ಕ್ರೈಂವಿಡಿಯೋವೈರಲ್ ನ್ಯೂಸ್

ನಾಯಿಯನ್ನು ಅಟ್ಟಿಸಿಕೊಂಡು ಬಂದು ಮನೆಯೊಳಗೆ ನುಗ್ಗಿದ ಚಿರತೆ..! ಇಲ್ಲಿದೆ ವಿಡಿಯೋ

209

ನ್ಯೂಸ್ ನಾಟೌಟ್: ಚಿರತೆಯೊಂದು ನಾಯಿಯನ್ನು ಅಟ್ಟಿಸಿಕೊಂಡು ಬಂದು ಮನೆಯೊಳಗೆ ನುಗ್ಗಿರುವ ಭಯಾನಕ ವಿಡಿಯೋ ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗುತ್ತಿದೆ. ಮನೆಯೊಳಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ವಿಡಿಯೋ ಸೆರೆಯಾಗಿದೆ.

ವೈರಲ್ ಆಗುತ್ತಿರುವ ವಿಡಿಯೋದ ಆರಂಭದಲ್ಲಿ, ಪಿಟ್‌ ಬುಲ್ ತಳಿಯ ಶ್ವಾನ ಆತಂಕದಿಂದ ಮನೆಯೊಳಗೆ ಓಡಿ ಬಂದಿರುವುದನ್ನು ಕಾಣಬಹುದು. ಅದೇ ಸಮಯದಲ್ಲಿ, ಚಿರತೆ ಕೂಡ ಅದನ್ನು ಹಿಂಬಾಲಿಸಿಕೊಂಡು ಬಂದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಚಿರತೆ ನಾಯಿಯ ಮೇಲೆ ದಾಳಿ ಮಾಡಲು ಮುಂದಾಗಿದ್ದು, ಈ ವೇಳೆ ನಾಯಿ ಜೋರಾಗಿ ಬೊಗಳುತ್ತಿರುವುದು ಕಂಡು ಬಂದಿದೆ. ಕೆಲ ಹೊತ್ತಿನ ಬಳಿಕ ಮನೆಯ ಸದಸ್ಯರು ಕೋಲು ಹಿಡಿದುಕೊಂಡು ಚಿರತೆಯನ್ನು ಹೆದರಿಸಿ ಓಡಿಸುವ ಪ್ರಯತ್ನ ಮಾಡಿದ್ದಾರೆ. ಈ ಘಟನೆ ನಡೆದ ಸ್ಥಳದ ಬಗ್ಗೆ ಮಾಹಿತಿ ಲಭಿಸಿಲ್ಲ.

Click

https://newsnotout.com/2024/12/panjab-former-dcm-under-attack-in-golden-temple/
https://newsnotout.com/2024/12/uppinangady-man-found-dea-in-under-constructed-building/
https://newsnotout.com/2024/12/ramayana-stage-play-kammada-news-viral-video-news-arrest/
See also  ಸುಳ್ಯ: ಬ್ಯಾಂಕ್ ನೌಕರ ಎಂದು ನಂಬಿಸಿ ಅಜ್ಜನಿಂದ 7 ಸಾವಿರ ರೂ. ಲಪಟಾಯಿಸಿದ ಕಳ್ಳ..! ಹಾಡಹಗಲೇ ಸುಳ್ಯದಲ್ಲಿ ಮತ್ತೊಂದು ವಂಚನೆ ಪ್ರಕರಣ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget