ಬೆಂಗಳೂರುರಾಜಕೀಯರಾಜ್ಯವೈರಲ್ ನ್ಯೂಸ್

ಡಿಕೆ ಶಿವಕುಮಾರ್ ​​ರನ್ನು ಸಿಎಂ ಮಾಡಿ ತೋರಿಸುತ್ತೇವೆ ಎಂದ ಸ್ವಾಮೀಜಿ..! ಇಲ್ಲಿದೆ ಸಂಪೂರ್ಣ ಮಾಹಿತಿ

195

ನ್ಯೂಸ್ ನಾಟೌಟ್: ಮುಡಾ ಹಗರಣದಲ್ಲಿ ಎ1 ಆರೋಪಿಯಾಗಿರುವ ಸಿದ್ದರಾಮಯ್ಯನವರ ಸಿಎಂ ಕುರ್ಚಿಗೆ ಪಕ್ಷದೊಳಗೆ ಹಲವು ಆಕಾಂಕ್ಷಿಗಳು ಈ ಹಿಂದಿನಿಂದಲೂ ಇದ್ದರು, ಈಗ ಈ ಚರ್ಚೆ ಮತ್ತಷ್ಟು ಜೋರಾಗಿದೆ. ಇದರ ಮಧ್ಯ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಸ್ವಾಮೀಜಿ , ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡಿ ತೋರಿಸುತ್ತೇವೆ ಎಂದು ಹೇಳಿದ್ದಾರೆ.

ಸಚಿವ ಸತೀಶ್ ಜಾತಕಿಹೊಳಿ ಓಡಾಟ ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ ಮೂಡಿಸಿದೆ. ಒಂದು ವೇಳೆ ಸಿಎಂ ಬದಲಾವಣೆ ಮಾಡಿದರೆ ತಮ್ಮನ್ನು ಪರಿಗಣಿಸಬೇಕೆಂದು ಪರಮೇಶ್ವರ್, ಸತೀಶ್ ಜಾರಕಿಹೊಳಿ ಹೈಕಮಾಂಡ್​ ನಾಯಕರ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.

ಇದರ ಮಧ್ಯೆ ಡಿಕೆ ಶಿವಕುಮಾರ್ ಸಹ ಪ್ರಭಲಆಕಾಂಕ್ಷಿಯಾಗಿದ್ದಾರೆ. ಇನ್ನೊಂದೆಡೆ ಯಾವುದೇ ಕಾರಣಕ್ಕೂ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲ್ಲ ಎಂದು ಹೈಕಮಾಂಡ್​ ಕಡ್ಡಿ ಮುರಿದಂತೆ ಹೇಳಿದೆ. ಈ ನಡುವೆ ಸ್ವಾಮೀಜಿ ಹೇಳಿಕೆ ರಾಜಕೀಯ ಸಂಚಲನ ಸೃಷ್ಟಿಸಿದೆ.

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾ. ಮುಕ್ತಿಮಂದಿರ ಕ್ಷೇತ್ರದಲ್ಲಿ ನಡೆದ ರಂಭಾಪುರಿ ವೀರಗಂಗಾಧರ ಜಗದ್ಗುರುರುಗಳ 42 ವರ್ಷದ ಪುಣ್ಯಸ್ಮರಣೋತ್ಸವ ಸಮಾರಂಭದಲ್ಲಿ ಮಾತನಾಡಿದ ನೊಣವಿನಕೆರೆ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ, ಮುಕ್ತಿಮಂದಿರ ಕ್ಷೇತ್ರದಲ್ಲಿ ತ್ರಿಕೋಟಿ ಲಿಂಗಗಳ‌ ಸ್ಥಾಪನೆ ಅಷ್ಟೇ‌ ಅಲ್ಲ. ಡಿಕೆಶಿಯನ್ನ ಮುಖ್ಯಮಂತ್ರಿ ಮಾಡಿ ಈ‌ ಜಾಗದಲ್ಲಿ ಕರೆದುಕೊಂಡು‌ ಬಂದು ಪೂಜೆ ಮಾಡಿ ತೋರಿಸುತ್ತೇನೆ ಎಂದಿದ್ದಾರೆ. ಈಗಾಗಲೇ ಹಲವಾರು ಬಾರಿ ಡಿಕೆಶಿ ಮುಖ್ಯಮಂತ್ರಿ ವಿಚಾರ ಪ್ರಸ್ತಾಪಿಸಿರುವ ನೊಣವಿನಕೆರೆ ಶ್ರೀ, ಇದೀಗ ಲಕ್ಷ್ಮೇಶ್ವರದ ಮುಕ್ತಿಮಂದಿರದಲ್ಲಿ ಮತ್ತೊಮ್ಮೆ ಘಂಟಾಘೋಷವಾಗಿ ಹೇಳಿಕೆ ನೀಡಿರುವುದು ಚರ್ಚೆಗೆ ಕಾರಣವಾಗಿದೆ.

Click

https://newsnotout.com/2024/10/mulki-mudabidre-cheethah-cought-in-cage-forest-department/
https://newsnotout.com/2024/10/mudabidre-kannada-news-teacher-5-year-jail-viral-news/
https://newsnotout.com/2024/10/mother-of-kiccha-sudeep-nomore-kannada-news-viral-news/
https://newsnotout.com/2024/10/mangaluru-money-issue-online-whats-app-message-kannada-news/
https://newsnotout.com/2024/10/uppinangady-gundya-kannada-news-forest-department/
https://newsnotout.com/2024/10/viral-news-video-kannada-news-petrol-pump-kannada-news/
https://newsnotout.com/2024/10/student-kannada-news-bba-bengaluru-v/


See also  ಆಂಧ್ರ ಸಿಎಂ ಚಂದ್ರಬಾಬು ನಾಯ್ಡುಗೆ ಮುತ್ತು ಕೊಡಲು ಯತ್ನಿಸಿದ ಮಹಿಳೆ..! ತಡೆದ ಭದ್ರತಾ ಸಿಬ್ಬಂದಿ..! ಇಲ್ಲಿದೆ ವೈರಲ್ ವಿಡಿಯೋ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget