ಕೊಡಗು

ಮಡಿಕೇರಿಯಲ್ಲಿ ಮತ್ತೆ ಕಾಡಾನೆಗಳ ಅಟ್ಟಹಾಸ,ಮಹಿಳೆ ಮೇಲೆ ದಾಳಿ ಮಾಡಿ ತುಳಿದು ಪ್ರಾಣ ತೆಗೆದ ಸಲಗ

ನ್ಯೂಸ್ ನಾಟೌಟ್:ಮಡಿಕೇರಿ ಭಾಗದಲ್ಲಿ ಕಾಡಾನೆಗಳ ಅಟ್ಟಹಾಸ ಮುಂದುವರಿದಿದೆ.ಪ್ರತಿನಿತ್ಯವೂ ಜೀವಭಯದಲ್ಲೇ ಜೀವನ ಸಾಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಇದರ ಮಧ್ಯೆ ಮಹಿಳೆಯೊಬ್ಬರು ವಾಯು ವಿಹಾರ ಮಾಡುತ್ತಿದ್ದ ವೇಳೆ ಕಾಡಾನೆ ದಾಳಿಗೆ ತುತ್ತಾಗಿ ದಾರುಣವಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.  

ದಾಳಿ ಮಾಡಿದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.ಈ ಘಟನೆ ಮಡಿಕೇರಿ ಸಮೀಪದ ಸಿದ್ದಾಪುರ ಸಮೀಪ ಮಾಲ್ತಾರೆ ಮಟ್ಟಂ ಎಂಬಲ್ಲಿ ಆ.21ರ ಸೋಮವಾರ ಬೆಳಗ್ಗಿನ ವೇಳೆ ನಡೆದಿದೆ.ಐಶಾ(62) ಕಾಡಾನೆ ದಾಳಿಗೆ ಬಲಿಯಾದ ದುರ್ದೈವಿ ಎಂದು ಗುರುತಿಸಲಾಗಿದೆ.

ಘಟನೆಯನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು,ನಿರಂತರ ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ.ಇದಕ್ಕೆ ಏನಾದರೂ ಪರಿಹಾರ ಕಂಡುಕೊಳ್ಳದೇ ಇದ್ದಲ್ಲಿ ಸುಮ್ಮನಿರಲಾರೆವು.ಕೂಡಲೇ ಇದಕ್ಕೆ ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ವಾತಾವರಣ ಮಾಡಿಕೊಡಬೇಕೆಂದು ಹಾಗೂ ಕೂಡಲೇ ಸ್ಥಳಕ್ಕೆ ಅರಣ್ಯ ಸಚಿವರು ಆಗಮಿಸಬೇಕೆಂದು ಒತ್ತಾಯಿಸಿದರು.

Related posts

ಕೊಡಗು: ಮರಿಯೊಂದಿಗಿದ್ದ ಕಾಡಾನೆಯಿಂದ ಕ್ಯಾಂಟೀನ್ ಮೇಲೆ ದಾಳಿ..! ಕ್ಯಾಂಟೀನ್ ನಡೆಸುತ್ತಿದ್ದ ದಂಪತಿ ಕೂದಲೆಳೆ ಅಂತರದಲ್ಲಿ ಪಾರು..!

ಕೊಡಗು ಸಂಪಾಜೆಗೆ ಸಂಸದ ಪ್ರತಾಪ್ ಸಿಂಹ ಭೇಟಿ

ಗೆದ್ದ ಬಳಿಕ ಬಜರಂಗದಳ ಬ್ಯಾನ್ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು? ಬ್ಯಾನ್ ಕುರಿತು ಸುಳಿವು ನೀಡಿದರಾ ಕಾಂಗ್ರೆಸ್ ನಾಯಕ..!