ಕರಾವಳಿಕೊಡಗುರಾಜಕೀಯ

ಬಿರುಗಾಳಿ ಅಬ್ಬರಕ್ಕೆ ವೇದಿಕೆ ಸಮೇತ ಕುಸಿದ ಬಿದ್ದ ಮಾಜಿ ಸಚಿವ ಹಾಗೂ 15 ಮಂದಿ ಗಣ್ಯರು, ಮುಂದೇನಾಯಿತು ಗೊತ್ತಾ?

ನ್ಯೂಸ್ ನಾಟೌಟ್: ಸಾರ್ವಜನಿಕ ಭಾಷಣದಲ್ಲಿ ವೇದಿಕೆ ಮೇಲಿದ್ದ ಗಣ್ಯರೆಲ್ಲ ಜೋರಾಗಿ ಬೀಸಿದ ಬಿರುಗಾಳಿಗೆ ವೇದಿಕೆ ಸಮೇತ ಕುಸಿದು ಕೆಳಕ್ಕೆ ಬಿದ್ದಿದ್ದಾರೆ. ಈ ಸಂಬಂಧಪಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಹೌದು, ಆಂಧ್ರ ಪ್ರದೇಶದ ಟಿಡಿಪಿ (ತೆಲುಗು ದೇಶಂ ಪಾರ್ಟಿ) ಸಾರ್ವಜನಿಕ ಸಭೆಯಲ್ಲಿ ನಿರತವಾಗಿತ್ತು. ಈ ವೇಳೆ ಜೋರಾಗಿ ಗಾಳಿ ಬೀಸಿ ದುರ್ಘಟನೆ ಸಂಭವಿಸಿದೆ. ಟಿಡಿಪಿ ನಾಯಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.


ಎಲೂರು ಜಿಲ್ಲೆಯ ನುಜ್ವಿದ್​ನಲ್ಲಿ ಟಿಡಿಪಿ ಪಕ್ಷವು Bavishyaktuki Guarantee program ಎಂಬ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಸಭೆಯಲ್ಲಿ ಮಾಜಿ ಸಚಿವ ನಿಮ್ಮಕಯಾಲ ಚಿನ್ನರಾಜಪ್ಪ ಕೂಡ ಇದ್ದರು. ಚಿನ್ನರಾಜಪ್ಪ, ಚಿಂತಮನೇನಿ ಪ್ರಭಾಕರ್, ಪಿತಲಾ ಸುಜಾತ ಸೇರಿ ಒಟ್ಟು 15 ನಾಯಕರು ವೇದಿಕೆ ಮೇಲಿದ್ದರು. ಗಾಳಿಯ ಹೊಡೆತಕ್ಕೆ ಸಿಲುಕಿ ಅನಾಹುತ ಸಂಭವಿಸಿದೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನು ವೇದಿಕೆ ಬೀಳುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Related posts

ಎಸ್ ಎಸ್ ಎಲ್ ಸಿ ಫಲಿತಾಂಶ: ಚಿಂತನ್ ಬಾಳೆಕಜೆಗೆ 570 ಅಂಕ

ಕಟೀಲು ದೇವಸ್ಥಾನದ ಎದುರು ಬೆಂಕಿಗಾಹುತಿಯಾದ ಬಸ್ಸ್! ಸ್ಪಲ್ಪದರಲ್ಲಿ ತಪ್ಪಿದ ಭಾರಿ ಅನಾಹುತ!

ಶಫೀಕ್ ಬೆಳ್ಳಾರೆಗೆ ನ್ಯಾಯಾಂಗ ಬಂಧನ