ನ್ಯೂಸ್ ನಾಟೌಟ್: ಕಾಫಿ ಕೊಯ್ಲು ಸಂದರ್ಭ ಹೆಜ್ಜೇನು ದಾಳಿಗೊಳಗಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ವಿರಾಜಪೇಟೆ ತಾಲೂಕಿನ ಪೂದ್ದುಮಾನಿ ಗ್ರಾಮದಲ್ಲಿ ನಡೆದಿದೆ.
ಎಚ್.ಸಿ. ಲೋಹಿತ್ (32) ಮೃತಪಟ್ಟ ಕಾರ್ಮಿಕ ಎಂದು ತಿಳಿದು ಬಂದಿದೆ. ಲೋಹಿತ್ ಎನ್ನುವವವರು ಸೋಮವಾರದಿಂದ ನಾಪತ್ತೆಯಾಗಿದ್ದರು.ಈ ವಿಷಯ ತಿಳಿದು ಎಲ್ಲೆಡೆ ಹುಡುಕಾಟ ಆರಂಭಗೊಂಡಿತು.ಬಳಿಕ ಕಾಫಿ ತೋಟಕ್ಕೆ ಹೋಗಿ ನೋಡಿದಾಗ ಮಂಗಳವಾರ ಕಾಫಿ ತೋಟದಲ್ಲಿ ಮೃತ ದೇಹ ಪತ್ತೆಯಾಗಿದೆ.
ಈ ಘಟನೆ ಕುರಿತು ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.