ನ್ಯೂಸ್ ನಾಟೌಟ್: ಶ್ರೇಯಾ ಘೋಷಾಲ್ ಗಾಯಕಿಗೆ ಭಾರತ ಸೇರಿದಂತೆ ವಿದೇಶಗಳಲ್ಲಿಯೂ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಹೀಗಾಗಿ ಅವರು ಈಗಲೂ ಭಾರತದ ನಂಬರ್ ಒನ್ ಗಾಯಕಿಯೇ. ದಶಕಗಳಿಂದಲೂ ನಂಬರ್ 1 ಪಟ್ಟವನ್ನು ಉಳಿಸಿಕೊಂಡಿರುವ ಶ್ರೇಯಾ ಘೋಷಾಲ್ ಭಾರತದ ಬಲು ಬೇಡಿಕೆಯ ಮತ್ತು ದುಬಾರಿ ಗಾಯಕಿ. ಬಹುತೇಕ ಎಲ್ಲ ಭಾಷೆಗಳಲ್ಲಿಯೂ ಹಾಡಿರುವ ಇವರು ಸರಳ, ಸಜ್ಜನ, ವಿನಯವಂತಿಕೆಯಿಂದಲೇ ಎಲ್ಲರನ್ನೂ ಸೆಳೆಯುತ್ತಾರೆ. ಈ ಶ್ರೀಮಂತ ಹಾಡುಗಾರ್ತಿಯ ಪತಿಯ ಉದ್ಯೋಗವೇನು? ಅವರು ಏನು ಮಾಡ್ತಿದ್ದಾರೆ ಅನ್ನೋದೇ ಹೆಚ್ಚಿನವರಿಗೆ ತಿಳಿದಿಲ್ಲ.
ಶ್ರೇಯಾ ಘೋಷಲ್ ಪತಿಯ ಹೆಸರು ಶೈಲಾಧಿತ್ಯ ಮುಖ್ಯೋಪಾಧ್ಯಾಯ್. ಸ್ಮಾರ್ಟ್ಫೋನ್ ಬಳಸುವ ಬಹುತೇಕರಿಗೆ ಗೊತ್ತಿರುವ ಆಪ್ ಗಳಲ್ಲಿ ಒಂದಾದ ಟ್ರೂಕಾಲರ್ನ ಗ್ಲೋಬಲ್ ಸಿಇಓ ಇವರು. 2009 ರಲ್ಲಿ ಪ್ರಾರಂಭವಾದ ಟ್ರೂಕಾಲರ್ ಸಂಸ್ಥೆಯನ್ನು 2022 ರಲ್ಲಿ ಸೇರಿಕೊಂಡರು. ಕೆಲವೇ ವರ್ಷಗಳಲ್ಲಿ ಅದರ ಗ್ಲೋಬಲ್ ಸಿಇಓ ಆಗಿ ಪ್ರಮೋಶನ್ ಪಡೆದುಕೊಂಡಿದ್ದಾರೆ. ಈ ಸಂಸ್ಥೆಯ ವಾರ್ಷಿಕ ಆದಾಯ 1660 ಕೋಟಿಗೂ ಹೆಚ್ಚು. ಇದರಲ್ಲಿ ಹೆಚ್ಚಿನ ಪಾಲು ಭಾರತದಿಂದ ಬರುತ್ತದೆ ಅನ್ನೋದೇ ಗಮನಾರ್ಹ ಸಂಗತಿ.
ಶೈಲಾಧಿತ್ಯ ಮುಖ್ಯೋಪಾಧ್ಯಾಯ್ ಅವರು ಇದಿಷ್ಟು ಮಾತ್ರವಲ್ಲ ಹಲವು ಭಾರತೀಯ ಮತ್ತು ಅಂತರಾಷ್ಟ್ರೀಯ ಕಂಪೆನಿಗಳ ಮುಖ್ಯ ಸ್ಥಾನಗಳಲ್ಲಿ ಕೆಲಸ ಮಾಡಿದ ಹೆಮ್ಮೆ ಇವರದ್ದು.ಇವರು ಬ್ಯುಸಿನೆಸ್ ಡೆವಲೆಪ್ಮೆಂಟ್, ಮೊಬೈಲ್ ಆಪ್, ಸಾಫ್ಟ್ವೇರ್ ಮ್ಯಾನೇಜ್ಮೆಂಟ್ಗಳಲ್ಲಿ ಪರಿಣಿತಿ ಪಡೆದಿದ್ದು,ಈ ಹಿಂದೆ ಅವರು ಅಂತರಾಷ್ಟ್ರೀಯ ಬ್ರ್ಯಾಂಡ್ಗಳಾದ ಕ್ಲೆವರ್ ಟ್ಯಾಪ್ ಹಾಗೂ ಇನ್ನೂ ಕೆಲವು ಸಂಸ್ಥೆಗಳಿಗೆ ಪ್ರೆಸಿಡೆಂಟ್, ವೈಸ್ ಪ್ರೆಸಿಡೆಂಟ್ ಆಗಿ ಕೆಲಸ ಮಾಡಿದ್ದಾರೆ. ಈ ಹಿಂದೆ ಅವರು ಹಿಪ್ಕ್ಯಾಸ್ಕ್ ಹೆಸರಿನ ಮೊಬೈಲ್ ಆಪ್ ಅನ್ನು ಪ್ರಾರಂಭ ಮಾಡಿದ್ದರು. ವೈನ್ ಉದ್ಯಮಕ್ಕೆ ಸಂಬಂಧಿಸಿದ ಆಪ್ ಅದಾಗಿದ್ದು,ಅದಾದ ಬಳಿಕ ಯುವ ಉದ್ಯಮಿಗಳಿಗೆ ನೆರವು ನೀಡಲು ಪಾಯಿಂಟ್ ಶೆಲ್ಫ್ ಹೆಸರಿನ ಸಂಸ್ಥೆಯೊಂದನ್ನು ಸಹ ತೆರೆದರು.
ಶ್ರೆಯಾ ಘೋಷಾಲ್ ಹಾಗೂ ಶೈಲಾಧಿತ್ಯ ಅವರು ಸುಮಾರು 10 ವರ್ಷ ಪ್ರೀತಿಸಿ 2015 ರಲ್ಲಿ ವಿವಾಹವಾದರು. 2021 ರಲ್ಲಿ ಇವರಿಗೆ ಗಂಡು ಮಗುವಿನ ಜನನವಾಗಿದೆ. ಶ್ರೆಯಾ ಘೋಷಾಲ್ ಸುಮಾರು 20 ವರ್ಷಗಳಿಂದಲೂ ಭಾರತೀಯ ಸಂಗೀತ ಕ್ಷೇತ್ರದಲ್ಲಿ ಗುರುತು ಹೊಂದಿದ್ದಾರೆ. ಈಗಲೂ ಅವರು ಭಾರತದ ನಂಬರ್ 1 ಗಾಯಕಿ ಅನ್ನೋದು ಹೆಮ್ಮೆಯ ಸಂಗತಿ.