ಕ್ರೈಂಬೆಂಗಳೂರುವೈರಲ್ ನ್ಯೂಸ್

ನಾಯಿ ಕದ್ದವನನ್ನು ನಾಯಿಯಂತೆ ಕೂಡಿ ಹಾಕಿದ ಸಿಬ್ಬಂದಿ, ನಾಯಿ ಗೂಡಲ್ಲೇ ಅನ್ನ ಆಹಾರ..!

ನ್ಯೂಸ್‌ನಾಟೌಟ್‌: ಕುಡಿದ ಮತ್ತಿನಲ್ಲಿ ಬಾರ್‌ನಲ್ಲಿದ್ದ ಲಾಬ್ರಡಾರ್ ನಾಯಿ ಕದ್ದೊಯ್ದನೆಂಬ ಕಾರಣಕ್ಕೆ ವ್ಯಕ್ತಿಯನ್ನು ಹಿಡಿದು ತಂದು ನಾಯಿ ಗೂಡಿನಲ್ಲಿಟ್ಟು ಅಮಾನವೀಯವಾಗಿ ನಡೆಸಿಕೊಂಡ ಘಟನೆ ವಿಜಯಪುರ ನಗರದ ಬಬಲೇಶ್ವರ ರಸ್ತೆಯಲ್ಲಿರುವ ಸಾಯಿ ಪ್ರಭಾತ ಬಾರ್‌ನಲ್ಲಿ ನಡೆದಿದೆ.

ಕುಡಿದ ಮತ್ತಿನಲ್ಲಿ ಬಾರ್‌ನಲ್ಲಿದ್ದ ಲಾಬ್ರಡಾರ್ ನಾಯಿ ಕದ್ದೊಯ್ದನೆಂಬ ಕಾರಣಕ್ಕೆ ವ್ಯಕ್ತಿಯನ್ನು ಹಿಡಿದು ತಂದು ನಾಯಿ ಗೂಡಿನಲ್ಲಿಟ್ಟು ಅಮಾನವೀಯವಾಗಿ ನಡೆಸಿಕೊಂಡ ಘಟನೆ ವಿಜಯಪುರ ನಗರದ ಬಬಲೇಶ್ವರ ರಸ್ತೆಯಲ್ಲಿರುವ ಸಾಯಿ ಪ್ರಭಾತ ಬಾರ್‌ನಲ್ಲಿ ನಡೆದಿದೆ. ಸೋಮು ಎಂಬಾತನನ್ನ ನಾಯಿ ಗೂಡಿನಲ್ಲಿ ಬಂಧಿಸಿಟ್ಟ ಬಾರ್ ಸಿಬ್ಬಂದಿ ಎಂದು ವರದಿ ತಿಳಿಸಿದೆ.

ಕುಡಿಯಲು ಬಾರ್‌ಗೆ ಬಂದಿದ್ದ ವೇಳೆ ಬಾರ್ ಮುಂದೆ ಲ್ಯಾಬ್ರಡಾರ್ ನಾಯಿಯನ್ನು ನೋಡಿದ್ದ. ನಾಯಿ ಮುದ್ದಾಗಿ ಕಾಣಿಸಿದ್ದರಿಂದಲೋ, ಕುಡಿದ ಮತ್ತಿನಲ್ಲೋ ಒಟ್ಟಿನಲ್ಲಿ ಬಾರ್‌ಗೆ ಬಂದಿದ್ದವನು ನಾಯಿ ಕದ್ದುಕೊಂಡು ಹೋಗಿದ್ದ. ಈ ವಿಚಾರ ಬಾರ್‌ ಸಿಬ್ಬಂದಿಗೆ ಗೊತ್ತಾಗಿ. ಕದ್ದವನನ್ನು ಹಿಡಿದು ತಂದಿದ್ದಾರೆ. ಬಳಿಕ ಬಾರ್‌ನಲ್ಲಿ ನಾಯಿ ಕಟ್ಟುತ್ತಿದ್ದ ಸ್ಥಳದಲ್ಲೇ ವ್ಯಕ್ತಿಯನ್ನು ಕೆಲ ಕಾಲ ಕಟ್ಟಿಹಾಕಿದ್ದಾರೆ.

ಅಲ್ಲಿಗೆ ಅನ್ನ ಆಹಾರವನ್ನೂ ನಾಯಿಗೆ ನೀಡುವಂತೆ ನೀಡಲು ಯತ್ನಿಸಿದ್ದಾರೆ ಎನ್ನಲಾಗಿದೆ. ಮಾಡಿದ ತಪ್ಪಿಗೆ ಅಸಹಾಯಕನಾಗಿ ನಾಯಿಯಂತೆ ಕುಳಿತಿರುವ ಕುಡುಕ. ಈ ದೃಶ್ಯ ನೋಡಿ ಬಾರ್‌ಗೆ ಬಂದವರಿಂದ ಆಕ್ಷೇಪ ವ್ಯಕ್ತವಾಗಿದೆ. ನಾಯಿ ಕದ್ದಿದ್ದಕ್ಕೆ ಈ ರೀತಿ ನಡೆಸಿಕೊಳ್ಳೋದಾ ಅಂತಾ ಬಾರ್ ಸಿಬ್ಬಂದಿ ವಿರುದ್ಧ ಗರಂ ಆಗಿರುವ ಜನರು. ಇದರಿಂದ ಎಚ್ಚೆತ್ತ ಸಿಬ್ಬಂದಿ ಕುಡುಕನನ್ನು ವಾಪಸ್ ಕಳಿಸಿದ್ದಾರೆ. ಆದರೆ ಈ ವಿಚಾರವಾಗಿ ಜನರಿಂದ ಜನರಿಗೆ ತಿಳಿದು ಇದೀಗ ವ್ಯಕ್ತಿಯನ್ನು ಅಮಾನುಷವಾಗಿ ನಡೆಸಿಕೊಂಡ ಬಾರ್ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ.

Related posts

ಗಣೇಶ ಚತುರ್ಥಿ ಪ್ರಯುಕ್ತ ಕೆಎಸ್​ಆರ್​ಟಿಸಿಯಿಂದ ಬಿಗ್ ಆಫರ್! ಹಬ್ಬದ ಪ್ರಯುಕ್ತ1200 ಹೆಚ್ಚುವರಿ ಬಸ್, ವಿಶೇಷ ರಿಯಾಯಿತಿ! ಎಲ್ಲಿಯೆಲ್ಲ ಲಭಿಸಲಿದೆ ಈ ಸೌಲಭ್ಯ?

232 ಕೋಟಿ ಸಾಲ ಮರುಪಾವತಿಸದೆ ವಂಚಸಿದ್ರಾ ರಮೇಶ್ ಜಾರಕಿಹೊಳಿ..? ಬಿಜೆಪಿ ಶಾಸಕನ ವಿರುದ್ಧ ಎಫ್‍ಐಆರ್ !

ಪಕ್ಕದ ಮನೆಯಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆ,ಇಣುಕಿ ನೋಡುತ್ತಿದ್ದ ಕಾಮುಕನ ಅರೆಸ್ಟ್ ಮಾಡಿ ಸ್ವರ್ಗ ತೋರಿಸಿದ ಪೊಲೀಸರು!