ಕರಾವಳಿಕೊಡಗು

ಹಿಟ್ಟಿನ ಗಿರಣಿ ಬೆಲ್ ಗೆ ಸಿಲುಕಿಕೊಂಡ ತಾಯಿ ತಲೆ: ಅಮ್ಮನನ್ನು ಬದುಕಿಸಿದ 9 ವರ್ಷದ ಮಗ ‘ರಾಷ್ಟ್ರೀಯ ಶೌರ್ಯ ಪ್ರಶಸ್ತಿ’ಗೆ ಆಯ್ಕೆ

452

ನ್ಯೂಸ್ ನಾಟೌಟ್: ಮಡಿಕೇರಿಯ 3ನೇ ತರಗತಿ ಬಾಲಕನೋರ್ವ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾನೆ.ಸಮಯ ಪ್ರಜ್ಞೆಯಿಂದ ತಾಯಿಯ ಪ್ರಾಣ ಉಳಿಸಿದ್ದೇ ಈ ಸಾಧನೆಗೆ ಕಾರಣವಾಯ್ತು.ಹೌದು,ತಾಯಿಯ ತಲೆಯು ಆಕಸ್ಮಿಕವಾಗಿ ಕಾರ್ಯಸ್ಥಿತಿಯಲ್ಲಿದ್ದ ಹಿಟ್ಟಿನ ಗಿರಣಿ ಬೆಲ್‌ಗೆ ಸಿಲುಕಿಕೊಂಡಾಗ ಸಮಯಪ್ರಜ್ಞೆ ಮೆರೆದು ತಾಯಿಯ ಪ್ರಾಣ ಕಾಪಾಡಿದ ಈ ಬಾಲಕ. ವಯಸ್ಸು ಕೇವಲ 9. ಹೆಸರು ದೀಕ್ಷಿತ್. ಈತ ಈ ಬಾರಿಯ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾನೆ. ಜನವರಿ 26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿದ್ದಾನೆ.

ಏನಿದು ಘಟನೆ?

ಬಾಲಕ ದೀಕ್ಷಿತ್ ಅವರ ತಾಯಿ ಅರ್ಪಿತಾ ಅವರು ಮಡಿಕೇರಿಯ ಕೂಡ್ಲೂರು ಗ್ರಾಮದ ಹಿಟ್ಟಿನ ಗಿರಣಿಯಲ್ಲಿ ಅಕ್ಕಿ ಪುಡಿ ಮಾಡಿಸುತ್ತಿದ್ದ ಸಂದರ್ಭ ಅವರ ತಲೆ ಆಕಸ್ಮಿಕವಾಗಿ ಗಿರಣಿಯ ಬೆಲ್‌ಗೆ ಸಿಲುಕಿಕೊಂಡಿದೆ. ಕೂಡಲೇ ಅವರು ಜೋರಾಗಿ ಕಿರುಚಿಕೊಂಡಿದ್ದಾರೆ. ಅಲ್ಲೇ ಆಟವಾಡುತ್ತಿದ್ದ ಬಾಲಕ ದೀಕ್ಷಿತ್‌ಗೆ ತಾಯಿಯ ಕೂಗು ಕೇಳಿ ಓಡಿ ಬಂದಿದ್ದಾನೆ. ಈ ವೇಳೆ ಅಪಾಯ ಅರಿತ ದೀಕ್ಷಿತ್ ಗಿರಣಿಗೆ ವಿದ್ಯುತ್ ಸರಬರಾಜಾಗುವ ಸ್ವಿಚ್‌ನ್ನು ಆಫ್ ಮಾಡಿದ್ದಾನೆ. ಬಾಲಕನ ಸಮಯಪ್ರಜ್ಞೆಯಿಂದಾಗಿ ತಾಯಿಯ ಪ್ರಾಣ ಉಳಿದಿತ್ತು.ಬಾಲಕನ ಈ ಕೆಲಸಕ್ಕೆ ಆತನನ್ನು 2022-23ನೇ ಸಾಲಿನ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಜನವರಿ 26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಸ್ವೀಕರಿಸಲಿದ್ದಾನೆ ಎಂದು ಪೋಷಕರು ತಿಳಿಸಿದ್ದಾರೆ. ದೀಕ್ಷಿತ್‌ ಕೂಡ್ಲೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿ ವಿದ್ಯಾರ್ಥಿ.

See also  ಮಡಿಕೇರಿ : ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಇಬ್ಬರು ಯುವಕರು ಮೃತ್ಯು,ಏನಿದು ಘಟನೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget