ಕರಾವಳಿಕೊಡಗು

ಕೆಲಸಕ್ಕಿದ್ದ ಮನೆಯಿಂದಲೇ ಚಿನ್ನಾಭರಣ ಕಳವು!,ಕನ್ನ ಹಾಕಿದ ಮಹಿಳೆಯ ಬಂಧನ..?!

ನ್ಯೂಸ್ ನಾಟೌಟ್: ತಾನು ಕೆಲಸಕ್ಕಿದ್ದ ಮನೆಯಿಂದಲೇ ಚಿನ್ನ ಎಗರಿಸಿದ ಆರೋಪದಡಿ ಓರ್ವ ಮಹಿಳೆಯನ್ನು ಬಂಧಿಸಿರುವ ಘಟನೆ ಮಡಿಕೇರಿಯಿಂದ ವರದಿಯಾಗಿದೆ.ಮಹಿಳೆಯನ್ನು ಸೋಮವಾರಪೇಟೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಕರ್ಕಳ್ಳಿ ಗ್ರಾಮದ ನಿವಾಸಿ ಜಯಂತಿ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಕಳೆದ ಕೆಲ ಸಮಯಗಳಿಂದ ಈ ಮಹಿಳೆ ಸೋಮವಾರಪೇಟೆ‌ ಜೂನಿಯರ್‌ ಕಾಲೇಜು ರಸ್ತೆಯ ಕೆ. ರಾಜೀವನ್‌ ಅವರ ಮನೆ ಕೆಲಸ ಮಾಡುತ್ತಿದ್ದ ರು ಎನ್ನಲಾಗಿದೆ.ಈ ವೇಳೆ ಕಳ್ಳತನ ಮಾಡಿದ್ದಾರೆನ್ನುವ ಅನುಮಾನ ವ್ಯಕ್ತವಾಗಿದೆ.

ಸದ್ಯ ಈ ಮಹಿಳೆಯಿಂದ 120 ಗ್ರಾಂನಷ್ಟು ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.ಈ ಕುರಿತು ಮನೆ ಮಾಲಕರು ಪೊಲೀಸ್ ದೂರು ನೀಡಿದ್ದು,ಅನುಮಾನದ ಹಿನ್ನಲೆ ಮಹಿಳೆಯನ್ನು ವಿಚಾರಿಸಿದಾಗ ಆಕೆ ಚಿನ್ನಾಭರಣ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ.

ಆರೋಪಿ ಜಯಂತಿಯನ್ನು ಪೊಲೀಸರು ಬಂಧಿಸಿದ್ದಾರೆ.ಕೆಲವೊಂದು ಆಭರಣವನ್ನು ಮಾರಾಟ ಮಾಡಲಾಗಿದ್ದು,ಮಾರಾಟವಾಗಿದ್ದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ರಾಮರಾಜನ್‌, ಎಎಸ್‌ಪಿ ಸುಂದರ್‌ ರಾಜ್‌ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್‌ಪಿ ಗಂಗಾಧರಪ್ಪ ನೇತೃತ್ವದಲ್ಲಿ, ಇನ್‌ಸ್ಪೆಕ್ಟರ್‌ ರಾಮಚಂದ್ರ ನಾಯಕ್‌, ಪಿಎಸ್‌ಐಗಳಾದ ರಮೇಶ್‌, ವಿರೂಪಾಕ್ಷ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Related posts

20 ನಿಮಿಷ, 5 ವಿಶ್ವ ದಾಖಲೆ, ನೆಲ್ಯಾಡಿಯ ಯುವ ಕಲಾವಿದನ ಭರ್ಜರಿ ಸಾಧನೆ

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿದ ಕಾರು ಧರೆಗೆ ಡಿಕ್ಕಿ, ಪುತ್ತೂರು ಮೂಲದ ವಿದ್ಯಾರ್ಥಿನಿ ಧಾರುಣ ಸಾವು !

ಪುತ್ತೂರಿನಲ್ಲಿಯೂ ಸಿಗಲಿದೆ ನ್ಯೂ ಚೆನ್ನೈ ಶಾಪಿಂಗ್ , ಮನಕ್ಕೊಪ್ಪುವ ಬಟ್ಟೆಗಳನ್ನು ಅಗ್ಗದ ದರಕ್ಕೆ ಪಡೆಯಿರಿ