ಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ರಾತ್ರಿ ಬರ್ತ್ ಡೇ ಪಾರ್ಟಿ ಮಾಡುತ್ತಿದ್ದ ಹೋಟೆಲ್ ಗೆ ನುಗ್ಗಿದ್ದ ನಾಯಿ..! ಓಡಿಸಲು ಹೋದವ 3ನೇ ಮಹಡಿಯಿಂದ ಬಿದ್ದು ಸಾವು..! ಇಲ್ಲಿದೆ ವೈರಲ್ ವಿಡಿಯೋ

237

ನ್ಯೂಸ್ ನಾಟೌಟ್: ಬರ್ತ್ ಡೇ ಪಾರ್ಟಿ ಮಾಡಲು ಖಾಸಗಿ ಹೋಟೆಲ್ ಗೆ ಆಗಮಿಸಿದ್ದ ವ್ಯಕ್ತಿಯೋರ್ವ ನಾಯಿಯನ್ನು ಓಡಿಸುವ ಭರದಲ್ಲಿ ಅಚಾನಕ್ಕಾಗಿ 3ನೇ ಅಂತಸ್ತಿನಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಹೈದರಾಬಾದ್ ನಲ್ಲಿ ನಿನ್ನೆ ರಾತ್ರಿ(ಅ.21) ನಡೆದಿದೆ.

ರಾಮಚಂದ್ರಾಪುರದ ಅಶೋಕನಗರದಲ್ಲಿ ನೆಲೆಸಿರುವ ಉದಯ್ ಕುಮಾರ್ ಎಂಬುವರು ತಮ್ಮ ಸ್ನೇಹಿತರೊಂದಿಗೆ ವಿವಿ ಪ್ರೈಡ್ ಹೋಟೆಲ್ ಗೆ ತೆರಳಿದ್ದರು.. ಗೆಳೆಯನ ಹುಟ್ಟುಹಬ್ಬದ ನಿಮಿತ್ತ ಚಂದಾನಗರದ ವಿವಿ ಪ್ರೈಡ್ ನ ಮೂರನೇ ಮಹಡಿಯ ಕೊಠಡಿಯಲ್ಲಿ ಪಾರ್ಟಿ ಮಾಡಲಾಗಿತ್ತು.

ಪಾರ್ಟಿ ಮಧ್ಯೆ ಹೋಟೆಲ್ ಕೊಠಡಿಯಿಂದ ಹೊರಬಂದ ಉದಯ್ ಕುಮಾರ್ ಅಲ್ಲಿದ್ದ ನಾಯಿಯನ್ನು ನೋಡಿದ್ದು, ಕೂಡಲೇ ಅದನ್ನು ಅಲ್ಲಿಂದ ಓಡಿಸಲು ಮುಂದಾಗಿದ್ದಾರೆ. ಈ ವೇಳೆ ನಾಯಿ ಓಡಿದ್ದು ಅದರ ಹಿಂದೆಯೇ ಉದಯ್ ಕುಮಾರ್ ಕೂಡ ಓಡಿದ್ದಾರೆ. ಈ ವೇಳೆ ಉದಯ್ ಕುಮಾರ್ ಹೊಟೆಲ್ ನ ಗೋಡೆಯ ತೆರೆದ ಕಿಟಕಿಗೆ ಢಿಕ್ಕಿಯಾಗಿ ಆಯ ತಪ್ಪಿ ಕಿಟಕಿ ಒಳಗಿನಿಂದ ಕೆಳಗೆ ಬಿದ್ದಿದ್ದಾರೆ.

ಬಿದ್ದ ರಭಸಕ್ಕೆ ಉದಯ್ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ಆಗಮಿಸಿ ವಿವರ ಸಂಗ್ರಹಿಸಿದ್ದು, ಮೃತರು ಉದಯ್(24) ಪಾಲಿಟೆಕ್ನಿಕ್ ವಿದ್ಯಾರ್ಥಿ ಎಂದು ತಿಳಿದುಬಂದಿದೆ.
ಹೈದರಾಬಾದ್ ನ ಚಂದಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿ ಪ್ರೈಡ್ ಹೋಟೆಲ್ ನಲ್ಲಿ ಈ ಘಟನೆ ನಡೆದಿದ್ದು, ಘಟನೆಯ ಸಂಪೂರ್ಣ ವಿಡಿಯೋ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

Click

https://newsnotout.com/2024/10/5-year-kannada-news-court-duplicate-court-setup-kannada-news/
https://newsnotout.com/2024/10/isrel-and-hijmu-kannada-news-gold-and-money-found-in-tannel/
https://newsnotout.com/2024/10/cab-driver-kannada-news-viral-news-romance-viral-notice/
https://newsnotout.com/2024/10/kannada-news-actor-darshan-kannada-news-health-issue-highcourt/
See also  ಶಂಕಿತ ಉಗ್ರ ಶಾರಿಕ್ ಬಹುತೇಕ ಚೇತರಿಕೆ:ತನಿಖೆ ಚುರುಕುಗೊಳಿಸಿದ ಎನ್ ಐ ಎ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget