ಕರಾವಳಿ

ಸುಂದರಿಯ ಬಲೆಗೆ ಬಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಮುಖಂಡ

ನ್ಯೂಸ್ ನಾಟೌಟ್ : ಕರಾವಳಿಯ ಬಿಜೆಪಿ ಮುಖಂಡ ಹಾಗೂ ಚಿನ್ನದ ವ್ಯಾಪಾರಿಯ ಹನಿಟ್ರ್ಯಾಪ್‌ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಮಹಿಳೆಯನ್ನು ಮಂಡ್ಯ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಮುಖಂಡ ಮಂಡ್ಯದಲ್ಲಿ ಶ್ರೀನಿಧಿ ಗೋಲ್ಡ್​ ಮಾಲೀಕರಾಗಿರುವ ಜಗನ್ನಾಥ ಶೆಟ್ಟಿ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡವರು.

ಕಳೆದ ಫೆ.26 ರಂದು ಮಂಗಳೂರಿಗೆ ತೆರಳಲು ಮಂಡ್ಯದಲ್ಲಿ ಬಸ್​ಗಾಗಿ ಕಾಯುತ್ತಿದ್ದ  ವೇಳೆ ನಾಲ್ವರು ಮೈಸೂರಿಗೆ ಡ್ರಾಪ್​ ಕೊಡುವುದಾಗಿ ಕಾರಿನಲ್ಲಿ ಕರೆದೊಯ್ದು ಲಾಡ್ಜ್‌​ಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಬಳಿಕ  ರೂಮ್​ನಲ್ಲಿ ಯುವತಿ ಜೊತೆ ವಿಡಿಯೋ ಚಿತ್ರೀಕರಿಸಿ 4 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾರೆ.  ಆಗ ಅಂತಿಮವಾಗಿ 50 ಲಕ್ಷ ರೂಪಾಯಿ ನೀಡಿ ಬಿಜೆಪಿ ಮುಖಂಡ  ತೆರಳಿದ್ದಾರೆ ಎನ್ನಲಾಗಿದೆ. ಇಷ್ಟಕ್ಕೆ ಸುಮ್ಮನಾಗದ ಗ್ಯಾಂಗ್ ಮತ್ತೆ ಹಣಕ್ಕೆ ಬೇಡಿಕೆಯಿಟ್ಟಿದ್ದರಿಂದ ನೊಂದು   ದೂರು ನೀಡಿದ್ದಾರೆ.  ದೂರಿನ ಆಧಾರದ ಮೇರೆಗೆ ಸಮಾಜ ಸೇವೆ, ಮಾನವ ಹಕ್ಕು ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಸಲ್ಮಾಭಾನು ಎಂಬುವರನ್ನು ಮಂಡ್ಯ ಪಶ್ಚಿಮ ಠಾಣೆ ಪೊಲೀಸರು ಬಂಧಿಸಿದ್ದಾರೆ.

Related posts

ಸುಳ್ಯ:ಡಾ.ಕೆ.ವಿ.ಜಿಯವರ 95ನೇ ಹುಟ್ಟು ಹಬ್ಬದ ಸ್ಮರಣಾರ್ಥ ಹಾನಿಗೀಡಾದ ಮನೆಗೆ ಹಣ ಹಸ್ತಾಂತರ,ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ (ರಿ) ಸುಳ್ಯ ವತಿಯಿಂದ ಕಾರ್ಯ

ವಿದ್ಯಾಮಾತಾ ಅಕಾಡೆಮಿ ಮತ್ತು ಲಯನ್ಸ್ ಕ್ಲಬ್ ‘ಪುತ್ತೂರ್ದ ಮುತ್ತು’ ಸಹಯೋಗದಲ್ಲಿ ಆರೋಗ್ಯ ಸಂಕಲ್ಪ ಕಾರ್ಯಕ್ರಮ, ಕಾರ್ಯಾಗಾರದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗಿ

6 ಶರಣಾಗತ ನಕ್ಸಲರ ಶಸ್ತ್ರಾಸ್ತ್ರ ಅರಣ್ಯದಲ್ಲಿ ಪತ್ತೆ..! ಶರಣಾದರೂ ಶಸ್ತ್ರಾಸ್ತ್ರ ಬಚ್ಚಿಟ್ಟಿದ್ದ ನಕ್ಸಲರ ತಂಡ..!