ದೇಶ-ಪ್ರಪಂಚ

ರೇಷನ್ ಕಾರ್ಡ್ ನಲ್ಲಿ ‘ದತ್ತಾ’ ಬದಲಿಗೆ ‘ಕುತ್ತಾ’ , ಪ್ರತಿಕ್ರಿಯೆ ಬೌ ಬೌ..!

ನ್ಯೂಸ್ ನಾಟೌಟ್ : ರೇಷನ್ ಕಾರ್ಡ್ ನಲ್ಲಿ ವ್ಯಕ್ತಿಯೊಬ್ಬರ ಹೆಸರನ್ನು ದತ್ತಾ ಬದಲು ಕುತ್ತಾ(ನಾಯಿ) ಎಂದು ತಪ್ಪಾಗಿ ನಮೂದಿಸಿದಕ್ಕೆ ಅಧಿಕಾರಿಗಳಿಗೆ ತಕ್ಕಂತೆ ಪಾಠ ಕಲಿಸಿರುವ ಘಟನೆ ಪಶ್ಮಿಮ ಬಂಗಾಳದ ಬಂಕುರಾದಲ್ಲಿ ನಡೆದಿದೆ.

ಶ್ರೀಕಾಂತಿ ಕುಮಾರ್ ದತ್ತಾ ಎಂಬ ವ್ಯಕ್ತಿಯ ಹೆಸರನ್ನು ದತ್ತಾ ಬದಲು ಕುತ್ತಾ ಎಂದು ತಪ್ಪಾಗಿ ದಾಖಲಿಸಲಾಗಿತ್ತು. ಇದನ್ನು ತಿಳಿದ ಶ್ರೀ ಕಾಂತಿ ಕುಮಾರ್ ಬಂಕುರಾದ ಸ್ಥಳೀಯ ಪಾಲಿಕೆ ಅಧಿಕಾರಿ ಕಾರಿನಲ್ಲಿ ಬರುವ ಸಂದರ್ಭ ಈತ ಕಾರಿನ ಎದುರು ಹೋಗಿ ಪ್ರತಿಭಟನೆಯಂತೆ ಒಂದು ಮಾತು ಆಡದೆ ಬರೀ ಬೌ.. ಬೌ ಎಂದೇ ಬೊಗಳಿದ್ದಾನೆ. ಇದನ್ನು ನೋಡಿದ ಅಧಿಕಾರಿಗಳಿಗೆ ಮನಸ್ತಾಪ ಉಂಟಾಗಿದೆ. ಕೊನೆಗೂ ಶ್ರಿಕಾಂತಿ ಸುಮ್ಮನೆ ಕೂರದೆ ನಾಯಿಯ ಹಾಗೇ ಬೊಗಳಿ ಪ್ರತಿಭಟನೆ ಮಾಡಿರುವ ವಿಡಿಯೋ ಒಂದು ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆತನ ವರ್ತನೆ ನೋಡಿ ಬೇಸತ್ತ ಅಧಿಕಾರಿಗಳು ಹೆಸರು ಸರಿಮಾಡುತ್ತೇವೆ ಎಂದು ಭರವಸೆ ನೀಡಿದರು.

Related posts

ಲಿವ್ ಇನ್ ನಲ್ಲಿ ಹಿಂದೂ ಯುವತಿ, ಮುಸ್ಲಿಂ ಯುವಕ : ಆತನಿಂದಲೇ ಯುವತಿಯ ಬರ್ಬರ ಕೊಲೆ

ಹೆರಿಗೆಯಾದ ಕೆಲವೇ ಗಂಟೆಯಲ್ಲಿ ಪರೀಕ್ಷೆ ಬರೆದ ಯುವತಿ, ವಿಶ್ರಾಂತಿಯನ್ನು ನಿರಾಕರಿಸಿ ವಿಜ್ಞಾನ ಪರೀಕ್ಷೆಯನ್ನು ಬರೆದೇ ಬಿಟ್ಟಳು

ಮೆಡಿಕಲ್‌ಗೆ ಹೋದವ ಕೋಟ್ಯಾಧಿಪತಿಯಾದದ್ದೇಗೆ..? ನಾಲ್ಕೇ ಗಂಟೆಯಲ್ಲಿ ವೃದ್ಧನ ಬದುಕು ಬದಲಾದದ್ದೇ ವಿಸ್ಮಯ!