ಕ್ರೈಂದೇಶ-ವಿದೇಶರಾಜ್ಯವೈರಲ್ ನ್ಯೂಸ್

ವೈದ್ಯೆಯ ಅತ್ಯಾಚಾರ, ಹತ್ಯೆ ಖಂಡಿಸಿ ನಾಳೆ (ಆ.17) ದೇಶಾದ್ಯಂತ ವೈದ್ಯರ ಬೃಹತ್ ಪ್ರತಿಭಟನೆ..! ಹೊರ ರೋಗಿಗಳ ವಿಭಾಗದ ಸೇವೆ ಸ್ಥಗಿತ, ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ಕೋಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆಸ್ಪತ್ರೆಯಲ್ಲಿ ನಡೆದಿದ್ದ ವೈದ್ಯೆಯ ಅತ್ಯಾಚಾರ ಹಾಗೂ ಅಮಾನುಷ ಕೊಲೆ ಪ್ರಕರಣ ಉಗ್ರ ಸ್ವರೂಪ ಪಡೆದುಕೊಂಡಿದೆ. ಕೃತ್ಯ ಖಂಡಿಸಿ ದೇಶಾದ್ಯಂತ ಆ. 17ರಂದು ದೇಶಾದ್ಯಂತ ವೈದ್ಯಕೀಯ ಸೇವೆಗಳನ್ನು ಸ್ಥಗಿತಗೊಳಿಸಲು ಭಾರತೀಯ ವೈದ್ಯಕೀಯ ಸಂಘ (ಐಎಂಎ) ನಿರ್ಧರಿಸಿದೆ.

ಶನಿವಾರ ಬೆಳಿಗ್ಗೆ 6ರಿಂದ ಭಾನುವಾರ ಬೆಳಿಗ್ಗೆ 6 ಗಂಟೆವರೆಗೆ ಅಂದರೆ 24 ಗಂಟೆಗಳ ಕಾಲ ಎಲ್ಲ ಸೇವೆಗಳಿಂದ ವೈದ್ಯರು ದೂರ ಉಳಿಯಲಿದ್ದಾರೆ ಎಂದು ಐಎಂಎ ಪ್ರಕಟಿಸಿದೆ. 24 ಗಂಟೆಗಳ ಕಾಲ ದೇಶಾದ್ಯಂತ ಸರ್ಕಾರಿ, ಖಾಸಗಿ ಮತ್ತು ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಎಲ್ಲಾ ಒಪಿಡಿಗಳು ಮತ್ತು ಶಸ್ತ್ರಚಿಕಿತ್ಸೆಗಳು ಕಾರ್ಯನಿರ್ವಹಿಸುವುದಿಲ್ಲ ಹೇಳಿದೆ.

ಕೋಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಬುಧವಾರ ಪ್ರತಿಭಟನಾನಿರತ ಸ್ಥಳೀಯರು ಮತ್ತು ಕಿರಿಯ ವೈದ್ಯರ ಮೇಲೆ ಮಧ್ಯರಾತ್ರಿ ಗುಂಪೊಂದು ದಾಳಿಯ ನಂತರ ಐಎಂಎ ತನ್ನ ರಾಜ್ಯ ಶಾಖೆಗಳೊಂದಿಗೆ ತುರ್ತು ಸಭೆ ನಡೆಸಿತು. ಆದಾಗ್ಯೂ, ಒಪಿಡಿಗಳು ಬಂದ್ ಆಗಿದ್ದರೂ ಅಪಘಾತ ಮತ್ತು ತುರ್ತು ಸೇವೆಗಳಿಗೆ ಅಡ್ಡಿಯಾಗುವುದಿಲ್ಲ ಎಂದು ಐಎಂಎ ಹೇಳಿದೆ.

Click

https://newsnotout.com/2024/08/theft-and-live-in-forest-suspence-story-of-theef-who-was-arrested/
https://newsnotout.com/2024/08/mangluru-bengaluru-high-private-bus-collision-kannada-news/
https://newsnotout.com/2024/08/doctors-kannada-news-nurse-darmendra-kumar-case-file-protest/
https://newsnotout.com/2024/08/case-on-constable-and-he-selected-for-cm-medal-award-in-independence-day/
https://newsnotout.com/2024/08/guarantee-scheme-ddd-fkarnataka-govt-bpl-viral-news/
https://newsnotout.com/2024/08/doctor-issue-misbehaviour-west-bengal-kannada-news-cm/
https://newsnotout.com/2024/08/atal-bihari-vajpayee-remembering-kannada-news-narendra-modi-and-others/

Related posts

ಬಿಜೆಪಿ ಮಿತ್ರ ಪಕ್ಷಕ್ಕೆ ಮೂರು ಗೆಲುವು, ಗೆಲುವಿನ ಖಾತೆ ತೆರೆದ ಬಿಜೆಪಿ, ಕರ್ನಾಟಕದಲ್ಲಿ ಜಯದ ಖಾತೆ ತೆರೆದ ಜೆಡಿಎಸ್

ಫೋನ್​ ರಿಪೇರಿ ಮಾಡಿಸಿಲ್ಲವೆಂದು ಯವತಿ ಆತ್ಮಹತ್ಯೆ..! ಅಷ್ಟಕ್ಕೂ ಆಕೆಯ ತಾಯಿ ಹೇಳಿದ್ದೇನು..?

ಯುವಕನನ್ನು ತಂದೆಯೆದುರೇ ತಿಂದು ಹಾಕಿದ ಶಾರ್ಕ್! ,ಅಪ್ಪ ಅಪ್ಪ ಎನ್ನುತ್ತಲೇ ಪ್ರಾಣ ಬಿಟ್ಟ ಮಗ-ವಿಡಿಯೋ ವೀಕ್ಷಿಸಿ