ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಗೆ ತಯಾರಿ ನಡೆಯುತ್ತಿರುವ ಬೆನ್ನಲ್ಲೇ ಗೂಂಡಾ ಕಾಯ್ದೆಯಡಿ ಹಿಂದೂ ಕಾರ್ಯಕರ್ತನನ್ನು ಬಂಧಿಸಲಾಗಿದೆ. ಬಂಧಿತನನ್ನು ಜಯಪ್ರಕಾಶ್ ಎಂದು ಗುರುತಿಸಲಾಗಿದೆ. ಸ್ವತಃ ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡ ಶಿವಾನಂದ ಮೆಂಡನ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಹಿಂದುತ್ವ ಪರ ಕೆಲಸ ಮಾಡುವವರ ಮೇಲೆ ಗೂಂಡಾಕಾಯ್ದೆ ಹಾಕಲಾಗಿದೆ. ಒಂದು ಕೇಸ್ಗೆ ಪೊಲೀಸರು ಮೂರು ಎಫ್ಐಆರ್ ದಾಖಲಿಸಿದ್ದಾರೆ. ಈ ಹಿಂದೆ ಸೆಗಣಿ ಹಾಕಿದ್ದಕ್ಕೆ ಪ್ರದೀಪ್ ವಿರುದ್ಧ ಸೆಕ್ಷನ್ 307 ಹಾಕಿದ್ದರು. ಪಾಕಿಸ್ತಾನ ಪರ ಘೋಷಣೆ ಹಾಕಿದ ಆರೋಪಿಗಳ ಮೇಲೆ ಕೇಸ್ ಹಾಕಲ್ಲ. ಚುನಾವಣೆ ಸಂದರ್ಭದಲ್ಲಿ ನಮ್ಮನ್ನು ಹತ್ತಿಕುವ ಕೆಲಸ ನಡೀತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಚುನಾವಣೆ ಸಂದರ್ಭ ಕಾಂಗ್ರೆಸ್ನವರು ಬಜರಂಗದಳ ಬ್ಯಾನ್ ಎಂದು ಸುಳ್ಳು ಹೇಳಿದ್ದರು. ಇದರಿಂದ ಅಲ್ಪಸಂಖ್ಯಾತರ ಮತ ಸಿಗುತ್ತೆ ಎಂಬ ಯೋಚಿಸಲಾಗಿತ್ತು. ಬಜರಂಗದಳ ಕಾರ್ಯಕರ್ತರನ್ನ ಬಂಧಿಸಿದರೆ ಅಲ್ಪ ಸಂಖ್ಯಾತರು ಮತ ಹಾಕುತ್ತಾರೆ ಎಂಬ ಭ್ರಮೆ ಇದೆ. ಈ ಕಾರಣಕ್ಕೆ ನಮ್ಮನ್ನ ಚುನಾವಣೆ ಸಂದರ್ಭ ದಮನ ಮಾಡುವ ಕೆಲಸ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ.
ಜೈ ಶ್ರೀ ರಾಮ್, ಹನುಮಾನ್ ಚಾಲೀಸ ಹೇಳುವುದಕ್ಕೆ ಎಲ್ಲಾ ಕೇಸ್ ಹಾಕುತ್ತಾರೆ. ಹಾಗಾಗಿ ನಮಗೆ ಹಿಂದೂಗಳ ಪರವಾದ ಸರಕಾರ ಬೇಕು. ನಾವು ಈ ಬಾರಿ ಮನೆಗೆ ಮನೆಗೆ ಹೋಗಿ ಪ್ರಚಾರ ಮಾಡುತ್ತೇವೆ. ನಮ್ಮ ಕೇಂದ್ರದ ಬೈಠಕ್ನಲ್ಲೂ ಈ ಬಗ್ಗೆ ತೀರ್ಮಾನವಾಗಿದೆ. ಈ ಕಾರಣಕ್ಕೆ ನಾವು ಹಿಂದುತ್ವದ ಪರವಾದ ಸರ್ಕಾರವನ್ನ ಗೆಲ್ಲಿಸುತ್ತೇವೆ. ನಮ್ಮದು ಗೊ ಹತ್ಯೆ, ಡ್ರಗ್ಸ್, ಹೆಣ್ಣು ಮಕ್ಕಳನ್ನ ಕೆಡಿಸುವ ಸಂಘಟನೆಯಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.