ಕ್ರೈಂದೇಶ-ವಿದೇಶವೈರಲ್ ನ್ಯೂಸ್

ವೈದ್ಯೆಯ ಹತ್ಯೆ ಮತ್ತು ಅತ್ಯಾಚಾರ ಕೇಸ್ ಗೆ ಟ್ವಿಸ್ಟ್..! ಪ್ರಾಥಮಿಕ ತನಿಖೆ ನಡೆಸಿದ್ದ ಠಾಣಾಧಿಕಾರಿಯೇ ಅರೆಸ್ಟ್..!

ನ್ಯೂಸ್ ನಾಟೌಟ್: ಕೊಲ್ಕತ್ತದ ಟ್ರೈನಿ ವೈದ್ಯೆ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಹತ್ಯೆ ಪ್ರಕರಣದಲ್ಲಿ ಆರ್.ಜಿ ಕರ್‌ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಹಾಗೂ ಘಟನೆಯ ಪ್ರಾಥಮಿಕ ತನಿಖೆ ನಡೆಸಿದ್ದ ಠಾಣಾಧಿಕಾರಿಯನ್ನು ಶನಿವಾರ (ಸೆ.14) ರಾತ್ರಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

ತನಿಖಾಧಿಕಾರಿಗಳ ದಿಕ್ಕು ತಪ್ಪಿಸುವಿಕೆ ಮತ್ತು ಸಾಕ್ಷ್ಯ ನಾಶದ ಕಾರಣದಿಂದ ಅವರ ಬಂಧನವಾಗಿದೆ ಎಂದು ವರದಿಯಾಗಿದೆ.
ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಪೊಲೀಸ್ ಅಧಿಕಾರಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ಹಾಳುಮಾಡಲು ಪ್ರಯತ್ನಿಸಿದ್ದರು.

ಪ್ರತಿಭಟನಾ ನಿರತ ವೈದ್ಯರು ಶನಿವಾರ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಲು ಸಿಎಂ ನಿವಾಸಕ್ಕೆ ತೆರಳಿದ್ದರು. ಆದರೆ ಮಾತುಕತೆಯನ್ನು ನೇರಪ್ರಸಾರ ಮಾಡುವದಕ್ಕೆ ಮಮತಾ ಬ್ಯಾನರ್ಜಿ ವಿರೋಧ ವ್ಯಕ್ತಪಡಿಸಿದ ಕಾರಣಕ್ಕೆ ಭೇಟಿಯಾಗದೆ ಹಿಂತಿರುಗಿದ್ದರು. ಇದಾದ ಕೆಲವೇ ಸಮಯದಲ್ಲಿ ಈ ಬಂಧನವಾಗಿದೆ.
ಆರ್.ಜಿ ಕರ್‌ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್‌ ಹಾಲ್‌ ನಲ್ಲಿ ಆಗಸ್ಟ್‌ 9ರಂದು ಈ ಅಮಾನವೀಯ ಘಟನೆ ನಡೆದಿತ್ತು.

Click

https://newsnotout.com/2024/09/munirathna-case-caste-and-threat-issue-kannada-news-2-days-police-custody/
https://newsnotout.com/2024/09/wife-for-sale-to-repay-the-loan-amount-kannada-news-police-arrested/
https://newsnotout.com/2024/09/russia-army-and-indian-people-returned-safely-to-karnataka/

Related posts

ಉಡುಪಿ: ಕಾಂಗ್ರೆಸ್‌ನ ಯುವ ನಾಯಕಿಗೆ ಚೂರಿ ಇರಿತ

ಸೋಣಂಗೇರಿ: ಕಾರು ಮತ್ತು ಟಿಟಿ ನಡುವೆ ಡಿಕ್ಕಿ..! ಎರಡು ವಾಹನ ಜಖಂ..!

ಸುಳ್ಯ: ಪೇರಾಲಿನ ಯುವಕ ನೇಣು ಬಿಗಿದು ಆತ್ಮಹತ್ಯೆ, ಯುವಕನ ಈ ನಿರ್ಧಾರಕ್ಕೆ ಕಾರಣವೇನು ಗೊತ್ತಾ..?