Latestಕರಾವಳಿ

ಸುಳ್ಯ:ಕೆ.ವಿ.ಜಿ ಮೆಡಿಕಲ್ ಕಾಲೇಜು & ಆಸ್ಪತ್ರೆಯ ವಿಶೇಷ ಆರೈಕೆ ವಿಭಾಗದ ಆಡಳಿತಾಧಿಕಾರಿ ಪ್ರಮೋದ್ ಕೆ.ಜೆ.ಯವರಿಗೆ ಡಾಕ್ಟರೇಟ್ ಪದವಿ; ರಾಜ್ಯಪಾಲ ಥಾವರ್ ಚಂದ್  ಗೆಹ್ಲೋಟ್ ರಿಂದ ಪದವಿ ಸ್ವೀಕಾರ

253

ನ್ಯೂಸ್ ನಾಟೌಟ್: ಸುಳ್ಯದ ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವಿಶೇಷ ಆರೈಕೆ ವಿಭಾಗದ ಆಡಳಿತಾಧಿಕಾರಿ ಪ್ರಮೋದ್ ಕೆ.ಜೆ. ಯವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ.ಮೈಸೂರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮ್ಯಾನೇಜ್‌ಮೆಂಟ್‌ ಸ್ಟಡೀಸ್ ವಿಭಾಗದಿಂದ ಆರ್ಡಿನಲ್ ಯುಟಿಲಿಟಿ ಆಫ್ ಹೆಲ್ತ್ ಕೇ‌ರ್ ಇನ್ನರ್ಮೇಷನ್ ಟೆಕ್ನಾಲಜಿ – ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಸಿದ ಅಧ್ಯಯನ” ವಿಷಯದ ಕುರಿತು ಮಂಡಿಸಿದ ಸಂಶೋಧನಾ ಪ್ರಬಂಧಕ್ಕಾಗಿ ಡಾಕ್ಟರೇಟ್ (Ph.D.) ಪದವಿ ನೀಡಲಾಗಿದೆ.

ಇವರು ಡಾ. ಎಚ್. ರಾಜೇಶ್ವರಿ, ಅಸೋಸಿಯೇಟ್ ಪ್ರೊಫೆಸರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಮಾ. 27 ರಂದು ನಡೆದ ವಿಶ್ವವಿದ್ಯಾನಿಲಯದ 20ನೇ ಘಟಿಕೋತ್ಸವದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್  ಗೆಹ್ಲೋಟ್ ಅವರಿಂದ ಪದವಿ ಸ್ವೀಕರಿಸಿದರು.ಇವರ ಈ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ, ಡೀನ್, ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

See also  19 ವರ್ಷದ ಯುವತಿ ಮೇಲೆ 7 ದಿನ 23 ಮಂದಿಯಿಂದ ಅತ್ಯಾಚಾರ..! ಇನ್ ಸ್ಟಾಗ್ರಾಮ್ ಸ್ನೇಹಿತರಿಂದಲೇ ಕೃತ್ಯ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget