ಕರಾವಳಿಕೊಡಗು

ಮಡಿಕೇರಿ:’ಜೀವನದಾರಿ’ ವೃದ್ಧಾಶ್ರಕ್ಕೆ ಭೇಟಿ ನೀಡಿ ಧೈರ್ಯ ತುಂಬಿದ ಶಾಸಕ ಮಂತರ್‌ ಗೌಡ,ಸಮಾಜ ಸೇವಕ ರಮೇಶ್ ಮತ್ತು ರೂಪ ದಂಪತಿ ಭಾವಚಿತ್ರಕ್ಕೆ ಪುಷ್ಪಾರ್ಚನೆ

209

ನ್ಯೂಸ್ ನಾಟೌಟ್ : ಇತ್ತೀಚೆಗಷ್ಟೇ ಸಿಲಿಂಡರ್‌ ಸ್ಫೋಟಗೊಂಡು ದಂಪತಿ ಗಾಯಗೊಂಡಿದ್ದ ಘಟನೆಯೊಂದು ಕೊಡಗಿನ ಕುಶಾಲನಗರದಿಂದ ವರದಿಯಾಗಿತ್ತು. ಈ ದುರಂತದಲ್ಲಿ ಆಶ್ರಮ ಆರಂಭಿಸಿ, 36 ವೃದ್ಧರಿಗೆ ಆಶ್ರಯ ನೀಡಿದ್ದ ಆಶ್ರಯದಾತರಾದ ದಂಪತಿ ಚಿಕಿತ್ಸೆ ಫಲಕಾರಿಯಾಗದೇ ದುರಂತ ಅಂತ್ಯವನ್ನೇ ಕಂಡಿದ್ದರು.

ಇದೀಗ 7ನೇ ಹೊಸಕೋಟೆ ತೊಂಡೂರು ಗ್ರಾಮದಲ್ಲಿರುವ ವಿಕಾಸ್ ಜನಸೇವಾ ಟ್ರಸ್ಟ್‌ನ ಜೀವನದಾರಿ ಆಶ್ರಮಕ್ಕೆ ಶಾಸಕ ಮಂತರ್‌ ಗೌಡ ಭೇಟಿ ನೀಡಿದರು. ಈ ಸಂದರ್ಭದಲ್ಲಿ ವೃದ್ಧರ ಯೋಗಕ್ಷೇಮ ವಿಚಾರಿಸಿದರು.ದಿವಂಗತ ರಮೇಶ್ ಹಾಗೂ ರೂಪ ರಮೇಶ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಂತಾಪ ಸೂಚಿಸಿದರು.

ಬಳಿಕ ಮಾತನಾಡಿದ ಶಾಸಕರು “ನಿಮ್ಮನ್ನೆಲ್ಲಾ ರಮೇಶ್ ಅವರು ಪೋಷಿಸಿದಂತೆ ಅವರ ಅಣ್ಣ ಮಂಜುನಾಥ್ ಅವರು ನೋಡಿಕೊಳ್ಳಲು ಮುಂದಾಗಿದ್ದಾರೆ. ಅವರ ಸೇವೆಗೆ ವೈಯಕ್ತಿಕವಾಗಿ ಮತ್ತು ಸರ್ಕಾರದ ಕಡೆಯಿಂದಲೂ ಸಂಪೂರ್ಣ ಸಹಕಾರವನ್ನು ನೀಡಲಾಗುತ್ತದೆ” ಎಂದು ಭರವಸೆ ವ್ಯಕ್ತಪಡಿಸಿದರು.

ಇದೇ ಸಂದರ್ಭ ವಿಶೇಷಚೇತನ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಅಧಿಕಾರಿ ಮಂಜುನಾಥ್ ಅವರೊಂದಿಗೆ ಮಾತುಕತೆ ನಡೆಸಿ , ಅನುದಾನ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಒದಗಿಸಿಕೊಡಲು ಪ್ರಯತ್ನಿಸುವೆ ಎಂದು ಹೇಳುವ ಮೂಲಕ ಆಶ್ರಮದ ನಿವಾಸಿಗಳಿಗೆ ಧೈರ್ಯ ತುಂಬಿದರು. ತಿಂಗಳಿಗೆ 2 ಬಾರಿಯಾದರೂ ಆಶ್ರಮದ ಕಾರ್ಯಚಟುವಟಿಕೆಗಳ ಬಗ್ಗೆ ಗಮನಕ್ಕೆ ತನ್ನಿ.ಆಶ್ರಮಕ್ಕೆ ಬೇಕಾದ ಅವಶ್ಯಕವಾದ ಅಗತ್ಯತೆಗಳನ್ನು ಪೂರೈಸುವ ವ್ಯವಸ್ಥೆಗೆ ಸದಾ ಸಿದ್ಧ ಎಂದು ಹೇಳಿದರು.

ಈ ಸಂದರ್ಭ ದಿ. ರಮೇಶ್ ತಂದೆ ಕರಿಯಪ್ಪ ಅವರಿಗೆ ಸಾಂತ್ವನ ಹೇಳಿದ ಶಾಸಕರು ರಮೇಶ್ ಮಗಳ ಮುಂದಿನ ವಿದ್ಯಾಭ್ಯಾಸಕ್ಕೂ ಸಹಾಯ ಹಸ್ತ ನೀಡುವ ಬಗ್ಗೆ ಭರವಸೆ ನೀಡಿದರು.ಶಾಸಕರ ಜತೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ರಾಣಿ ಮಾಚಯ್ಯ, ಗ್ರಾ.ಪಂ.ಉಪಾಧ್ಯಕ್ಷೆ ಸೌಮ್ಯ ಸುನೀಲ್, ಸಿಬಿಆರ್ ಸಂಯೋಜಕ ಮುರುಗೇಶ್, ದಿ.ರಮೇಶ್ ತಂದೆ ಕರಿಯಪ್ಪ, ಪುತ್ರಿ ಐಶ್ವರ್ಯ, ಟ್ರಸ್ಟಿ ನವೀನ್ ಕುಮಾರ್, ಸಹೋದರಿ ರಂಗಮ್ಮ, ಆಶ್ರಮದ ಸಿಬ್ಬಂದಿ ಜಯಂತಿ, ಸ್ವಯಂ ಸೇವಕರಾದ ಶ್ರೀಜಾ, ಪೌಸಿಯ, ರಾಧ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

See also  ಮುಸ್ಲಿಂ ಸ್ನೇಹಿತನಿಗಾಗಿ ಧರ್ಮಸ್ಥಳದಲ್ಲಿ ತುಲಾಭಾರ ಹರಕೆ ಸಲ್ಲಿಸಿದ ಹಿಂದೂ..! ತಿರುಪತಿಗೂ ಒಟ್ಟಿಗೆ ಹೋಗಿ ಹರಕೆ ಸಲ್ಲಿಸಿದ್ದ ಬಗ್ಗೆ ಮುಸ್ಲಿಂ ಗೆಳೆಯ ಹೇಳಿದ್ದೇನು? ಏನಿದು ಪ್ರಾಣ ಸ್ನೇಹಿತರ ಕಥೆ?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget