ಕ್ರೀಡೆ/ಸಿನಿಮಾ

‘ಕಾಲ ಬದಲಾಗುತ್ತದೆ,ನಿಮ್ಮ ಮೇಲೆ ಭರವಸೆ ಇಟ್ಟುಕೊಳ್ಳಿ..!’ಅಂದು ಕಸ ಸಂಗ್ರಹ,ಇಂದು ಲಕ್ಷಾಂತರ ರೂ.ಗಳಿಸುವ ಖ್ಯಾತ ನಟಿ..!ಇವರು ಅಷ್ಟು ಎತ್ತರಕ್ಕೆ ಬೆಳೆದಿದ್ದೇಗೆ?

33
Spread the love

ನ್ಯೂಸ್‌ ನಾಟೌಟ್‌ : ಮನುಷ್ಯ ಸ್ವಾರ್ಥ ಜೀವಿ.ಈ ಪ್ರಪಂಚದಲ್ಲಿ ಅವಕಾಶವನ್ನು ಕೊಡುವವರ ಸಂಖ್ಯೆಯೇ ವಿರಳ.ತಾನೊಬ್ಬ ಬೆಳೆದ್ರೆ ಸಾಕು.ಇನ್ನೊಬ್ಬನಿಗೆ ಅವಕಾಶ ಕೊಟ್ರೆ ಎಲ್ಲಿ ಆತ ನಮ್ಮನ್ನು ಮೀರಿಸಿ ಬೆಳೆಯುತ್ತಾನೋ ಅನ್ನುವ ಸಣ್ಣ ಸ್ವಾರ್ಥ ಭಾವನೆ ಕೆಲವರಲ್ಲಿದೆ.ಆದರೆ ದೇವರು ಮನಸ್ಸು ಮಾಡಿದ್ರೆ ಕಸ ಸಂಗ್ರಹ ಮಾಡುವವಳು ಕೂಡ ಖ್ಯಾತ ನಟಿಯಾಗ್ತಾಳೆ ಅನ್ನೋದಕ್ಕೆ ಈ ನಟಿಯೇ ಸಾಕ್ಷಿ .. ಬನ್ನಿ ಅವರ್ಯಾರು ಅನ್ನೋದನ್ನು ತಿಳಿದು ಕೊಳ್ಳೋಣ ..

ಒಂದು ಸಮಯದಲ್ಲಿ ಒಂದು ರೂಪಾಯಿಗೂ ಪರದಾಡುತ್ತಿದ್ದ ನಟಿ ದಿವ್ಯಾಂಕಾ ತ್ರಿಪಾಠಿ ಇಂದು ಕಿರುತೆರೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್‌ ನಟಿಯರಲ್ಲಿ ಒಬ್ಬರು.ಬಾಲಿವುಡ್ ಬಬಲ್‌ಗೆ ನೀಡಿದ ಸಂದರ್ಶನದಲ್ಲಿ ನಟಿ ದಿವ್ಯಾಂಕಾ ತ್ರಿಪಾಠಿ ತಮ್ಮ ಕಷ್ಟದ ದಿನಗಳನ್ನು ನೆನೆದುಕೊಂಡು ಬೇಸರ ವ್ಯಕ್ತ ಪಡಿಸಿದ್ದಾರೆ. ಬಿಲ್‌ ಮತ್ತು ಇಎಂಐ ಪಾವತಿಸಲು ಕಷ್ಟಪಡುತ್ತಿದ್ದ ಆ ದಿನಗಳ ಬಗ್ಗೆ ಮಾತನಾಡಿದ್ದಾರೆ. ಯಾವುದೂ ಶಾಶ್ವತವಲ್ಲ. ಕಾಲ ಬದಲಾಗುತ್ತದೆ. ನಿಮ್ಮ ಮೇಲೆ ನೀವು ಭರವಸೆ ಇಟ್ಟುಕೊಳ್ಳಬೇಕು. ಒಂದು ಕಾಲವಿತ್ತು. ನಾನು ನನ್ನ ನಾಯಿಯನ್ನು ನೋಡಿಕೊಳ್ಳಲು ಸಹ ಕಷ್ಟಪಡಬೇಕಿತ್ತು.  

ಒಂದು ರೂಪಾಯಿ ಉಳಿಸಲು ಸಹ ಪರದಾಡುತ್ತಿದ್ದೆ. ಕಸ ಸಂಗ್ರಹಿಸುತ್ತಿದ್ದೆ. ಟೂತ್‌ಪೇಸ್ಟ್ ಬಾಕ್ಸ್‌ ಕೂಡ ಸಂಗ್ರಹಿಸಿದ್ದೆ. ಅದನ್ನು ಎಲ್ಲೋ ಭದ್ರವಾಗಿ ಇಟ್ಟುಕೊಂಡು ಆ ಸ್ಕಾರ್ಪ್ ಮಾರಿ ಹಣ ಪಡೆಯುತ್ತಿದ್ದೆ. ನಿಮ್ಮ ಮೆದುಳು ಕೆಲಸ ಮಾಡಬೇಕು. ಹಣ ಸಂಪಾದಿಸಲು ಮಾರ್ಗಗಳನ್ನು ನೀವು ಕಂಡುಕೊಳ್ಳಬೇಕು ಎಂದಿದ್ದಾರೆ. ಯೇ ಹೈ ಮೊಹಬ್ಬತೇ ಸೀರಿಯಲ್‌ ಮೂಲಕ ಯಶಸ್ಸು ಗಳಿಸಿದ ನಂತರ, ದಿವ್ಯಾಂಕ ಅತಿ ಹೆಚ್ಚು ಸಂಭಾವನೆ ಪಡೆಯುವ ಟಿವಿ ನಟಿಯರಲ್ಲಿ ಒಬ್ಬರಾದರು. ವರದಿ ಪ್ರಕಾರ, ನಟಿ ದಿವ್ಯಾಂಕ ಪ್ರತಿ ಸಂಚಿಕೆಗೆ 1 ರಿಂದ 1.5 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ. 

See also  ಎದೆಯೆತ್ತರಕ್ಕೆ ಬೆಳೆದ ಮಗನ ಎದುರೇ ಹನಿಮೂನ್ ಗೆ ಹೊರಟ ಖ್ಯಾತ ನಟ..! 33 ವರ್ಷದ ಬ್ಯೂಟಿ ಜೊತೆಗೆ 57 ವರ್ಷದ ನಟನ ಹನಿಮೂನ್ ಬಗ್ಗೆ ನೆಟ್ಟಿಗರು ಹೇಳಿದ್ದೇನು?
  Ad Widget   Ad Widget   Ad Widget