Uncategorized

ಮಗುವಿನ ಮೇಲೆ ದಾಳಿ ನಡೆಸಿ ಕೊಂದ ಬೀದಿ ನಾಯಿಗಳು

ನ್ಯೂಸ್ ನಾಟೌಟ್ : ಬೀದಿ ನಾಯಿಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದಾರಿಯಲ್ಲಿ ಹೋಗುವ ಅಮಾಯಕ ಮಕ್ಕಳು, ವಯಸ್ಸಾದವರ ಮೇಲೆ ನಾಯಿಗಳು ದಾಳಿ ನಡೆಸುತ್ತಿವೆ. ಇದೀಗ ಬೀದಿ ನಾಯಿಗಳ ದಾಳಿಗೆ ನಾಲ್ಕು ವರ್ಷದ ಮಗುವೊಂದು ದಾರುಣವಾಗಿ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.

ಭದ್ರಾವತಿ ತಾಲೂಕಿನ ದೊಣಬಘಟ್ಟ ಗ್ರಾಮದ ೪ ವ‍ರ್ಷದ ಮಗು ಸೈಯದ್ ಮದನಿ ಸಾವನ್ನಪ್ಪಿದ್ದ ನತದೃಷ್ಟ ಬಾಲಕ. ಸಂಜೆ ಸುಮಾರು ೪ ಗಂಟೆಗೆ ಮಗುವಿನ ತಂದೆ ಜಮೀನಿಗೆ ಹೋಗಿದ್ದ ಸಂದರ್ಭದಲ್ಲಿ ತಂದೆಯನ್ನು ಮಗು ಹಿಂಬಾಲಿಸಿಕೊಂಡು ಹೋಗುವಾಗ ಸುಮಾರು ೭-೮ ನಾಯಿಗಳ ಕಂಡ ಮಗು ಹೆದರಿ ಓಡಿದ್ದು ನಾಯಿಗಳು ಮಗುವಿನ ಮೇಲೆ ದಾಳಿ ಮಾಡಿದೆ. ಮಗು ತೀವ್ರ ಅಸ್ವಸ್ಥೆಗೊಂಡಿದ್ದ ಮಗುವನ್ನು ಕೂಡಲೇ ಶಿವಮೊಗ್ಗದ ಮೆಗನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಮಗು ಮೃತಟ್ಟಿದೆ. ಇತ್ತ ಮಗುವನ್ನು ಕಳೆದುಕೊಂಡ ಪೋ‍‍ಷಕರ ಆಕ್ರಂದನ ಮುಗಿಲು ಮುಟ್ಟಿದೆ.

Related posts

ಮದುವೆಯಾಗಿ 30 ದಿನಕ್ಕೆ ಪ್ರಿಯತಮನೊಂದಿಗೆ ಓಡಿಹೋದ ಹೆಂಡ್ತಿ..!ಪತ್ನಿ,ಪ್ರಿಯಕರನನ್ನು ಕೊಚ್ಚಿ ಕೊಲೆಗೈದ ಮಾಜಿ ಪತಿ..!

ಆರ್‌ಎಸ್‌ಎಸ್‌ ಚಡ್ಡಿಗೆ ಬೆಂಕಿ ಇಟ್ಟ ಕಾಂಗ್ರೆಸ್‌..!

ಪೆರಾಜೆ: ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು, ತೆರವು ಕಾರ್ಯಾಚರಣೆ ಆರಂಭ