ಕರಾವಳಿ

ಮನೆಯನ್ನೇ ಮ್ಯೂಸಿಯಂನ್ನಾಗಿಸಿದ ಬಂಟ್ವಾಳದ ವ್ಯಕ್ತಿ,ಇವರ ಮನೆಯಲ್ಲಿರುವ ಒಟ್ಟು ಗಡಿಯಾರಗಳೆಷ್ಟು ಗೊತ್ತಾ?

354

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಡ್ತಮುಗೇರು ಸಮೀಪದ ಶಶಿ ಭಟ್ ಪಡಾರ್ ಎಂಬವರು ತಮ್ಮ ಮನೆಯನ್ನೇ ಗಡಿಯಾರದ ಮ್ಯೂಸಿಯಂನ್ನಾಗಿ ಮಾಡಿದ್ದಾರೆ. ಹೌದು, ಇವರ ಮನೆ ಗೋಡೆ ತುಂಬೆಲ್ಲಾ ಹೆಚ್ಚಾಗಿ ಕಾಣುವುದು ಗಡಿಯಾರಗಳೆ. ಅದೆಷ್ಟೋ ಹಳೆಯದಾದ ಕೀ ಕೊಟ್ಟು ಸ್ಟಾರ್ಟ್ ಮಾಡೋ ಗಡಿಯಾರದಿಂದ ಅಪರೂಪದ ಗಡಿಯಾರಗಳ ಸಂಗ್ರಹವಿದೆ. ಅಷ್ಟೇ ಅಲ್ಲದೆ, ವಿವಿಧ ಬಗೆಯ ವಾದ್ಯ, ದೇವರ ವಿಗ್ರಹ, ಪೆಟ್ರೋಮ್ಯಾಕ್ಸ್ ದೀಪ ಹೀಗೆ ಪಳೆಯುಳಿಕೆಗಳ ಸಂಗ್ರಹವೇ ಈ ಮನೆಯಲ್ಲಿದೆ.

ಇಂದಿನ ಮೊಬೈಲ್ ಯುಗದಲ್ಲಿ ಮನೆಯಲ್ಲಿ ಕನಿಷ್ಟ ಒಂದು ಗಡಿಯಾರವೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.ಆದರೆ ಈ ಮನೆಯಲ್ಲಿ ಮಾತ್ರ‌ ಎಲ್ಲಿ ನೋಡಿದರೂ ಅಲ್ಲಿ ಗಡಿಯಾರ. 170 ಕ್ಕಿಂತಲೂ ಹೆಚ್ಚು‌ ಗಡಿಯಾರಗಳಿರುವ ಈ ಮನೆ ಒಂದು ಗಡಿಯಾರಗಳ ಮ್ಯೂಸಿಯಂ ಆಗಿದೆ. ಕಳೆದ 15 ವರ್ಷಗಳ ಹಿಂದೆ ಹಳೆಯ ಮಾಡೆಲ್​ನ ಗಡಿಯಾರಗಳನ್ನು ಮನೆಯಲ್ಲಿ ಜೋಡಿಸಿಡುವ ಕಾಯಕ ಆರಂಭಿಸಿದ ಶಶಿ ಭಟ್ ಬಳಿ ಇದೀಗ ಅತೀ ಅಪರೂಪದ 170 ಕ್ಕೂ ಹೆಚ್ಚು ಗಡಿಯಾರಗಳಿವೆ. 7 ಅಡಿ ಉದ್ದದ ಗ್ರ್ಯಾಂಡ್ ಫಾದರ್ ಕ್ಲಾಕ್​ನಿಂದ ಹಿಡಿದು 6 ಅಡಿ ಉದ್ದದ ಮದರ್ ಕ್ಲಾಕ್ ಸಹ ಇದೆ. ಅತೀ ಸಣ್ಣ ಕೂ ಕೂ ಕ್ಲಾಕ್ ತನಕ ಪ್ರಪಂಚದೆಲ್ಲೆಡೆಯ ವೆರೈಟಿ ಗಡಿಯಾರಗಳು ಇವರ ಬಳಿಯಿದೆ. ವಾರಕ್ಕೊಮ್ಮೆ ಕೀ ಕೊಡುವ ಗಡಿಯಾರದಿಂದ ಹಿಡಿದು ವರ್ಷಕ್ಕೊಮ್ಮೆ ಕೀ ಕೊಟ್ಟು ಚಲಿಸುವ ಗಡಿಯಾರಗಳು ಇಲ್ಲಿವೆ.

ಈಗಾಗಲೇ ಹಲವು ವೀಕ್ಷಕರನ್ನು ತನ್ನತ್ತ ಸೆಳೆದಿರುವ ಶಶಿ ಭಟ್ಟರ ಮನೆ ಅಧ್ಯಯನಕಾರರೇ ಫಿದಾ ಆಗಿದ್ದಾರೆ.ತನ್ನ ಸಂಗ್ರಹವನ್ನು ಇನ್ನಷ್ಟು ಜನರಿಗೆ ತಲುಪಿಸಬೇಕೆಂದು ಕೊಂಡಿರುವ ಶಶಿ ಭಟ್ ಮನೆಯಲ್ಲಿಯೇ ಸಣ್ಣ ಮಟ್ಟದ ಮ್ಯೂಸಿಯಂ ಮಾಡಲು ಸಿದ್ಧತೆ ನಡೆಸಿದ್ದಾರೆ‌. ಆ ಬಳಿಕ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗೆ ಆ ಮ್ಯೂಸಿಯಂಗೆ ಉಚಿತ ಪ್ರವೇಶವನ್ನು ಕಲ್ಪಿಸಿ ತನ್ನ ಬಳಿಯಿರುವ ಮಾಹಿತಿಯನ್ನು ಎಲ್ಲರಲ್ಲೂ ಹಂಚಿಕೊಳ್ಳಲು ಬಯಸಿದ್ದಾರೆ‌. ಹಳೆಯ ವಾಹನಗಳ ಕಲೆಕ್ಷನ್ ಕೂಡಾ ಶಶಿ ಭಟ್ ಮನೆಯಲ್ಲಿದ್ದು, ಇಡೀ ಮನೆಯೇ ಒಂದು ಸಂಗ್ರಹಾಲಯವಾಗಿ ಈ ಭಾಗದಲ್ಲಿ ಗುರುತಿಸಲ್ಪಟ್ಟಿದೆ.

See also  ಮಂಗಳೂರು ಡಿಸಿಸಿ ಬ್ಯಾಂಕ್‌ ಗೆ ಆರ್‌ ಬಿಐ ನಿಂದ ಶಾಕ್‌..! 5 ಲಕ್ಷ ರೂ. ದಂಡ..!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget