ಕ್ರೈಂದೇಶ-ವಿದೇಶವೈರಲ್ ನ್ಯೂಸ್

ವ್ಯಕ್ತಿಯನ್ನು ಹೊಡೆದು ಜೀವಂತವಾಗಿ ಮಣ್ಣಲ್ಲಿ ಹೂತ ಕ್ರೂರಿಗಳು..! ಆತನನ್ನು ಶ್ವಾನಗಳು ಬದುಕಿಸಿದ್ದೇಗೆ..?

ನ್ಯೂಸ್ ನಾಟೌಟ್: ಭೂ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ಮೇಲೆ ಹಲ್ಲೆ ನಡೆಸಿ, ಕತ್ತು ಹಿಸುಕಿದ್ದಲ್ಲದೆ, ಜೀವಂತ ಹೂತುಹಾಕಲಾಗಿತ್ತು. ಆದರೆ ಅದೃಷ್ಟವಶಾತ್ ತಾವು ಪಾರಾಗಿ ಬಂದಿದ್ದಾಗಿ ಉತ್ತರ ಪ್ರದೇಶದ ಆಗ್ರಾದ ವ್ಯಕ್ತಿಯೊಬ್ಬ ಹೇಳಿಕೊಂಡಿದ್ದಾರೆ. ನಾಲ್ಕು ಮಂದಿ ತನ್ನನ್ನು ಸಾಯಿಸಲು ಪ್ರಯತ್ನಿಸಿದ್ದು, ಹೂತು ಹಾಕಿದ್ದ ಮಣ್ಣನ್ನು ನಾಯಿಗಳು ತೆಗೆದಿದ್ದರಿಂದ ಉಸಿರಾಡುವಂತಾಯ್ತು, ಬಳಿಕ ಪ್ರಯತ್ನಪಟ್ಟು ಪವಾಡಸದೃಶ್ಯದಂತೆ ಬದುಕುಳಿದಿದ್ದಾಗಿ ಹೇಳಿಕೊಂಡಿದ್ದಾನೆ.

ನಾಲ್ವರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ಅವರನ್ನು ಪತ್ತೆ ಮಾಡಲು ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ರೂಪ್ ಕಿಶೋರ್ ದೂರಿನ ಸತ್ಯಾಸತ್ಯತೆಯ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಂಕಿತ್, ಗೌರವ್, ಕರಣ್ ಮತ್ತು ಆಕಾಶ್ ಎಂಬ ನಾಲ್ವರು, ಆಗ್ರಾದ ಅರ್ತೋನಿ ಪ್ರದೇಶದಲ್ಲಿ ಜುಲೈ 18ರಂದು ತನ್ನ ಮೇಲೆ ದಾಳಿ ನಡೆಸಿದ್ದಾಗಿ 24 ವರ್ಷದ ರೂಪ್ ಕಿಶೋರ್ ಆರೋಪಿಸಿದ್ದಾನೆ. ಹಲ್ಲೆ ಮಾಡಿದ ಅವರು, ಬಳಿಕ ತನ್ನ ಕತ್ತು ಹಿಸುಕಿದ್ದರು. ಸತ್ತೇ ಹೋಗಿದ್ದೇನೆ ಎಂದು ಭಾವಿಸಿ ಪ್ರಜ್ಞೆ ತಪ್ಪಿದ್ದ ನನ್ನನ್ನು ತಮ್ಮ ಜಮೀನಿನಲ್ಲಿ ಹೂತು ಹಾಕಿದ್ದರು ಎಂದು ತಿಳಿಸಿದ್ದಾನೆ.

ತನ್ನನ್ನು ಹೂತುಹಾಕಿದ್ದ ಜಾಗದಲ್ಲಿ ಗಾಯದಿಂದ ಮಾಂಸದ ವಾಸನೆ ಹಿಡಿದ ಬೀದಿ ನಾಯಿಗಳು, ಕಾಲಿನಿಂದ ಮಣ್ಣನ್ನು ಕೆದಕಿ ತೆಗೆದಿದ್ದವು. ಹೊರಗೆ ಕಾಣಿಸಿದ ದೇಹದ ಮಾಂಸವನ್ನು ನಾಯಿಗಳು ಕಚ್ಚಲು ಆರಂಭಿಸಿದಾಗ ತನಗೆ ಪ್ರಜ್ಞೆ ಮರುಕಳಿಸಿತ್ತು ಎಂದು ವಿವರಿಸಿದ್ದಾನೆ. ಹೇಗೋ ಮಣ್ಣಿನ ಅಡಿಯಿಂದ ಹೊರ ಬಂದು ನಾಯಿಗಳನ್ನು ಓಡಿಸಿದ ನಂತರ, ಸಮೀಪದ ಹಳ್ಳಿಯತ್ತ ನಡೆದುಕೊಂಡು ಹೋಗಿದ್ದೆ. ಅಲ್ಲಿನ ಗ್ರಾಮಸ್ಥರು ತನ್ನನ್ನು ಗುರುತಿಸಿ ಆಸ್ಪತ್ರೆಗೆ ದಾಖಲಿಸಿದರು. ಪ್ರಸ್ತುತ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ರೂಪ್ ಕಿಶೋರ್ ಹೇಳಿದ್ದಾನೆ.

Click

https://newsnotout.com/2024/08/prajwal-revanna-case-fsl-report-handover-to-the-sit-and-confirmed/
https://newsnotout.com/2024/08/wayanadu-army-dddbuild-bridge-kannada-news-kannada-landslide/
https://newsnotout.com/2024/08/mother-nomore-doubter-and-son-are-dipression-kannada-news/

Related posts

ಪ್ರಿಯಕರನ ಜೊತೆ ಓಡಿ ಹೋದ ಪತ್ನಿ: ಆತನ ಮಾಸ್ಟರ್ ಪ್ಲಾನ್ ಗೆ ನೆಟ್ಟಿಗರು ಶಾಕ್ !

ಸೊಂಟಕ್ಕೆ ವೇಲ್ ಬಿಗಿದು ಕೃಷಿ ಹೊಂಡಕ್ಕೆ ಹಾರಿದ ಪ್ರೇಮಿಗಳು..! ಗಂಡನ ಜೊತೆ ತವರು ಮನೆಗೆ ಹೋಗುವುದಾಗಿ ಹೇಳಿ ಬಂದಿದ್ದ 19ರ ಯುವತಿ..!

ರಾತ್ರೋರಾತ್ರಿ ಕಾಣೆಯಾದ 89 ಹುಡುಗಿಯರು..! ಬಾಲಕಿಯರ ಹಾಸ್ಟೆಲ್‌ನಲ್ಲಿ ಏನು ನಡೆಯುತ್ತಿದೆ? ಜಿಲ್ಲಾಧಿಕಾರಿ ದಿಢೀರ್ ಭೇಟಿಯಿಂದ ರಹಸ್ಯ ಬಯಲು!