ರಾಜಕೀಯ

1 ಲಕ್ಷ ಮತಗಳ ಅಂತರದ ಗೆಲುವು ಸಂಭ್ರಮಿಸಿದ ಡಿಕೆಶಿ, ಇದು ಈ ಚುನಾವಣೆಯ ಅತ್ಯಂತ ಹೆಚ್ಚು ಅಂತರದ ದಾಖಲೆಯ ಗೆಲುವು!

ನ್ಯೂಸ್ ನಾಟೌಟ್ : ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಭದ್ರಕೋಟೆ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಆರ್ ಅಶೋಕ್‌ಗೆ ತೀವ್ರ ಮುಖಭಂಗ ಉಂಟಾಗಿದೆ.

ಬಿಜೆಪಿ ಹೈಕಮಾಂಡ್‌ ನಿರ್ದೇಶನದಂತೆ ಕನಕಪುರ ಕ್ಷೇತ್ರದಲ್ಲಿ ಚುನಾವಣೆಗೆ ನಿಂತಿದ್ದ ಆರ್ ಅಶೋಕ್ ವಿರುದ್ಧ ಡಿಕೆ ಶಿವಕುಮಾರ್ ಅವರು ಬರೋಬ್ಬರಿ 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.

ಅಂದ ಹಾಗೆ ಕನಕಪುರ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕೇವಲ ಒಂದೇ ಒಂದು ದಿನ ಪ್ರಚಾರ ನಡೆಸಿದ್ದರು. ಆ ನಂತರ ಕ್ಷೇತ್ರದಲ್ಲಿ ಪ್ರಚಾರ ನಡೆಸದೆ ಪಕ್ಷ ಅಭ್ಯರ್ಥಿಗಳ ಪರ ಪ್ರವಾಸ ಹೊರಟಿದ್ದರು. ಆದರೆ ಅಚ್ಚರಿ ಎಂಬಂತೆ ಕೇವಲ ಒಂದೇ ದಿನ  ಪ್ರಚಾರ ನಡೆಸಿ ಬರೋಬ್ಬರಿ ಒಂದು ಲಕ್ಷ ಮತಗಳ ಅಂತರದಿಂದ ಅಭೂತಪೂರ್ವ ಗೆಲುವು ದಾಖಲಿಸಿದ್ದಾರೆ ಎಂದು ವರದಿ ತಿಳಿಸಿದೆ.

Related posts

ಹಾಸನದಲ್ಲಿ ಪ್ರಜ್ವಲ್ ರೇವಣ್ಣಗೆ ಭಾರೀ ಮುಖಭಂಗ, ಅತ್ತ ಮಂಡ್ಯದಲ್ಲಿ ಚಿಕ್ಕಪ್ಪ ಕುಮಾರಸ್ವಾಮಿಗೆ ಭರ್ಜರಿ ಜಯ

ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್ ನ ದೂರುದಾರೆಯ ನಿಗೂಢ ಸಾವಿನ ಬಗ್ಗೆ ಮತ್ತೆ ತನಿಖೆ..? ಮಹಿಳಾ ಆಯೋಗದ ಅಧ್ಯಕ್ಷೆಯಿಂದ ರಹಸ್ಯ ಬಯಲು..!

ಡಿಕೆ ಶಿವಕುಮಾರ್ ​​ರನ್ನು ಸಿಎಂ ಮಾಡಿ ತೋರಿಸುತ್ತೇವೆ ಎಂದ ಸ್ವಾಮೀಜಿ..! ಇಲ್ಲಿದೆ ಸಂಪೂರ್ಣ ಮಾಹಿತಿ