ಕ್ರೈಂವೈರಲ್ ನ್ಯೂಸ್

ಡಿವೋರ್ಸ್‌ ಬೇಕೆಂದು ಕೇಳಿದ ಹೆಂಡತಿ ವಿರುದ್ಧ ವಿಚಿತ್ರ ರೀತಿಯಲ್ಲಿ ಸೇಡು ತೀರಿಸಿಕೊಂಡ ಪತಿ..! ಪೊಲೀಸ್‌ ಠಾಣೆ ಮೆಟ್ಟಿಲೇರಿದ ಪತ್ನಿ..!

1k
Representative image

ನ್ಯೂಸ್‌ ನಾಟೌಟ್: ಇಲ್ಲೊಬ್ಬ ವ್ಯಕ್ತಿ ಬೇಕು ಬೇಕಂತಲೇ ವಾಹನವನ್ನು ಅಡ್ಡಾದಿಡ್ಡಿ ಓಡಿಸುವ ಮೂಲಕ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿದ್ದಾನೆ. ಜಗಳವಾಡಿ ತಾಯಿ ಮನೆ ಸೇರಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದ ಹೆಂಡತಿಯ ವಿರುದ್ಧ ಸೇಡು ತೀರಿಸಲು ಆತ ಈ ರೀತಿ ಮಾಡಿದ್ದಾನೆ ಎನ್ನಲಾಗಿದೆ.

ಹೆಂಡತಿ ಹೆಸರಲ್ಲಿ ನೋಂದಾಯಿಸಲಾದ ದ್ವಿಚಕ್ರ ವಾಹನವನ್ನು ಬೇಕಂತಲೇ ಅಡ್ಡಾದಿಡ್ಡಿ ಓಡಿಸಿ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡುವ ಮೂಲಕ ಆಕೆಯ ಕೈಯಿಂದಲೇ ಫೈನ್‌ ಕಟ್ಟುವಂತೆ ಮಾಡಿ ಸೇಡು ತೀರಿಸಿಕೊಂಡಿದ್ದಾನೆ.

ಈ ಘಟನೆ ಬಿಹಾರದಲ್ಲಿ ನಡೆದಿದ್ದು, ಇಲ್ಲಿನ ಮುಜಫರ್‌ ಪುರದ ಮಹಿಳೆಯೊಬ್ಬರು ತಾನು ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡದಿದ್ದರೂ ಪದೇ ಪದೇ ಇ-ಚಲನ್‌ ಸ್ವೀಕರಿಸುತ್ತಿದ್ದರು. ನಂತರ ಇದೆಲ್ಲಾ ಗಂಡ ಕಿತಾಪತಿಯೆಂದು ತಿಳಿದು ಮಹಿಳೆ ಫುಲ್‌ ಶಾಕ್‌ ಆಗಿದ್ದಾರೆ. ಇತ್ತೀಚಿಗಷ್ಟೇ ಮದುವೆಯಾಗಿದ್ದ ಇವರಿಬ್ಬರ ಮಧ್ಯೆ ಜಗಳ ಏರ್ಪಟ್ಟಿದ್ದು, ಈ ಜಗಳ ಅತಿರೇಕಕ್ಕೆ ತಿರುಗಿ ಮಹಿಳೆ ಗಂಡನ ಮನೆ ಬಿಟ್ಟು ತಾಯಿ ಮನೆಗೆ ಹೋಗಿದ್ದಾರೆ. ಜೊತೆಗೆ ಡಿವೋರ್ಸ್‌ಗೂ ಕೂಡಾ ಅರ್ಜಿ ಸಲ್ಲಿಸಿದ್ದರು.

ಇದಕ್ಕೆ ಹೆಂಡತಿಯ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂದು ಪತ್ನಿಯ ಹೆಸರಿನಲ್ಲಿ ನೋಂದಾಯಿಸಲಾದ ದ್ವಿಚಕ್ರ ವಾಹನದಲ್ಲಿ ಓಡಾಡುತ್ತಾ ಉದ್ದೇಶಪೂರ್ವಕವಾಗಿ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿದ್ದಾನೆ. ಅನೇಕ ಸಲ ಮಹಿಳೆ ತಾನೇ ಫೈನ್‌ ಕಟ್ಟಿದ್ದು, ನಂತರ ಗಂಡನ ಕಿತಾಪತಿ ತಾಳಲಾರದೆ ವಾಹನವನ್ನು ಹಿಂತಿರುಗಿಸುವಂತೆ ಗಂಡನ ಬಳಿ ಕೇಳಿಕೊಂಡಿದ್ದಾರೆ. ಡಿವೋರ್ಸ್‌ ಸಿಗುವವರೆಗೆ ಸ್ಕೂಟಿ ಹಿಂತಿರುಗಿಸುವುದಿಲ್ಲ ಎಂದು ಆತ ಹೇಳಿದ್ದು, ಬಳಿಕ ಮಹಿಳೆ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಾರೆ. ಸದ್ಯ ಈ ವಿಚಿತ್ರ ಕೇಸ್‌ ಬಗ್ಗೆ ತನಿಖೆ ನಡೆಯುತ್ತಿದೆ, ಸ್ಕೂಟಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Click

ಅಕ್ರಮ ಮರುಳುಗಾರಿಕೆ ತಡೆಯಲು ಹೋದ ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾಂಗ್ರೆಸ್​ ಶಾಸಕನ ಪುತ್ರ..! ಅಶ್ಲೀಲವಾಗಿ ಬೈದಿರುವ ವಿಡಿಯೋ ವೈರಲ್

ಶಾಲಾ ಬೀಳ್ಕೊಡುಗೆ ನೆಪದಲ್ಲಿ ಐಷಾರಾಮಿ ಕಾರುಗಳಲ್ಲಿ 12ನೇ ತರಗತಿ ವಿದ್ಯಾರ್ಥಿಗಳ ಸ್ಟಂಟ್..! 26 ಕಾರುಗಳ ಪೈಕಿ 12 ಕಾರುಗಳನ್ನು ವಶಕ್ಕೆ..!

ಸಂಜಯ್ ದತ್ ಹೆಸರಿಗೆ 72 ಕೋಟಿ ರೂ. ಆಸ್ತಿ ಬರೆದಿದ್ದ ಅಭಿಮಾನಿ..! ಮತ್ತೊಂದು ಕನ್ನಡ ಸಿನಿಮಾದಲ್ಲಿ ನಟಿಸಲಿರುವ ಬಾಲಿವುಡ್ ನಟ

ದಟ್ಟಣೆಯಲ್ಲಿ ರೈಲು ಹತ್ತಲು ಸಾಧ್ಯವಾಗದ್ದಕ್ಕೆ ಎಸಿ ಬೋಗಿಗಳನ್ನು ಧ್ವಂಸಗೊಳಿಸಿದ ಜನ..! ಇಲ್ಲಿದೆ ವೈರಲ್ ವಿಡಿಯೋ

ಬಿಜೆಪಿಯಿಂದ ದೆಹಲಿ ಗದ್ದುಗೆಗೆ ಮಹಿಳಾ ಮುಖ್ಯಮಂತ್ರಿ..! 2 ಉಪಮುಖ್ಯಮಂತ್ರಿ ಹುದ್ದೆ..?

See also  ಕೋಟಿ-ಚೆನ್ನಯ್ಯ ನೇಮೋತ್ಸವದ 'ಕೋಟಿ' ಪಾತ್ರಿ ನಿಗೂಢ ಸಾವಿನ ಹಿಂದಿನ ರಹಸ್ಯವೇನು..? ಅಡ್ಡೂರು ಸೇತುವೆ ಬಳಿ ಆಟೋ ಸ್ಟಾರ್ಟ್ ಆಗಿಯೇ ನಿಂತುಕೊಂಡಿದ್ದೇಕೆ..?
  Ad Widget   Ad Widget   Ad Widget   Ad Widget   Ad Widget   Ad Widget