ನ್ಯೂಸ್ ನಾಟೌಟ್ : ತಮ್ಮ ಜೀವಿತಾವಧಿಯಲ್ಲಿ ಹೃದ್ರೋಗ ತಜ್ಞರಾಗಿ ಸಾವಿರಾರು ರೋಗಿಗಳ ಸೇವೆ ಮಾಡುತ್ತಿದ್ದ ಪ್ರಸಿದ್ದ ವೈದ್ಯ ಹೃದಯಾಘಾತದಿಂದ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಡಾ.ಗೌರವ್ ಗಾಂಧಿ(41) ಮೃತ ದುರ್ದೈವಿ ಎಂದು ತಿಳಿದು ಬಂದಿದೆ.
ಸುಮಾರು 16 ಸಾವಿರಕ್ಕೂ ಹೆಚ್ಚು ಹೃದಯ ಸಂಬಂಧಿತ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಮಾಡಿರುವ ಹೆಗ್ಗಳಿಕೆ ಇವರದ್ದು. ಈ ಘಟನೆ ನಡೆದಿದ್ದು ಗುಜರಾತಿನ ಜಾಮ್‌ನಗರದಲ್ಲಿ ಎಂದು ತಿಳಿದು ಬಂದಿದೆ. ವೈದ್ಯರ ಸಾವಿನಿಂದ ಶೋಕ ಮಡುಗಟ್ಟಿದೆ.
ಈ ಕುರಿತು ಪೊಲೀಸ್ ಅಧಿಕಾರಿ ಒಬ್ಬರು ಪ್ರತಿಕ್ರಿಯಿಸಿದ್ದು ಸೋಮವಾರ ರಾತ್ರಿ ಎಂದಿನಂತೆ ತಮ್ಮ ಕಾರ್ಯ ಮುಗಿಸಿ ಮನೆಗೆ ವಾಪಸ್ಸಾಗಿದ್ದ ವೈದ್ಯ ಗಾಂಧಿ ಅವರು ಮಲಗಿರುವಾಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ಧಾರೆ. ಎಂದಿನಂತೆ ಕುಟುಂಬಸ್ಥರ ಜೊತೆಗೆ ಆಹಾರ ಸೇವಿಸಿದ ಗೌರವ್ ಸಾಮಾನ್ಯವಾಗಿ ಇದ್ದರೂ ಅವರ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಂಡಿರಲಿಲ್ಲ.