ವೈರಲ್ ನ್ಯೂಸ್ಸಿನಿಮಾಸುಳ್ಯ

ದೊಡ್ಡಡ್ಕದ ಸ್ವಾಮಿ ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿದ ಕಾಂತಾರ ಸಿನಿಮಾ ನಟಿ, ಸಪ್ತಮಿ ಗೌಡ ಜೊತೆ ಫೋಟೋಗಾಗಿ ಮುಗಿಬಿದ್ದ ಅಭಿಮಾನಿಗಳು

281

ನ್ಯೂಸ್ ನಾಟೌಟ್: ‘ಕಾಂತಾರ’ ಸಿನಿಮಾ ಖ್ಯಾತಿಯ ನಟಿ ಸಪ್ತಮಿ ಗೌಡ ಗುರುವಾರ ಸುಳ್ಯ ತಾಲೂಕಿನ ಗೂನಡ್ಕದ ಸಮೀಪವಿರುವ ದೊಡ್ಡಡ್ಕದ ಸ್ವಾಮಿ ಕೊರಗಜ್ಜನ ಸನ್ನಿಧಿಗೆ ಬಂದು ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಅವರ ಕುಟುಂಬದ ಸದಸ್ಯರು ಕೂಡ ಇದ್ದರು ಎಂದು ತಿಳಿದು ಬಂದಿದೆ. ನಟಿ ಸಪ್ತಮಿ ಗೌಡ ಆಗಮಿಸಿದ್ದರಿಂದ ಅಭಿಮಾನಿಗಳು ಸೆಲ್ಫಿ ತೆಗೆಯುವುದಕ್ಕೆ ಮುಗಿಬಿದ್ದರು.

ಸಪ್ತಮಿ ಎಲ್ಲರಿಗೂ ಸೆಲ್ಫಿ ನೀಡಿದ ಬಳಿಕ ಅಲ್ಲಿಂದ ತೆರಳಿದರು. 12 ದೈವದ ಬದಲಿಗೆ 13 ದೈವ ಕಾಣಿಸಿಕೊಂಡಿರುವ ಪವಾಡ ಕ್ಷೇತ್ರವಾಗಿರುವ ದೊಡ್ಡಡ್ಕಕ್ಕೆ ಇತ್ತೀಚಿನ ದಿನಗಳಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ಹರಿಕೆಗಳನ್ನು ಸಲ್ಲಿಸುತ್ತಿದ್ದಾರೆ.

See also  ಮಡಿಕೇರಿ: 150 ಗಂಟೆಗಳಿಗೂ ಅಧಿಕ ಕಾಲ ಯುದ್ಧ ವಿಮಾನ ಹಾರಾಟ ನಡೆಸಿ ಸಾಧನೆ , ಕೊಡಗಿನ ಸಚಿನ್ ಬೇಂಬೊರೆ ವಾಯು ಸೇನೆಯ ಫ್ಲೈಯಿಂಗ್ ಆಫೀಸರ್ ಆಗಿ ನೇಮಕ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget