದ 2 ಸಾವಿರ ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ನಿಲ್ಲಿಸಿದೆ. ಇನ್ನು ನೋಟುಗಳು ಇದ್ದವರು ಬ್ಯಾಂಕ್‌ನಲ್ಲಿ ಬಂದು ಡೆಪಾಸಿಟ್‌ ಮಾಡಿ ಬದಲಿಸಿಕೊಳ್ಳುವಂತೆ ತಿಳಿಸಲಾಗಿದೆ. ಇನ್ನು ನೋಟು ಚಲಾವಣೆ ಮಾಡಲು ಸಾಧ್ಯವಿಲ್ಲವೆಂದರಿತ ದುಷ್ಕರ್ಮಿಗಳು 2000 ರೂ. ಮುಖಬೆಲೆಯ ಕಂತೆ ಕಂತೆ ನೋಟುಗಳನ್ನು ಜುಲೈ 25ರಂದು ಬೆಂಗಳೂರಿನ ಕನಕಪುರ ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದ ಘಟನೆ ನಡೆದಿತ್ತು ಎನ್ನಲಾಗಿದೆ.

Related posts

ಕೊಡಗು: ಬಣ್ಣದ ಅಂಗಡಿಯೊಂದರಲ್ಲಿ ಆಕಸ್ಮಿಕ ಬೆಂಕಿ,ಬಣ್ಣ ಹಾಗೂ ಇತರೆ ಪರಿಕರಗಳು ಸುಟ್ಟು ಭಸ್ಮ,ನಷ್ಟ

ಕೊಡಗು-ಮೈಸೂರು ಬಿಜೆಪಿ ಅಭ್ಯರ್ಥಿ ಮೆರವಣಿಗೆ, ಯದುವೀರ್ ನಾಮಪತ್ರ ಸಲ್ಲಿಕೆ

ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನ ಟಿಕೆಟ್ ದರ ಎಷ್ಟಿದೆ..? 395% ವಿಮಾನ ದರ ಏರಿಕೆಯಾಗಿದೆಯಾ..?