Latestಕ್ರೀಡೆಕ್ರೀಡೆ/ಸಿನಿಮಾಕ್ರೈಂಬೆಂಗಳೂರುರಾಜಕೀಯ

ಕಾಲ್ತುಳಿತ ಪ್ರಕರಣ: ಮಕ್ಕಳ ಸಾವು ನೆನೆದು ಕಣ್ಣೀರಿಟ್ಟ ಡಿಕೆಶಿ..! ಮಕ್ಕಳ ತಾಯಿ ಮಾತನಾಡಿದ್ದನ್ನ ನನ್ನಿಂದ ಸಹಿಸಲು ಆಗ್ತಿಲ್ಲ ಎಂದ ಡಿಸಿಎಂ..!

1.1k

ನ್ಯೂಸ್ ನಾಟೌಟ್ :ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತದಿಂದ ಉಂಟಾದ ಸಾವು-ನೋವು ನೆನೆದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಕಣ್ಣೀರಿಟ್ಟಿದ್ದಾರೆ. ಮಕ್ಕಳ ಸಾವು ನೆನೆದು ಗದ್ಗದಿತರಾಗಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಈ ಕುರಿತು ಮಾತನಾಡಿ, ನನಗೆ ಹೊಟ್ಟೆ ಉರಿಯುತ್ತಿದೆ, ಆ ಮಕ್ಕಳ ತಾಯಿ ಮಾತನಾಡೋದನ್ನ ಸಹಿಸೋಕೆ ಆಗ್ತಾ ಇಲ್ಲ ಅಂತ ಕಣ್ಣೀರು ಹಾಕಿದ್ದಾರೆ.
ಇದನ್ನ ಯಾವ ಫ್ಯಾಮಿಲಿ ಕೂಡ ತಡೆದುಕೊಳ್ಳಲ್ಲ. ಪೊಲೀಸ್ ಇಲಾಖೆ ಕೂಡಲೇ ಹೇಳಿತ್ತು ಇದನ್ನ ತಡೆಯಿರಿ ಅಂತ. ನಾನೂ ಕೂಡಲೇ ಮ್ಯಾನೇಜ್ಮೆಂಟ್‌ ಗೆ ಹೇಳಿದೆ, ಅವರು ಹೋಗೋದಕ್ಕೂ ಕೂಡ ಜಾಗ ಇರಲಿಲ್ಲ. ಕೂಡಲೇ ಅವರನ್ನ ನಾನು ಕಾರ್‌ ನಲ್ಲಿ ಕೂರಿಸಿಕೊಂಡು ಹೋದೆ, ಮಾಧ್ಯದವರು ಹೇಳಿದ ಬಳಿಕವೇ ನಮಗೆ ಗೊತ್ತಾಯ್ತು ಎಂದು ತಿಳಿಸಿದ್ದಾರೆ.

ಯಾರು ಏನೇ ಹೇಳಿದರೂ ಟೀಕೆ ಮಾಡಲಿ, ಸದನದಲ್ಲಿ ಎಲ್ಲವೂ ಬರಲಿದೆ. ಅವರವರ ಕಾಲದಲ್ಲಿ ಏನಾಯ್ತು ಅಂತ ಗೊತ್ತಿದೆ. ರಾಜ್ ಕುಮಾರ್ ಸತ್ತಾಗ ಏನಾಯ್ತು ಅಂತ ಗೊತ್ತಿದೆ. ನಾನು ಆಗ ದೆಹಲಿಯಲ್ಲಿ ಇದ್ದೆ, ಕುಮಾರಸ್ವಾಮಿ ಟೀಕೆ ಮಾಡುತ್ತಲೇ ಇರಲಿ. ಡರ್ಟಿ ಪಾಲಿಟಿಕ್ಸ್ ನಾನು ಮಾತಾಡಲ್ಲ. ಹೌದು ಯಾರೇ ಮಾಡಿದರೂ ಕೂಡ ಸರ್ಕಾರ ಜವಬ್ದಾರಿ ತೆಗೆದುಕೊಳ್ಳುತ್ತದೆ. ಇದು ಕರ್ನಾಟಕದ ಇಮೇಜ್‌, ನಮ್ಮ ಮನಸ್ಸಿಗೆ, ನಮ್ಮ ಕುಟುಂಬಕ್ಕೂ ನೋವಾಗಿದೆ. ಒಬ್ಬರು ತಾಯಿ ಹೇಳ್ತಾರೆ ಪೋಸ್ಟ್ ಮಾರ್ಟಮ್ ಮಾಡಬೇಡಿ ಅಂತ, ಎಷ್ಟು ಹೊಟ್ಟೆ ಉರಿಯಬೇಕು ಅಲ್ವ? ಈ ವಿಚಾರದಲ್ಲಿ ರಾಜಕೀಯ ಮಾಡೋದು ಬೇಡ ಅಂತ ಕಣ್ಣೀರಿಟ್ಟಿದ್ದಾರೆ.

ಮಾಲಿಕನ ಮೊಬೈಲ್ ಕದ್ದ ಎಂದು ಬಾಲಕನನ್ನು ಉಲ್ಟಾ ನೇತು ಹಾಕಿ ಕರೆಂಟ್ ಶಾಕ್ ಕೊಟ್ಟ ಜನ..! 14 ವರ್ಷದ ಬಾಲಕ ಆಸ್ಪತ್ರೆಗೆ ದಾಖಲು..!

See also  ನಟ ದರ್ಶನ್‌ಗೆ ಆಪರೇಷನ್ ತಕ್ಷಣವೇ ಆಗಬೇಕಾಗಿದೆ-ಸಿ.ವಿ ನಾಗೇಶ್‌, ವಿಮ್ಸ್‌ ಆಸ್ಪತ್ರೆ ವೈದ್ಯರು ನೀಡಿರುವ ವೈದ್ಯಕೀಯ ವರದಿ ಏನೇನಿದೆ?
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget