ಕರಾವಳಿ

ಬೆಂಬಿಡದೆ ಸುರಿಯುತ್ತಿರುವ ಮಳೆ ,ಮನೆಯೊಳಗೆ ನುಗ್ಗಿದ ಚರಂಡಿ ನೀರು!

ನ್ಯೂಸ್ ನಾಟೌಟ್ : ರಾಜ್ಯದ ಹಲವೆಡೆ ಬಾರಿ ಮಳೆ ಸುರಿಯುತ್ತಿದೆ.ಈ ಹಿನ್ನಲೆ ಕೆಲವು ಕಡೆ ಹಾನಿಯಾಗಿರುವ ಘಟನೆ ವರದಿಯಾಗಿದ್ದು,ಪ್ರಾಣ ಹಾನಿಯೂ ಸಂಭವಿಸಿದೆ.ಈ ಬೆನ್ನಲ್ಲೇ ಇದೀಗ ಹಲವು ಕಡೆ ಮಳೆ ನೀರು ನುಗ್ಗಿರುವ ಘಟನೆ ಬಗ್ಗೆ ವರದಿಗಳಾಗಿವೆ.

ಹೌದು,ಉಡುಪಿಜಿಲ್ಲೆಯ ಮೂಡುಬೆಳ್ಳೆಯಲ್ಲಿನ ಸುಬ್ರಮಣ್ಯ ರಾಜ್ಯ ಹೆದ್ದಾರಿಯ ಕಾಮಗಾರಿ ನಡೆದಿದ್ದು ಈ ವೇಳೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆ ಬದಿಯ ಮನೆಗಳಿಗೆ ನುಗ್ಗಿ ಭಾರಿ ಆವಾಂತರವೇ ಸೃಷ್ಟಿಯಾಗಿದೆ.ಕೃತಕ ನೆರೆ ಉಂಟಾಗಿದ್ದು,ಆ ಮನೆ ಮಂದಿ ಪರದಾಟ ನಡೆಸುವ ಪರಿಸ್ಥಿತಿ ಉಂಟಾಗಿದೆ.

ಈ ವೇಳೆ ಸ್ಥಳೀಯರು ಆ ಕುಟುಂಬದ ನೆರವಿಗೆ ಧಾವಿಸಿದರು.ಜೆಸಿಬಿ ಮೂಲಕ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿ ಕೊಟ್ಟರು. ಇದೀಗ ಚರಂಡಿ ನಿರ್ಮಿಸದೆ ಹೆದ್ದಾರಿ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

Related posts

ಅಭಿವೃದ್ಧಿ ಕಾರ್ಯವೇ ಶ್ರೀರಕ್ಷೆ

ಮತ ಚಲಾವಣೆ ಸಮಯ ಹೆಚ್ಚಳಗೊಳಿಸಿದ ಆಯೋಗ

ಕ್ರೈಸ್ತ ಮಹಿಳೆ ಹಿಂದೂ ದೇಗುಲದ ಅರ್ಚಕಿಯಾಗಿದ್ದೇಗೆ..? ಮತಾಂತರವಾಗದಿದ್ದರೂ ದೇಗುಲದಲ್ಲಿ ಪೂಜೆ ಮಾಡುತ್ತಿರುವ ಈ ಮಹಿಳೆ ಯಾರು? ಯಾವುದು ಆ ದೇಗುಲ?