ಕ್ರೈಂ

ಡಿ.ಕೆ.ಶಿವಕುಮಾರ್‌ ಗೆ ಮತ್ತೆ ಕಂಟಕ..! ಹೆಲಿಕಾಪ್ಟರ್‌ ಲ್ಯಾಂಡಿಂಗ್ ವೇಳೆ ಪಕ್ಕದಲ್ಲೇ ಹೊತ್ತಿ ಉರಿದ ಬೆಂಕಿ!

252

ನ್ಯೂಸ್ ನಾಟೌಟ್ : ಹೊನ್ನಾವರ ವಿಧಾನಸಭೆ ಚುನಾವಣೆ ಹಿನ್ನೆಲೆ ಪ್ರಚಾರಕ್ಕಾಗಿ ಡಿ.ಕೆ.ಶಿವಕುಮಾರ್‌ ಹೊನ್ನಾವರದ ರಾಮತೀರ್ಥಕ್ಕೆ ಆಗಮಿಸಿದ್ದು, ಈ ವೇಳೆ ಲ್ಯಾಂಡಿಂಗ್ ವೇಳೆ ಡಿ.ಕೆ.ಶಿವಕುಮಾರ್ ಹೆಲಿಕಾಪ್ಟರ್‌ ಪಕ್ಕದಲ್ಲೇ ಇದ್ದ ಹುಲ್ಲಿಗೆ ಬೆಂಕಿ ಬಿದ್ದಿದೆ ಎಂದು ವರದಿಯಾಗಿದೆ.

ಸ್ಮೋಕ್‌ ಕ್ಯಾಂಡಲ್‌ನಿಂದ ಹೆಲಿಪ್ಯಾಡ್‌ ಬಳಿ ಹುಲ್ಲಿಗೆ ಬೆಂಕಿ ಹತ್ತಿಕೊಂಡಿದ್ದು,ಅಗ್ನಿ ಶಾಮಕ ಸಿಬ್ಬಂದಿ ಕೂಡಲೇ ಬೆಂಕಿಯನ್ನು ನಂದಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಮೈಸೂರಿನಿಂದ ಹೊನ್ನಾವರಕ್ಕೆ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ. ಮೊನ್ನೆಯಷ್ಟೇ ಎಚ್‌ಎಎಲ್‌ ಬಳಿ ರಣಹದ್ದು ಡಿಕ್ಕಿ ಹೊಡೆದ ಪರಿಣಾಮ ಆಗಲೂ ಹೆಲಿಕಾಪ್ಟರ್‌ನ ಗಾಜು ನುಜ್ಜುಗುಜ್ಜಾಗಿತ್ತು. ಡಿ.ಕೆ ಶಿವಕುಮಾರ್ ಈಗ ದೇವರ ಮೊರೆ ಹೋಗಿದ್ದು ಕಂಟಕ ನಿವಾರಣೆಗೆ ಪ್ರಾರ್ಥನೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

See also  ಆಕಸ್ಮಿಕವಾಗಿ ಸಿಡಿದ ಗುಂಡು, ಲಷ್ಕರ್‌ ಸಹ ಸ್ಥಾಪಕ ಉಗ್ರನ ಸ್ಥಿತಿ ಚಿಂತಾಜನಕ..! ಏನಿದು ಘಟನೆ..?
  Ad Widget   Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget