ನ್ಯೂಸ್ ನಾಟೌಟ್ : ಸಾಕು ನಾಯಿಯ ವಿಚಾರದಲ್ಲಿ ತೀವ್ರ ವಾಗ್ವಾದ ನಡೆದ ಪರಿಣಾಮ ಗೋವಾಗೆ ಪ್ರವಾಸಕ್ಕೆಂದು ಬಂದಿದ್ದ ವ್ಯಕ್ತಿ ಸ್ಥಳೀಯ ಮಹಿಳೆ ಮೇಲೆ ಕಾರು ಹತ್ತಿಸಿ ಬರ್ಬರ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ.
ಹತ್ಯೆ ಆರೋಪದ ಮೇಲೆ ದೆಹಲಿಯ ಪ್ರವಾಸಿಗನನ್ನು ಗೋವಾದಲ್ಲಿ ಬಂಧಿಸಲಾಗಿದೆ. ಮಾಂಡ್ರೆಮ್ ನಲ್ಲಿ ಸ್ಥಳೀಯ ಮಹಿಳೆಯೊಬ್ಬರು ಪ್ರವಾಸಿ ಕುಟುಂಬದ ಜೊತೆ ನಾಯಿಯನ್ನು ತಮ್ಮ ಮನೆಯ ಬಳಿ ತರದಂತೆ ವಿನಂತಿಸಿಕೊಂಡಿದ್ದಾರೆ. ಬಳಿಕ ಈ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಾರಿಯಾ ಫೆಲಿಜ್ ಫೆರ್ನಾಂಡಿಸ್ ಪ್ರವಾಸಿಗರಿಗೆ ನಾಯಿಯನ್ನು ತಮ್ಮ ಮನೆಯಿಂದ ದೂರವಿಡುವಂತೆ ಹೇಳಿದ್ದಾರೆ.
ಸ್ಥಳೀಯರ ಮನೆಯಲ್ಲಿದ್ದ ಸಾಕು ನಾಯಿಗೆ ಪ್ರವಾಸಿ ಕುಟುಂಬ ತಂದಿದ್ದ ನಾಯಿ ತೊಂದರೆ ನೀಡುತ್ತಿತ್ತು. ಇದು ತೀವ್ರ ವಾಗ್ವಾದಕ್ಕೆ ಕಾರಣವಾಯಿತು ಮತ್ತು ಅಂತಿಮವಾಗಿ ಎರಡೂ ಕಡೆಯವರ ನಡುವೆ ಘರ್ಷಣೆಗೆ ಕಾರಣವಾಯಿತು.
ಪ್ರವಾಸಿ ಗುಂಪಿನಲ್ಲಿದ್ದ ಓರ್ವ ಮಹಿಳೆ ಸ್ಥಳೀಯ ಫೆರ್ನಾಂಡಿಸ್ ಅವರ ಕೂದಲನ್ನು ಎಳೆದರುಆಗ ಆಕೆ ಕೆಳಗೆ ಬಿದ್ದರು. ಸ್ವಲ್ಪ ಸಮಯದ ನಂತರ, ಪ್ರವಾಸಿಗರಲ್ಲಿ ಒಬ್ಬರಾದ ದೀಪಕ್ ಬಾತ್ರಾ ಅತಿ ವೇಗದಲ್ಲಿ ಅವರ ಮೇಲೆ ಕಾರು ಚಾಲನೆ ಮಾಡಿ ಡಿಕ್ಕಿ ಹೊಡೆದರು ಎಂದು ಮೂಲಗಳು ತಿಳಿಸಿವೆ.
ಕಾರು ಸ್ಥಳೀಯ ಮಹಿಳೆಯ ದೇಹವನ್ನು ಸುಮಾರು 10 ಮೀಟರ್‌ಗಳಷ್ಟು ಎಳೆದೊಯ್ದಿತ್ತು ಮತ್ತು ಮಹಿಳೆಯ ಮಗ ಜೋಸೆಫ್ ರಕ್ಷಣೆ ಮಾಡಲು ಪ್ರಯತ್ನಿಸಿದಾಗ ಅವರ ಭುಜಕ್ಕೆ ಗಾಯವಾಗಿದೆ ಎನ್ನಲಾಗಿದೆ.
ಗೋವಾ ಪೊಲೀಸರು ದೀಪಕ್ ಬಾತ್ರಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.