ಕರಾವಳಿ

ಶಾಲಾ ಮಕ್ಕಳಲ್ಲಿ ಕೆಂಗಣ್ಣು ಕಾಣಿಸಿಕೊಂಡರೆ ರಜೆ ಕೊಡಿ

ನ್ಯೂಸ್ ನಾಟೌಟ್ : ಪ್ರಸ್ತುತ ದ.ಕ. ಜಿಲ್ಲೆಯಾದ್ಯಂತ ಕೆಂಗಣ್ಣು ರೋಗ ಒಬ್ಬರಿಗೊಬ್ಬರಿಗೆ ತೀವ್ರವಾಗಿ ಹರಡುತ್ತಿದೆ. ಇದೊಂದು ಸಾಂಕ್ರಾಮಿಕ ರೋಗ. ಒಬ್ಬರಿಂದ ಒಬ್ಬರಿಗೆ ಅತ್ಯಂತ ವೇಗದಲ್ಲಿ ಹರಡುತ್ತದೆ. ಶಾಲಾ ಮಕ್ಕಳಲ್ಲೂ ಹೆಚ್ಚಾಗಿ ಕಂಡು ಬರುತ್ತಿದೆ. ಹಾಗಾಗಿ ಈ ಸಮಸ್ಯೆ ಕಂಡು ಬಂದಲ್ಲಿ ಮಕ್ಕಳು ಶಾಲೆಗೆ ರಜೆ ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು ಆದೇಶಿಸಿದೆ.

ಸೋಂಕು ಕಾಣಿಸಿಕೊಂಡ ತಕ್ಷಣ ಮಗು ಮನೆಯಲ್ಲೇ ಐದು ದಿನ ಇದ್ದು ವೈದ್ಯರ ಚಿಕಿತ್ಸೆ ಪಡೆದುಕೊಳ್ಳಬೇಕು. ಕಣ್ಣು ಸಂಪೂರ್ಣವಾಗಿ ಗುಣವಾದ ಬಳಿಕ ಶಾಲೆಗೆ ಬರಬೇಕು ಅನ್ನುವುದನ್ನು ಶಿಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ. ಇದರ ಬಗ್ಗೆ ಮಕ್ಕಳ ಮೇಲೆ ಪೋಷಕರು ಎಚ್ಚರಿಕೆ ವಹಿಸಬೇಕು ಎಂದು ಮಂಗಳೂರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ. ಕಣ್ಣು ಕೆಂಪಗಾಗುವುದು. ಉರಿಯುವುದು, ಕಣ್ಣು ಬಿಡಲು ಸಾಧ್ಯವಾಗದಿರುವುದು ಕಣ್ಣು ನೋವಿನ ಮುಖ್ಯ ಲಕ್ಷಣಗಳಾಗಿವೆ.

Related posts

ತೊಡಿಕಾನ: ಮಹಿಳೆಗೆ ಕತ್ತಿಯಿಂದ ಕಡಿದು ಪರಾರಿಯಾದ ಯುವಕ

ಬೆಳ್ಳಾರೆ: ಗಣೇಶೋತ್ಸವದಲ್ಲಿ ತಡರಾತ್ರಿ ಡಿಜೆಗೆ ಅವಕಾಶ ಕೊಡಲ್ಲ ಎಂದ ಪೊಲೀಸರು..! ವಿಘ್ನ ನಿವಾರಕನ ವಿಸರ್ಜನೆ ವೇಳೆ ಡಿಜೆ ಬೇಕೆಂದು ಪೊಲೀಸರೆದುರು ಯುವಕರ ತೀವ್ರ ವಾಗ್ವಾದ..! ಪ್ರಕರಣ ಸುಖಾಂತ್ಯ

ಶ್ವೇತಾ ಚೆಂಗಪ್ಪ ಕುಟುಂಬ ಕೊರಗಜ್ಜನ ಸನ್ನಿಧಿಗೆ ಭೇಟಿ, ನೆಲ ಭೋಜನ ಹರಕೆ ತೀರಿಸಿದ ನಟಿ