ಬೆಂಗಳೂರು

Bengaluru:ಬರೋಬ್ಬರಿ 44 ಸ್ಕೂಟಿಗಳನ್ನು ಕದ್ದು ಮಾರಾಟ ಮಾಡಿದ ಅಪ್ರಾಪ್ತ ಬಾಲಕರು..! ಸ್ಕೂಟಿಗಳನ್ನೇ ಇವರು ಟಾರ್ಗೆಟ್ ಮಾಡಿದ್ಯಾಕೆ..?

ನ್ಯೂಸ್ ನಾಟೌಟ್ : ಓದಿ ವಿದ್ಯಾವಂತರಾಗಿ ಸುಂದರ ಭವಿಷ್ಯ ಕಟ್ಟಿಕೊಳ್ಳಬೇಕಾಗಿದ್ದ ೧೬ ವರ್ಷದ ಬಾಲಕರೇ ಬರೋಬ್ಬರಿ ೪೪ ಸ್ಕೂಟಿಗಳನ್ನು ಕದ್ದು ಕಳ್ಳರು ಎನಿಸಿಕೊಂಡಿರುವ ಘಟನೆ ಬೆಂಗಳೂರಿನಿಂದ ವರದಿಯಾಗಿದೆ.ಇದೀಗ ಇಬ್ಬರು ಬಾಲಕರು ಒಂದೂವರೆ ವರ್ಷದ ಬಳಿಕ ಜೆಪಿನಗರ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.

ಆಕ್ಟಿವಾ, ಆಕ್ಸಸ್‌, ಡಿಯೋ ಸ್ಕೂಟರ್‌ಗಳನ್ನೇ ಟಾರ್ಗೆಟ್‌ ಮಾಡಿಕೊಂಡು ನಗರಾದ್ಯಂತ ಇವುಗಳನ್ನು ಕದಿಯುತ್ತಿದ್ದರು ಎಂದು ತಿಳಿದು ಬಂದಿದೆ. ಹ್ಯಾಂಡ್‌ಲಾಕ್‌ ಮುರಿಯುವಷ್ಟು ಚಾಣಾಕ್ಷತೆಯನ್ನು ಹೊಂದಿದ್ದ ಇವರಿಂದ ಬರೊಬ್ಬರಿ 44 ದ್ವಿಚಕ್ರವಾಹನ ಜಪ್ತಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಕೆಆರ್‌ಪುರ ಹಾಗೂ ಬಿಟಿಎಂ ಲೇಔಟ್‌ನ 16 ವರ್ಷದ ಇಬ್ಬರು ಸಂಘರ್ಷಕ್ಕೊಳಗಾದ ಬಾಲಕರು ಸಿಕ್ಕಿ ಬಿದ್ದವರು. ಬಂಧಿತರಿಂದ 35 ಲಕ್ಷ ರೂ. ಮೌಲ್ಯದ 44 ಸ್ಕೂಟರ್‌ ಜಪ್ತಿ ಮಾಡಲಾಗಿದೆ.

Related posts

ಕಾಡು ಆನೆಗಳು ಸೂಕ್ಷ್ಮ, ಕೆಲವು ಸಲ ಮನುಷ್ಯ ಮುಟ್ಟಿದ್ರೂ ಮರಿಗಳನ್ನು ಸ್ವೀಕರಿಸಲ್ಲ..!

ಪಟ್ಟಣಗೆರೆ ಶೆಡ್​ ನಲ್ಲಿ ಕೊಲೆಗೂ ಮುನ್ನ ತೆಗೆದ ಫೋಟೋಗಳು ವೈರಲ್..! ಶೆಡ್ ​ನಲ್ಲಿ ಕೈ ಮುಗಿದು ಅಂಗಲಾಚುತ್ತಿರುವ ರೇಣುಕಾಸ್ವಾಮಿ..!

‘ಜಗ್ಗೇಶ್ ಚಪ್ಪಲಿಗೂ ನಾವು ಸಮ ಇಲ್ಲ’ಎಂದದ್ದೇಕೆ ಡ್ರೋನ್ ಪ್ರತಾಪ್ ತಂದೆ..? ತಂದೆ – ತಾಯಿಯ ನಂಬರ್ ಬ್ಲಾಕ್ ಮಾಡಿದ ಬಗ್ಗೆ ಪ್ರತಾಪ್ ತಂದೆ ಹೇಳಿದ್ದೇನು?