ದೇಶ-ವಿದೇಶ

ಪ್ರಭು ಶ್ರೀರಾಮನಿಗೆ ಅಸ್ತಿತ್ವವೇ ಇಲ್ಲವೆಂದ ಡಿಎಂಕೆ ಮುಖಂಡ..!, ಎಸ್‌.ಎಸ್‌. ಶಿವಶಂಕರ್‌ ಹೇಳಿದ್ದೇನು…? ವಿಡಿಯೋ ವೀಕ್ಷಿಸಿ

ನ್ಯೂಸ್‌ ನಾಟೌಟ್‌: ಕೋಟ್ಯಂತರ ಹಿಂದುಗಳ ಆರಾಧ್ಯಮೂರ್ತಿಯಾದ ಪ್ರಭು ಶ್ರೀರಾಮ ಅಸ್ತಿತ್ವದ ಬಗ್ಗೆ ತಮಿಳುನಾಡಿನ ಡಿಎಂಕೆ ನಾಯಕ(DMK leader Controversy) ಎಸ್‌.ಎಸ್‌. ಶಿವಶಂಕರ್‌(SS Sivasankar) ನೀಡಿದ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.

ಶ್ರೀರಾಮನ ಅಸ್ತಿತ್ವಕ್ಕೆ ಪುರಾವೆಗಳೇ ಇಲ್ಲ ಎಂದು ಹೇಳಿಕೆ ನೀಡಿದ ಡಿಎಂಕೆ ಮುಖಂಡನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಅರಿಯಾಲೂರ್‌ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಪ್ರದೇಶದಲ್ಲಿ ನಡೆದ ರಾಜೇಂದ್ರ ಚೋಳನ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಶಂಕರ್‌, ರಾಜೇಂದ್ರ ಚೋಳನ ಪರಂಪರೆಯನ್ನು ಆಚರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿತ್ತು. ಕೆಲವರು ಅಪ್ರಸ್ತುತ ವ್ಯಕ್ತಿಗಳ ಪೂಜೆಗೆ ಜನರನ್ನು ಒತ್ತಾಯಿಸಿದರು. ನಾವು ಚೋಳ ರಾಜವಂಶದ ಚಕ್ರವರ್ತಿ ರಾಜೇಂದ್ರ ಚೋಳನ ಜನ್ಮದಿನವನ್ನು ಆಚರಿಸುತ್ತೇವೆ. ಏಕೆಂದರೆ ನಮ್ಮಲ್ಲಿ ಶಾಸನಗಳು, ಅವನು ನಿರ್ಮಿಸಿದ ದೇವಾಲಯಗಳು ಮತ್ತು ಅವನು ರಚಿಸಿದ ಸರೋವರದಂತಹ ಪುರಾತತ್ತ್ವ ಶಾಸ್ತ್ರದ ಪುರಾವೆಗಳಿವೆ. ಆದರೆ, ರಾಮನ ಇತಿಹಾಸವನ್ನು ಪತ್ತೆಹಚ್ಚಲು ಯಾವುದೇ ಪುರಾವೆಗಳಿಲ್ಲ ಎಂದು ಶಿವಶಂಕರ್ ಹೇಳಿದ್ದಾರೆ.

Related posts

ಚುನಾವಣೆ ಬಳಿಕ ಮೊಬೈಲ್‌ ರಿಚಾರ್ಜ್‌ ಮೊತ್ತ ಏರಿಕೆಯಾಗಲಿದೆಯಾ..? ಗ್ರಾಹಕರಿಗೆ ಶಾಕ್‌ ಕೊಡಲು ಮುಂದಾಗಿದೆಯಾ ಟೆಲಿಕಾಂ ಕಂಪನಿಗಳು..!

ಟಾಯ್ಲೆಟ್‌ ನಿಂದ ಆನ್‌ ಲೈನ್‌ ಮೀಟಿಂಗ್ ಗೆ ಜಾಯಿನ್‌ ಆದ ಮಾಜಿ ಮೇಯರ್..! ಆತನ ಎಡವಟ್ಟಿನಿಂದ ಎಲ್ಲರಿಗೂ ಮುಜುಗರ..! ಇಲ್ಲಿದೆ ವೈರಲ್ ವಿಡಿಯೋ

ಪಕ್ಕದ ಮನೆಯ ಹೆಗ್ಗಣಗಳ ಉಪದ್ರಕ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ ವ್ಯಕ್ತಿ..! ಪೊಲೀಸರು ಮನೆಗೆ ಬಂದು ಮಾಡಿದ್ದೇನು..?