ನ್ಯೂಸ್ ನಾಟೌಟ್: ಬೀದಿ ನಾಯಿಯನ್ನು ಮುದ್ದಾಡಲು ಹೋಗಿ ವಾಚ್ ಮ್ಯಾನ್ ಒಬ್ರು ಫಜೀತಿಗೆ ಸಿಲುಕಿದ್ದಾರೆ. ವ್ಯಕ್ತಿ ನಾಯಿಯನ್ನು ಮುದ್ದಾಡುತ್ತಾ ಕುಳಿತಿದ್ದ ವೇಳೆ ಅಲ್ಲಿಗೆ ಬಂದಂತಹ ಇನ್ನೊಂದು ಶ್ವಾನ ಅವರ ಮೇಲೆ ಏಕಾಏಕಿ ದಾಳಿ ನಡೆಸಿದೆ. ಹರಸಾಹಸ ಪಟ್ಟು ಶ್ವಾನದ ದಾಳಿಯಿಂದ ವಾಚ್ ಮ್ಯಾನ್ ಪಾರಾಗಿದ್ದು, ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ. ವಿಡಿಯೋದ ಪ್ರಕಾರ ಈ ಘಟನೆ ಮಾರ್ಚ್ 30ರಂದು ನಡೆದಿದೆ.
ಕಟ್ಟಡದ ಹೊರ ಭಾಗದಲ್ಲಿ ಒಂದಷ್ಟು ಶ್ವಾನಗಳು ಕುಳಿತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದಂತಹ ವಾಚ್ ಮ್ಯಾನ್ ಒಂದು ನಾಯಿಯನ್ನು ಮುದ್ದಾಡಿದ್ದಾರೆ. ಆ ಸಂದರ್ಭದಲ್ಲಿ ಅವರ ಪಕ್ಕಕ್ಕೆ ಬಂದ ಮತ್ತೊಂದು ಶ್ವಾನ ಹಸಿವಿಗೋ, ಕೋಪಕ್ಕೋ, ದ್ವೇಷಕ್ಕೋ ಅಥವಾ ನನ್ನನ್ನು ಮುದ್ದಾಡಲಿಲ್ಲವೆಂಬ ಅಸೂಯೆಗೋ ವಾಚ್ ಮ್ಯಾನ್ ಮೇಲೆ ಏಕಾಏಕಿ ದಾಳಿ ನಡೆಸಿ ಕೈಯನ್ನು ಕಚ್ಚಿ ಹಿಡಿದು ಎಳೆದಾಡಿದೆ.
ಬಳಿಕ ಹರಸಾಹಸ ಪಟ್ಟು ನಾಯಿಯ ಹಿಡಿತದಿಂದ ಬಿಡಿಸಿಕೊಂಡಿದ್ದಾರೆ. ಬೀದಿ ನಾಯಿಗಳ ಜೊತೆ ಸಲುಗೆಯಿಂದ ಕಾಳಜಿ ತೋರುವ ಮೊದಲು ಎಚ್ಚರಿಕೆ ವಹಿಸುವುದು ಉತ್ತಮ.
Dog attacks watchman outside a residential society !
pic.twitter.com/ISLpZWy3PE— Ghar Ke Kalesh (@gharkekalesh) March 31, 2025
ವಿಡಿಯೋದಲ್ಲಿ ಶ್ವಾನವೊಂದು ವಾಚ್ ಮ್ಯಾನ್ ಮೇಲೆ ಏಕಾಏಕಿ ದಾಳಿ ನಡೆಸುವಂತಹ ಆಘಾತಕಾರಿ ದೃಶ್ಯವನ್ನು ಕಾಣಬಹುದು. ನಾಯಿಯನ್ನು ಮುದ್ದಾಡುತ್ತಾ ನಿಂತಿದ್ದ ವೇಳೆಯೇ ಬಂದಂತಹ ಮತ್ತೊಂದು ಶ್ವಾನ ವಾಚ್ ಮ್ಯಾನ್ ಕೈಯನ್ನು ಕಚ್ಚಿ ಎಳೆದಾಡಿದೆ. ಹಾಗೋ ಹೀಗೋ ಹೋರಾಡಿ ಆ ವ್ಯಕ್ತಿ ಅಪಾಯದಿಂದ ಪಾರಾಗಿದ್ದಾರೆ.