ಕರಾವಳಿಕ್ರೈಂದೇಶ-ವಿದೇಶವೈರಲ್ ನ್ಯೂಸ್ಸಿನಿಮಾ

ದರ್ಶನ್‌ ನನ್ನು ಬಂಧಿಸಿದ್ದಕ್ಕೆ ಪೊಲೀಸರಿಗೆ ಧನ್ಯವಾದ ಹೇಳಿದ ನಟಿ ರಮ್ಯಾ..! ಕಳೆದ ಚುನಾವಣೆಯಲ್ಲಿ ಒಂದೆರಡು ಅಭ್ಯರ್ಥಿಗಳ ಪರ ದರ್ಶನ್ ಪ್ರಚಾರ ಮಾಡಿದ್ದರು, ಅವರೆಲ್ಲರೂ ಸೋತಿದ್ದಾರೆ ಎಂದ ನಟಿ..!

265

ನ್ಯೂಸ್ ನಾಟೌಟ್: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ ಮತ್ತು ಅವರ ಅಭಿಮಾನಿಗಳ ವಿರುದ್ಧ ನಟಿ ರಮ್ಯಾ ಮತ್ತೆ – ಮತ್ತೆ ಕಿಡಿ ಕಾರುತ್ತಿದ್ದಾರೆ. ದರ್ಶನ್‌ ಗೆ ದೊಡ್ಡ ಅಭಿಮಾನಿಗಳ ಬಳಗವಿದೆ ಎಂಬಂತೆ ಬಿಂಬಿಸಲಾಗಿದೆ ವಿನಃ ಅದು ನಿಜವಲ್ಲ ಎಂದು ನಟಿ ರಮ್ಯಾ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ರಮ್ಯಾ, ‘ಆತನಿಗೆ ಸಿಕ್ಕಿರುವ ಜನಪ್ರಿಯತೆ ನೆತ್ತಿಗೇರಿದೆ. ಪದೇ ಪದೇ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವುದು ಸಾಮಾನ್ಯ ಎಂಬಂತಾಗಿದೆ’ ಎಂದಿದ್ದಾರೆ.

‘ಹಿಂದೆಯೂ ಅವರು ತಪ್ಪು ಮಾಡಿದ್ದರು. ಆದರೆ, ಪದೇ ಪದೇ ಇಂತಹ ತಪ್ಪುಗಳನ್ನು ಮಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ’ ಎಂದು ಹೇಳಿದ್ದಾರೆ. ದರ್ಶನ್ ಅಭಿಮಾನಿ ಬಳಗದ ಬಗ್ಗೆ ಮಾತನಾಡಿದ ರಮ್ಯಾ, ‘ಕಳೆದ ಚುನಾವಣೆಯಲ್ಲಿ ಒಂದೆರಡು ಅಭ್ಯರ್ಥಿಗಳ ಪರ ದರ್ಶನ್ ಪ್ರಚಾರ ಮಾಡಿದ್ದರು, ಅವರೆಲ್ಲರೂ ಚುನಾವಣೆಯಲ್ಲಿ ಸೋತಿದ್ದರು. ದರ್ಶನ್ ಅಭಿಮಾನಿಗಳ ಬಳಗದ ಕುರಿತಂತೆ ಹೈಪ್ ಮಾಡಲಾಗುತ್ತಿದೆ. ಪೊಲೀಸ್ ಠಾಣೆಯ ಮುಂದೆ ಜನ ನಿಂತಿದ್ದಾರೆ ಎಂದ ಮಾತ್ರಕ್ಕೆ ಆತ ಅಷ್ಟು ಪ್ರಭಾವ ಹೊಂದಿದ್ದಾನೆ ಎಂದು ಹೇಳಲು ಆಗುವುದಿಲ್ಲ’ ಎಂದು ಹೇಳಿದ್ದಾರೆ.(Darshan Thoogudeepa)

‘ದರ್ಶನ್‌ ಸುತ್ತಮುತ್ತ ಇರುವವರಲ್ಲಿ ಹೆಚ್ಚಿನವರು ನಟೋರಿಯಸ್‌ ರೌಡಿಗಳ ಗುಣಗಳನ್ನು ಹೊಂದಿದ್ದು, ಅದರಿಂದಲೇ ದರ್ಶನ್ ಗಮನ ಸೆಳೆಯುತ್ತಿದ್ದಾರೆ’ ಎಂದರು. ಇದಕ್ಕೂ ಮುನ್ನ ದರ್ಶನ್ ಬಂಧನಕ್ಕೆ ಸಂಬಂಧಿಸಿದಂತೆ ಎಕ್ಸ್‌ ಪೋಸ್ಟ್‌ ವೊಂದನ್ನು ಹಂಚಿಕೊಂಡಿರುವ ರಮ್ಯಾ, ಕರ್ನಾಟಕ ಪೊಲೀಸರಿಗೆ ಧನ್ಯವಾದ ಹೇಳಿದ್ದಾರೆ.

Click 👇

https://newsnotout.com/2024/06/film-chember-issue-banning-darshan-and-visiting
https://newsnotout.com/2024/06/darshan-and-gang-issue-today-future-decisions-have-been-decided
https://newsnotout.com/2024/06/darshan-mb-patil-kannada-news-agriculture-department
See also  ಸುಬ್ರಹ್ಮಣ್ಯ:ಕುಮಾರಧಾರ ನದಿಯಲ್ಲಿ ಮಹಿಳೆಯ ಮೃತದೇಹ ಪತ್ತೆ ಪ್ರಕರಣ;ಮೂರು ದಿನಗಳ ಹಿಂದೆ ಹಾಸನದಿಂದ ನಾಪತ್ತೆಯಾಗಿದ್ದ ಮಹಿಳೆ!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget