ನ್ಯೂಸ್ ನಾಟೌಟ್ : ಸಾಕುಪ್ರಾಣಿಗಳು ನಮ್ಮನ್ನು ಎಷ್ಟೋ ವಿಷಯಗಳಲ್ಲಿ ಅನುಕರಣೆ ಮಾಡುತ್ತದೆ. ಅದರಲ್ಲೂ ಬೆಕ್ಕು, ನಾಯಿ, ಪಕ್ಷಿ ಮನೆಯ ಯಜಮಾನ ಹೇಳುವುದನ್ನು ಕೇಳುತ್ತವೆ. ಆದರೆ ಸಹಜವಾಗಿ ದೇವಾಲಯದಲ್ಲಿ ಆನೆ , ಕೋತಿ ಶಿರಬಾಗುವುದನ್ನು ನೋಡಿರಬಹುದು. ಆದರೆ ಇಲ್ಲೊಂದು ಶ್ವಾನ ವಿಘ್ನ ನಿವಾರಕ ಶ್ರೀ ಗಣೇಶನಿಗೆ ಶಿರಬಾಗಿ ನಮಿಸಿದೆ.
ಪುಣೆಯ ದೇವಸ್ಥಾನವೊಂದರಲ್ಲಿ ಕಂಡು ಬಂದ ದೃಶ್ಯ ಇದೀಗ ಎಲ್ಲಡೆ ವೈರಲ್ ಆಗುತ್ತಿದೆ. ಶ್ವಾನವೊಂದು ತನ್ನ ಯಜಮಾನ ವಿಶಾಲ್ ಜೊತೆ ಗಣೇಶನ ದೇವಾಲಯಕ್ಕೆ ಬಂದಿದೆ. ಬಳಿಕ ಯಜಮಾನ ಯಾವ ರೀತಿ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಿದ್ದಾರೋ ಅದೇ ರೀತಿ ಶಿಸ್ತು , ಸಾಕ್ಷಾತ್ ವಿಘ್ನ ವಿನಾಯಕನಿಗೆ ಶ್ವಾನವೂ ನಮಸ್ಕರಿಸಿದೆ.